ಸಾಹಿತಿ ನಿರ್ಮಲಾ ಸುರತ್ಕಲ್‌ರವರಿಗೆ ಬೋಳಂತಕೋಡಿ ಕನ್ನಡ ಪ್ರಶಸ್ತಿ ಪ್ರದಾನ – ಪುಸ್ತಕ ಅನಾವರಣ

Puttur_Advt_NewsUnder_1
Puttur_Advt_NewsUnder_1

bolanthakodi bolanthakodi1

ಮನೆ ಮಗಳನ್ನು ಪುತ್ತೂರಿಗೆ ಕರೆಸಿಕೊಂಡ ಸಂತೋಷ

* ಈಶ್ವರ ಭಟ್ಟರನ್ನು ಓದುವ ಪುಸ್ತಕವನ್ನಾಗಿ ತೆಗೆದು ಕೊಂಡಿದ್ದೇನೆ – ಎಂ.ಎಸ್. ರಘುನಾಥ ರಾವ್

* ಸುಸಂಸ್ಕೃತ ಪದ್ಯಗಳೇ ಮಕ್ಕಳ ಮಾರ್ಗದರ್ಶನಕ್ಕೆ ಸೂಕ್ತ – ಹಾಸ ಬ್ಯಾಕೋಡ

* ಬೋಳಂತಕೋಡಿಯವರ ಕನಸಿನ ಕೂಸನ್ನು ಇಂದೂ ನಡೆಸುತ್ತಿzವೆ – ಐತ್ತಪ್ಪ ನಾಯ್ಕ್

* ಕಷ್ಟದ ದಾರಿಯಲ್ಲೂ ಸಾಹಿತ್ಯದ ಮೂಲಕ ಪ್ರೀತಿ ಪಾತ್ರರಾದರು –  ಅರ್ತಿಕಜೆ

ಪುತ್ತೂರು: ಸಾಹಿತಿ ಬೋಳಂತಕೋಡಿ ಈಶ್ವರ ಭಟ್ ಅಭಿಮಾನಿ ಬಳಗದಿಂದ ಕೊಡಮಾಡುವ ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಮೂಲತಃ ನಿಡ್ಪಳ್ಳಿಯವರಾದ ಸಾಹಿತಿ ನಿರ್ಮಲಾ ಸುರತ್ಕಲ್‌ರವರಿಗೆ ಪ್ರದಾನ ಮಾಡಲಾಯಿತು. ಅ.24ರಂದು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ  ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಬಂದಿರುವುದು ಮನೆಮಗಳನ್ನು ಕರೆಸಿಕೊಂಡ ಸಂತೋಷ ಆಗಿದೆ:  ಬೋಳಂತಕೋಡಿ ಕನ್ನಡ ಪ್ರಶಸ್ತಿ ಸ್ವೀಕರಿಸಿದ ನಿಡ್ಪಳ್ಳಿಯ ನಿರ್ಮಲಾ ಸುರತ್ಕಲ್‌ರವರು ಮಾತನಾಡಿ ಪ್ರಶಸ್ತಿ ಬಂದಿರುವುದು ಪುತ್ತೂರಿಗೆ ಪುನಃ ಮನೆಮಗಳನ್ನು ಕರೆಸಿಕೊಂಡಂತಾಗಿರುವ ಸಂತೋಷ ತಂದಿದೆ ಇನ್ನು ಪುತ್ತೂರು ನನ್ನದಲ್ಲ ಎಂದು ಹೇಳುವ ಧೈರ್ಯವೂ ಇಲ್ಲ ಎಂದು ತನ್ನ ಹಿಂದಿನ ನೆನಪನ್ನು ಮೆಲುಕು ಹಾಕಿದರು. ಚಿಕ್ಕವಳಾಗಿದ್ದ ಸಮಯದಲ್ಲೇ ಅಮ್ಮನನ್ನು ಕಳೆದುಕೊಂಡೆ. ಅಂದಿನಿಂದ ನನಗೆ ಮೌನವೇ ದೊಡ್ಡ ಆಸ್ತಿಯಾಗಿತ್ತು. ಕಷ್ಟಪಟ್ಟು ಎಸ್.ಎಸ್.ಎಲ್.ಸಿ ಓದಿ ರ‍್ಯಾಂಕ್ ಪಡೆದೆ. ಆದರೆ ಕಾಲೇಜು ಹತ್ತಲು ಆಗಿಲ್ಲ. ಇದರಿಂದ ಭ್ರಮನಿರಸಳಾದ ನಾನು ಮುಂದೆ ಆಶ್ರಮ, ಎಸ್.ಟಿ.ಡಿ ಬೂತ್, ಟ್ರಾನ್ಸ್‌ಪೋರ್ಟ್ ಕಚೇರಿಯಲ್ಲಿ ಕೆಲಸ ಮಾಡಿ ಯೌವ್ವನ ಕಳೆದು ಸುಮಾರು ೫೨ ವರ್ಷ ಬದುಕಿದ್ದರೂ ಬದುಕದಂತೆ ಇದ್ದೆ. ಇಂತಹ ಸಂದರ್ಭದಲ್ಲಿ ಹರಿಕೃಷ್ಣ ಭಟ್‌ರವರು ನನ್ನ ಬರಹಗಳನ್ನು ನೋಡಿ ಪ್ರಕಟಿಸಿ ನನ್ನ ಪಾಲಿಗೆ ಭಗೀರಥರಾದರು. ಬಳಿಕ ಒಳ್ಳೆಯ ಬರಹಗಾರರ ಪರಿಚಯವಾಯಿತು. ಆತ್ಮವಿಶ್ವಾಸ ಹೆಚ್ಚಿತು. ಪ್ರಥಮ ಪುಸ್ತಕದಲ್ಲಿ ಬರಿ ನಿರ್ಮಳನಾಗಿದ್ದೆ. ಬಳಿಕ ಪುತ್ತೂರಿನ ಪ್ರೀತಿ ಕಾಣದ ನಾನು ನಿರ್ಮಲ ಸುರತ್ಕಲ್ ಆದೆ. ಆದರೆ ಇಂದು ಮತ್ತೆ ಪುತ್ತೂರಿನಲ್ಲಿ ಪ್ರಶಸ್ತಿ ಸ್ವೀಕರಿಸಿ ಪುತ್ತೂರಿನ ಮಗಳಾಗಿದ್ದೇನೆ ಎಂದರು.

ಈಶ್ವರ ಭಟ್ಟರನ್ನು ಓದುವ ಪುಸ್ತಕವನ್ನಾಗಿ ತೆಗೆದು ಕೊಂಡಿದ್ದೇನೆ: ಅಧ್ಯಕ್ಷತೆ ವಹಿಸಿದ ರಾಜೇಶ್ ಪವರ್ ಪ್ರೆಸ್ ಮಾಲಕ ಎಂ.ಎಸ್ ರಘುನಾಥ ರಾವ್‌ರವರು ಮಾತನಾಡಿ ಕಾನೂನು, ಸರಕಾರ ಎಷ್ಟರ ಮಟ್ಟಿಗೆ ಹದಗೆಟ್ಟಿಗೆ ಎಂಬುದನ್ನು ಬೋಳಂತಕೋಡಿ ಈಶ್ವರ ಭಟ್ಟರವರಿಗೆ ಅಂದೇ ತಿಳಿದಿದ್ದರಿಂದ ಅವರು ಕಾನೂನು ಸೇವೆಯಿಂದ ಹೊರಬಂದು ತನ್ನನ್ನು ತಾನು ಸಾಹಿತ್ಯ ಕೆಲಸದಲ್ಲಿ ತೊಡಗಿಸಿಕೊಂಡರು ಒಬ್ಬ ಪ್ರಕಾಶಕನ ಜವಾಬ್ದಾರಿ ಮಿತಿಗಳು, ಮುದ್ರಕ ಮತ್ತು ಲೇಖಕನ ನೇರ ಸಂಪರ್ಕ ಸಮಸ್ಯೆ ತೋರಿಸಿಕೊಟ್ಟ ಅವರು ನನಗೆ ಓದುವ ಪುಸ್ತಕವಾಗಿದ್ದಾರೆ ಎಂದರು.

ಸುಸಂಸ್ಕೃತ ಪದ್ಯಗಳೇ ಮಕ್ಕಳ ಮಾರ್ಗದರ್ಶನಕ್ಕೆ ಸೂಕ್ತ: ನಿರ್ಮಲಾ ಸುರತ್ಕಲ್ ರವರು ಬರೆದ ಆ ಆ ಇ ಈ ಊ ಪುಸ್ತಕ ಅನಾವರಣ ಮಾಡಿದ ಬೆಂಗಳೂರಿನ ಪಕ್ಷಿ ಛಾಯಾಚಿತ್ರಗ್ರಾಹಕ ಹಸ ಬ್ಯಾಕೋಡರವರು ಮಾತನಾಡಿ ನಾನ್‌ಸೆನ್ಸ್ ಪಠ್ಯಗಳು ನಾನ್‌ಸೆನ್ಸ್ ಮಕ್ಕಳನ್ನೇ ತಯಾರು ಮಾಡುತ್ತದೆ. ಸುಸಂಸ್ಕೃತ ಪಠ್ಯಗಳು ಉತ್ತಮ ಮಕ್ಕಳನ್ನೇ ತಯಾರು ಮಾಡುತ್ತವೆ. ಈ ನಿಟ್ಟಿನಲ್ಲಿ ನಿರ್ಮಲಾ ಸುರತ್ಕಲ್‌ರವರು ಬರೆದ ಸುಸಂಸ್ಕೃತ ಪದ್ಯಗಳು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬಲ್ಲದು ಎಂದರು.

ಬೋಳಂತಕೋಡಿಯವರ ಕನಸಿನ ಕೂಸನ್ನು ಇಂದೂ ನಡೆಸುತ್ತಿದ್ದೇವೆ:

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್‌ರವರು ಬೋಳಂತಕೋಡಿಯವರ ಒಡನಾಟದ ಕ್ಷಣವನ್ನು ನೆನಪಿಸಿಕೊಳ್ಳುತ್ತಾ ಶಿವರಾಮ ಕಾರಂತರು ಪುತ್ತೂರು ಬಿಟ್ಟು ಹೋದ ಮೇಲೆ ಕರ್ನಾಟಕ ಸಂಘದ ಪೂರ್ಣ ಜವಾಬ್ದಾರಿ ಹೊತ್ತ ಬೋಳಂತಕೋಡಿಯವರು ನಿರಂತರ ಕನ್ನಡ ಸಂಘವನ್ನು ನಡೆಸಿಕೊಂಡು ಬಂದರು. ಅವರ ಕನಸಿನ ಕೂಸಾದ ಸಾಹಿತ್ಯ ಸೌರಭವನ್ನು ಶಾಲಾ ಕಾಲೇಜಿನಲ್ಲಿ ಇಂದಿ ಕೂಡಾ ನಡೆಸಿ ಕೊಂಡು ಬರುತ್ತಿzವೆ ಎಂದರು.

ಕಷ್ಟದ ದಾರಿಯಲ್ಲೂ ಸಾಹಿತ್ಯದ ಮೂಲಕ ಪ್ರೀತಿ ಪಾತ್ರರಾದರು:

ವಿಶ್ರಾಂತ ಉಪನ್ಯಾಸಕ ಪ್ರೊ ವಿ.ಬಿ.ಅರ್ತಿಕಜೆಯವರು ಮಾತನಾಡಿ ಬಾಲ್ಯದಿಂದ ಹಿಡಿದು ಜೀವನದುದ್ದಕ್ಕೂ ಕಷ್ಟದ ದಾರಿಯಲ್ಲಿ ನಡೆದ ಪುತ್ತೂರಿನ ನಿಡ್ಪಳ್ಳಿ ಗ್ರಾಮದ ನಿರ್ಮಲಾ ಸುರತ್ಕಲ್‌ರವರು ಸಾಹಿತ್ಯ ಲೋಕದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾದರು. ಅವರು ರಚಿಸಿದ 2ನೇ ಅಂಕಣ ಪಠ್ಯ ಪುಸ್ತಕವನ್ನೂ ಸೇರಿಕೊಂಡಿದೆ. ಪಾತರಗಿತ್ತಿ. ತಿರುಚಬೇಡ ಮನಸ್ಸು ಕೃತಿಗಳು ಉತ್ತಮವಾಗಿದೆ ಎಂದರು. ಪುಸ್ತಕ ಹಬ್ಬದ ಉದ್ಘಾಟಕರಾಗಿದ್ದ ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್‌ರವರು ಮಾತನಾಡಿ ಪುಸ್ತಕವನ್ನು ತೆಗೆದು ಕೊಂಡರೆ ಸಾಲದು ಅದನ್ನು ಪ್ರಜ್ಞಾಪೂರ್ವಕವಾಗಿ ಇಟ್ಟುಕೊಳ್ಳಬೇಕು ಎಂದರು. ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಯವಾದಿ ಅಜಿತ್ ಎನ್‌ರವರು ಮಾತನಾಡಿ  ಬೋಳಂತಕೋಡಿಯವರುಕಾನೂನಿನ ಸೇವೆಯಲ್ಲಿ ತನ್ನ ಕಕ್ಷಿದಾರನಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸ್ಪಷ್ಟ ಮಾರ್ಗದರ್ಶನ ನೀಡುತ್ತಿದ್ದರು ಎಂದರು. ನ್ಯಾಯವಾದಿ ಕೆ.ಆರ್.ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜ ಸುಧಾರಕರನ್ನು ಬಹಳಷ್ಟು ಜನ ಮರೆಯುತ್ತಾರೆ. ಆದರೆ ಬೋಳಂತಕೋಡಿಯವರ ನೆನಪು ಅಚ್ಚು ಹಾಕಿದಂತೆ ಇದೆ ಎಂದರು. ಶಾರದಾ ಕೊಡೆಂಕಿರಿ, ಮಮತಾ, ರಾಮಚಂದ್ರ ಭಟ್, ಸತ್ಯಮೂರ್ತಿ ಹೆಬ್ಬಾರ್, ನಾರಾಯಣ ಭಟ್, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಅತಿಥಿಗಳನ್ನು ಗೌರವಿಸಿದರು. ಸಪ್ನಾ ಉದಯ್ ಪ್ರಾರ್ಥಿಸಿದರು.  ಪುಷ್ಪಲತಾ ಕಾರ‍್ಯಕ್ರಮ ನಿರೂಪಿಸಿದರು.  ಪದ್ಮಾ ಕೆ.ಆರ್. ಆಚಾರ್ಯ, ಉಲ್ಲಾಸ ಪೈ ರವರು ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು. ಪ್ರಕಾಶ್ ಕೊಡೆಂಕಿರಿ ವಂದಿಸಿದರು. ಸಮಾರಂಭದ ಬಳಿಕ ರಾಮ್‌ಪ್ರಸಾದ್ ಕಾಂಚೋಡು, ಪರೀಕ್ಷಿತ್ ತೋಳ್ಪಾಡಿ, ಪದ್ಮಾ ಕೆ.ಆರ್ ಆಚಾರ್ಯ, ಜಯಶ್ರೀ ಇಡ್ಕಿದುರವರಿಂದ ಕವಿ ಕಾವ್ಯ ಗಾಯನ ನಡೆಯಿತು. ಸಭೆಗೆ ಆಗಮಿಸುವ ಮುನ್ನ ದ್ವಾರದಲ್ಲಿ ಸಂಪ್ರದಾಯದಂತೆ ಬೆಲ್ಲ, ನೀರನ್ನು ಸಾಹಿತ್ಯಾಸಕ್ತರಿಗೆ ನೀಡಲಾಯಿತು. ಪುಸ್ತಕ ಹಬ್ಬದ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯು ಅ.೩೦ರ ತನಕ ನಡೆಯಲಿದ್ದು, ಸುಮಾರು ೨೦ಸಾವಿರ ಪುಸ್ತಕಗಳು ಪ್ರದರ್ಶನದಲ್ಲಿದೆ ಎಂದು ಪ್ರಕಾಶ್ ಕೊಡೆಂಕಿರಿ ತಿಳಿಸಿದ್ದಾರೆ.

ಅ.30ರ ತನಕ ಪುಸ್ತಕ ಪ್ರದರ್ಶನ , ಮಾರಾಟ

ಬೋಳಂತಕೋಡಿ ಈಶ್ವರ ಭಟ್ಟ್ ಅಭಿಮಾನಿ ಬಳಗ , ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಪುತ್ತೂರು ಘಟಕ ಮತ್ತು ಜ್ಞಾನ ಗಂಗಾ ಪುಸ್ತಕ ಮಳಿಗೆ ಆಶ್ರಯದಲ್ಲಿ ಅ.೩೦ರ ತನಕ ನಡೆಯಲಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಸಾಹಿತ್ಯ ಕಾರ‍್ಯಕ್ರಮದ ಉದ್ಘಾಟನೆ ಅ.೨೪ರಂದು ನಡೆಯಿತು. ಸುಮಾರು ೨೦ಸಾವಿರ ಪುಸ್ತಕ ಪ್ರದರ್ಶನ ನಡೆಯಲಿದ್ದು, ಪ್ರತಿ ದಿನ ಬೆಳಿಗ್ಗೆ ಗಂಟೆ.9 ರಿಂದ ರಾತ್ರಿ 8ರ ತನಕ ಪುಸ್ತಕ ಪ್ರದರ್ಶನ ಮಾರಾಟ ನಡೆಯಲಿದೆ ಎಂದು  ಪ್ರಕಾಶ ಕೊಡೆಂಕಿರಿ ತಿಳಿಸಿದ್ದಾರೆ.

ವಸ್ತುಗಳ ಪ್ರೀತಿಯಿಂದ ಬಾಂಧವ್ಯ ತಪ್ಪಿ ಹೋಗುತ್ತದೆ:

ಮನುಷ್ಯನಿಗೆ ವಸ್ತುಗಳ ಮೇಲಿನ ಪ್ರೀತಿಯಿಂದ ವ್ಯಕ್ತಿಯ ಮೇಲಿನ ಬಾಂಧವ್ಯ ಕಡಿಮೆ ಆಗುತ್ತದೆ. ಅಪ್ಪ,ಅಮ್ಮ, ಸಹೋದರ ಬೇಕೆಂದು ಅನ್ನಿಸುವುದಿಲ್ಲ. ನನಗೆ ಮನುಷ್ಯ ಪ್ರೀತಿ ಸಿಗಲಿಲ್ಲ. ಅದು ಸಿಕ್ಕಿದ್ದು ಬರಹಗಳ ಪ್ರಕಟಣೆ ಬಳಿಕ.

ನಿರ್ಮಲಾ ಸುರತ್ಕಲ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.