Breaking News

ಬಾಲಕಿಯ ಮೇಲೆ ಅತ್ಯಾಚಾರ: 34ನೇ ನೆಕ್ಕಿಲಾಡಿಯ ತಾಳೆಹಿತ್ಲು ಮನೆ ನಿವಾಸಿ ರವಿ ವಿರುದ್ಧ ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಏಳರ ಹರೆಯದ ಬಾಲಕಿಯೋರ್ವಳ ಮೇಲೆ ವಿವಾಹಿತ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ ಘಟನೆ ಉಪ್ಪಿನಂಗಡಿ ಬಳಿಯ ೩೪ನೇ ನೆಕ್ಕಿಲಾಡಿಯಲ್ಲಿ ನಡೆದಿದ್ದು, ಈ ಬಗ್ಗೆ ಮಂಗಳವಾರ ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

34ನೇ ನೆಕ್ಕಿಲಾಡಿಯ ತಾಳೆಹಿತ್ಲು ಮನೆ ನಿವಾಸಿ ರವಿ (31) ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ. ಅ.21ರ ಶುಕ್ರವಾರ ಸಂಜೆ 4:30ಕ್ಕೆ ಆರೋಪಿಯು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಬಾಲಕಿಯ ತಾಯಿ ಹಾಗೂ ತಂದೆ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ತನ್ನ ಮನೆ ಸಮೀಪವೇ ಇರುವ ಬಾಲಕಿಯ ಮನೆಗೆ ಬಂದಿದ್ದ ಈತ ಉಡ ತೋರಿಸುವುದಾಗಿ ನಂಬಿಸಿ ಬಾಲಕಿಯನ್ನು ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಎಂದು ಬಾಲಕಿಯ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯು ಬಾಲಕಿಯ ಸಂಬಂಧಿಕನಾಗಿದ್ದು, ಈತನಿಗೆ ಮದುವೆಯಾಗಿ ಒಂದು ಮಗುವಿದೆ. ತಕ್ಷಣವೇ ದೂರು ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ೩೭೬, ೫೦೬ ಐಪಿಸಿ ಸೆಕ್ಷನ್ ಹಾಗೂ ಪೋಕ್ಸೋ ಕಾಯ್ದೆ ೪ ಮತ್ತು ೮ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.