Breaking News

ಡೇನಿಯಲ್ ಎಲೆಕ್ಟ್ರೋನಿಕ್ಸ್ & ಫರ್ನಿಚರ‍್ಸ್‌ನಲ್ಲಿ ದೀಪಾವಳಿ ವಿಶೇಷ ಆಫರ್

Puttur_Advt_NewsUnder_1
Puttur_Advt_NewsUnder_1

daniel2 daniel1ಪುತ್ತೂರು: ನವೀನ ವಿನ್ಯಾಸ, ಉತ್ಕೃಷ್ಟ ಗುಣಮಟ್ಟ, ಸಮಂಜಸ ಬೆಲೆ ಮತ್ತು ಉತ್ತಮ ಸರ್ವಿಸ್‌ನಿಂದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ್ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಇಲ್ಲಿನ ಏಳ್ಮುಡಿ ಸ್ವಂತ ಕಟ್ಟಡವಾದ ಡೇನಿಯಲ್ ಆರ್ಕೆಡ್‌ನಲ್ಲಿ ವ್ಯವಹರಿಸುತ್ತಿರುವ ಡೇನಿಯಲ್ ಇಲೆಕ್ಟ್ರೋನಿಕ್ಸ್ ಮತ್ತು ಫರ್ನಿಚರ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ದೀಪಾವಳಿ ವಿಶೇಷ ರಿಯಾಯಿತಿಯ ಜೊತೆಗೆ ಬಹುಮಾನಗಳ ಸುರಿಮಳೆಯನ್ನು ಗ್ರಾಹಕರಿಗೆ ನೀಡುತ್ತಿದೆ.

 ಈಗ ಇನ್ನಷ್ಟು ವಿಸ್ತೃತ: 1988ರಲ್ಲಿ ಪುತ್ತೂರಿನ ಮುಖ್ಯರಸ್ತೆ ಬಳಿ ಸಣ್ಣ ಕೊಠಡಿಯಲ್ಲಿ ಉದ್ಯಮವನ್ನು ಆರಂಭಿಸಿ ಬಳಿಕ ದರ್ಬೆಯಲ್ಲಿ ವ್ಯವಹಾರ ಮುಂದುವರೆಸಿ ೨೦೦೨ರಲ್ಲಿ ಏಳ್ಮುಡಿಯಲ್ಲಿ ಪ್ರಸ್ತುತವಿರುವ ಸ್ವಂತ ಕಟ್ಟಡದ ಬಳಿ ಸಾಧಾರಣ ಮಟ್ಟದಲ್ಲಿ ಉದ್ಯಮವನ್ನು ಮುಂದುವರೆಸಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಏಳ್ಮುಡಿಯಲ್ಲಿ ತನ್ನ ಸ್ವಂತ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಗ್ರಾಹಕರಿಗೆ ಸೇವೆಗೈಯುತ್ತಿದೆ. ಮಾತ್ರವಲ್ಲದೆ ಸಂಸ್ಥೆಯು ಇದೀಗ ವಿಸ್ತೃತಗೊಂಡು ಗ್ರಾಹಕರ ಸೇವೆಗಾಗಿ ಹಾತೊರೆದಿದೆ. ದೀಪಾವಳಿ ಹಬ್ಬ ಹಾಗೂ ಹೊಸ ವರ್ಷಕ್ಕೆ ವಿಶೇಷ ದರ ಕಡಿತ ಮಾರಾಟವನ್ನು ಸಿದ್ಧ ದಾಸ್ತಾನುವಿನಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು ಗ್ರಾಹಕರ ಮನೆಗಳಿಗೆ ನಗರದೊಳಗೆ ಉಚಿತ ಸಾಗಾಟದ ವ್ಯವಸ್ಥೆಯೂ ಇದೆ.

ಫರ್ನಿಚರ್‌ಗಳ ಸ್ವಂತ ತಯಾರಿಕಾ ಘಟಕ: ಗ್ರಾಹಕರ ಬೇಡಿಕೆಗೆ ತಕ್ಕಂತೆ ಅತ್ಯಾಧುನಿಕ ವಿನ್ಯಾಸದ ಮತ್ತು ಉತ್ತಮ ಗುಣಮಟ್ಟದ ದೃಷ್ಟಿಯಿಂದ ಫರ್ನಿಚರ್‌ಗಳನ್ನು ತಯಾರಿಸಿ ಕೊಡಲು ಉದ್ಯಮವನ್ನು ಆರಂಭಿಸುವ ಮೊದಲು ಫರ್ನಿಚರ್‌ಗಳ ತಯಾರಿಕ ಘಟಕವನ್ನು ಕರಿಯಾಲ್‌ನಲ್ಲಿ ಸ್ಥಾಪಿಸಿದ್ದರು. ಮಾತ್ರವಲ್ಲದೆ ಇಂದಿಗೂ ಗ್ರಾಹಕರ ಅನುಕೂಲತೆಗೆ ತಕ್ಕಂತೆ ವಿವಿಧ ವಿನ್ಯಾಸದ ಫರ್ನಿಚರ್‌ಗಳನ್ನು ತಯಾರಿಸಿ ಕೊಡುತ್ತಿದೆ. ತಯಾರಿಕೆ ಹಾಗೂ ಮಾರಾಟದಲ್ಲಿ ಅನುಭವ ಹೊಂದಿದ ಸಂಸ್ಥೆ ಗ್ರಾಹಕರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸುತ್ತಿದೆ. ಗ್ರಾಹಕರ ಇಚ್ಚೆ ಹಾಗೂ ಅನುಕೂಲತೆಗೆ ತಕ್ಕಂತೆ ಆರ್ಡರ್‌ಗಳನ್ನು ಸ್ವೀಕರಿಸಿ ಪೀಠೋಪಕರಣಗಳನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿ ಕೊಡುವುದು ಸಂಸ್ಥೆಯ ವಿಶೇಷತೆಯಾಗಿದೆ. ಪೀಠೋಪಕರಣಗಳ ತಯಾರಿಕೆ ಬಗ್ಗೆ ಇರುವ ಅಪರಿಮಿತ ಅನುಭವವು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಬೃಹತ್ ಸಂಗ್ರಹ: ಮನೆಯ ಹಾಗೂ ಆಫೀಸಿನ ಒಳಾಂಗಣದ ಸೊಬಗನ್ನು ಹೆಚ್ಚಿಸುವ ರೀತಿಯಲ್ಲಿ ಇಲ್ಲಿ ಎಲ್ಲಾ ತರಹದ ನೂತನ ಮಾದರಿಯ ಮರದ ಫರ್ನಿಚರ್‌ಗಳು, ಟೇಬಲ್, ವಿವಿಧ ಕಂಪೆನಿಯ ಟಿವಿಗಳು, ಆಕರ್ಷಕ ಸೋಫಾಸೆಟ್, ಬೆಡ್‌ರೂಂ ಹಾಗೂ ಕಿಚನ್ ಫರ್ನಿಚರ್‌ಸೆಟ್, ಸ್ಟೀಲ್ ಕಪಾಟು, ಡೈನಿಂಗ್ ಟೇಬಲ್ ಸೆಟ್, ಪ್ಲಾಸ್ಟಿಕ್ ಮೌಲ್ಡೆಡ್ ಫರ್ನಿಚರ್, ಪ್ರಸಿದ್ಧ ಕಂಪೆನಿಗಳಾದ ಸ್ಯಾಮ್‌ಸಂಗ್, ಎಲ್‌ಜಿ, ಒನಿಡಾ, ಪೆನಸೋನಿಕ್, ಸೋನಿ, ವರ್ಲ್‌ಪೂಲ್, ಸಾನ್‌ಸುಯ್, ಮುಂತಾದ ಹಲವಾರು ಕಂಪೆನಿಗಳ ವಾಷಿಂಗ್ ಮೆಷಿನ್, ಎಲ್‌ಸಿಡಿ ಟಿವಿ, ರೆಫ್ರಿಜರೇಟರ್, ಮೈಕ್ರೋ ಓವೆನ್, ವಾಟರ್‌ಹೀಟರ್, ಏರ್‌ಕೂಲರ್ ಮಿಕ್ಸರ್ ಗ್ರೈಂಡರ್, ಪ್ರೆಸರ್ ಕುಕ್ಕರ್ ಮುಂತಾದ ಇನ್ನೂ ಅನೇಕ ಸಂಗ್ರಹವಿದೆ. ಸಂಸ್ಥೆ ಕರ್ಲಾನ್ ಹಾಸಿಗೆಗಳು ಇಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಆಯ್ಕೆಗೆ ವಿಫುಲ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ದೀಪಾವಳಿ ಹಾಗೂ ಹೊಸ ವರ್ಷದ ಸಲುವಾಗಿ ಪ್ರತಿ ಒಂದು ಸಾವಿರ ಖರೀದಿಗೆ ಒಂದು ಕೂಪನ್ ಲಭ್ಯವಿದ್ದು ಪ್ರಥಮ ಬಹುಮಾನವಾಗಿ ಆಕ್ಟೀವಾ ಹೋಂಡಾ, ದ್ವಿತೀಯ ಬಹುಮಾನವಾಗಿ 32 ಇಂಚಿನ ಎಲ್‌ಇಡಿ ಟಿವಿ, ತೃತೀಯ ಬಹುಮಾನವಾಗಿ ಮಿಕ್ಸರ್ ಗ್ರೈಂಡರ್ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಕನಿಷ್ಟ ದಾಖಲೆ ಪತ್ರದೊಂದಿಗೆ ೦% ಬಡ್ಡಿದರದಲ್ಲಿ ಬಜಾಜ್ ಫೈನಾನ್ಸ್‌ನ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ ಕೂಡ ಕ್ಷಣದಲ್ಲಿ ಲಭ್ಯವಿದೆ.   

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.