Breaking News

ಕೊಂಬಾರಿನಲ್ಲಿ ದೈವಸ್ಥಾನದ ಮರ ಲೂಟಿ ದೂರು ; ಪ್ರಕರಣ ದಾಖಲು-ಅರಣ್ಯಾಧಿಕಾರಿ

Puttur_Advt_NewsUnder_1
Puttur_Advt_NewsUnder_1

ಕಡಬ: ಕೊಂಬಾರು ಗ್ರಾಮದ ಬೀಡು ಎಂಬಲ್ಲಿ ದೈವಸ್ಥಾನದ ಜೀರ್ಣೋದ್ಧಾರದ ಹೆಸರಿನಲ್ಲಿ ಕೂತುರು ಗುಡ್ಡಪ್ಪ ಗೌಡ ಹಾಗೂ ಅವರ ಸಂಗಡಿಗರು ಲಕ್ಷಾಂತರ ರೂ ಬೆಲೆಬಾಳುವ ಮರಗಳನ್ನು ಕಡಿದು ಮಾರಾಟ ಮಾಡಿದ್ದಾರೆ ಎಂದು ಕೂತುರು ನಿವಾಸಿ ಸತ್ಯಪ್ರಿಯಾ ಎಂಬವರು ಉಪಅರಣ್ಯ ಸಂರಕ್ಷಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.

ಬೀಡು ಎಂಬಲ್ಲಿ ಖಾತಾ ನಂಬ್ರ ೧೦೭ ರ ಪ್ರಕಾರ ನನ್ನ ತಂದೆ ದಿ|ಧರ್ಮಪಾಲ ಗೌಡರ ಜಮೀನು ಹೊಂದಿದ್ದರು. ಅವರು ಜೀವಂತವಿದ್ದಾಗ ಕೊಂಬಾರು ಗ್ರಾಮದ ಸಮಸ್ತ ದೈವ ದೇವರ ವಿನಿಯೋಗಕ್ಕೆ ಕೊಂಬಾರು ಗ್ರಾಮದ ಬೀಡು ಎಂಬಲ್ಲಿ ೧೦.೬೮ ಎಕ್ರೆ ಸ್ವಂತ ಜಮೀನು ಎಗ್ರಿಮೆಂಟ್ ಮಾಡಿಕೊಟ್ಟಿದ್ದರು. ಆಸ್ತಿಯ ಹುಟ್ಟುವಳಿ ಹಾಗೂ ದೈವ ದೇವರಿಗೆ ಭಕ್ತಾಧಿಗಳಿಂದ ಬಂದ ಹರಕೆ ಹಣದಿಂದ ವ್ಯವಸ್ಥಿತವಾಗಿದ್ದು ದೈವ ದೇವರ ಆಡಳಿತ ಚುಕ್ಕಾಣಿಯನ್ನು ಸದ್ಯ ಕೂತುರು ಗುಡ್ಡಪ್ಪ ಗೌಡರು ವಹಿಸಿಕೊಂಡಿದ್ದು ಜಾಗದಲ್ಲಿರುವ ೧೮ ಸಾಗುವಾನಿ, ಮೂರು ಹೆಬ್ಬಲಸು, ಮೂರು ಬಣ್ಪು ಒಂದು ಹಲಸಿನ ಮರವನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಲಕ್ಷಾಂತರ ರೂ ಬೆಲೆಬಾಳುವ ಮರವನ್ನು ಮರದ ಮಿಲ್‌ಗೆ ಮಾರಾಟ ಮಾಡಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ಹೇಳುತ್ತಾರೆ. ಆದರೆ ನನ್ನ ತಂದೆಯ ಪಟ್ಟಾಸ್ಥಳದಲ್ಲಿ ಅವರ ಮರಣಾನಂತರ ಅವರ ಮಗನಾದ ನನ್ನ ಅನುಮತಿ ಇಲ್ಲದೆ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆ, ಅಕ್ರಮ ಎಸಗಿರುವ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಸತ್ಯಪ್ರಿಯಾ ಆಗ್ರಹಿಸಿದ್ದಾರೆ. ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಸತ್ಯಪ್ರಿಯಾ ಪ್ರಕರಣವನ್ನು ರಾಜಕೀಯ ಪ್ರಭಾವದಿಂದ ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ, ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕಾನೂನು ಪ್ರಕಾರ ಕ್ರಮ-ಮಂಜುನಾಥ್

ಈ ಬಗ್ಗೆ ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರು ಪ್ರತಿಕ್ರಿಯೆ ನೀಡಿ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕಾಗಿದೆಯೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.