ರಾಷ್ಟ್ರ ಮಟ್ಟದ ಕಬಡ್ಡಿ ವಿಜೇತರಿಗೆ ಆಲಂಕಾರು ಭಾರತಿ ಶಾಲೆಯಲ್ಲಿ ಸ್ವಾಗತ

Puttur_Advt_NewsUnder_1
Puttur_Advt_NewsUnder_1

14ಆಲಂಕಾರು: ವಿದ್ಯಾಭಾರತಿ ವತಿಯಿಂದ ಕೇರಳದ ತಿರುವನಂತಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಬಾಲವರ್ಗದ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ ಸ್ಥಾನ ಪಡೆದು ನವೆಂಬರ್ 16ರಂದು ಮಧ್ಯ ಪ್ರದೇಶದಲ್ಲಿ ನಡೆಯುವ ಎಸ್.ಜಿ.ಎಫ್.ಐ. ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಅರ್ಹತೆ ಪಡೆದಿದೆ. ಈ ತಂಡದಲ್ಲಿ ತಂಡದ ನಾಯಕಿ ಸೇರಿ ಐದು ಮಂದಿ ಆಲಂಕಾರು ಭಾರತಿ ಶಾಲೆಯ ಕಬಡ್ಡಿ ತಂಡದ ಮಾಜಿ ಆಟಗಾರಗಾಗಿರುತ್ತಾರೆ. ಈ ಹಿನ್ನಲೆಯಲ್ಲಿ ಆಲಂಕಾರು ಭಾರತಿ ಶಾಲೆಯ ವಠಾರದಲ್ಲಿ ವಿಜೇತರಿಗೆ ಆರತಿ ಬೆಳಗಿಸಿ, ತಿಲಕ ಇಟ್ಟು, ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಲಂಕಾರು ಭಾರತಿ ಶಾಲೆಯ ಅಧ್ಯಕ್ಷ ಡಾ. ಸುರೇಶ್ ಕುಮಾರ್ ಕೂಡೂರುರವರು ಮಕ್ಕಳ ಸಾಧನೆಯನ್ನು ಕೊಂಡಾಡಿದರಲ್ಲದೆ, ಪ್ರತಿ ಕ್ರೀಡಾ ಪಟುಗಳಿಗೆ ತಲಾ ಒಂದು ಸಾವಿರ ರೂಪಾಯಿಯಂತೆ ಪ್ರೋತ್ಸಾಹ ಧನ ನೀಡಲಾಗುವುದೆಂದು ಫೋಷಿಸಿದರು.
ಬಳಿಕ ಮಾತನಾಡಿದ ತಂಡದ ಮಾಜಿ ತರಬೇತುದಾರ ಚಂದ್ರಹಾಸ್ ಕೆ.ಸಿ. ಕುಂಟ್ಯಾನರವರು ನಿಮ್ಮ ಸಾಧನೆಗೆ ನೀವೇ ಸಾಟಿ. ನಿಮ್ಮಿಂದ ಈ ವಿದ್ಯಾಸಂಸ್ಥೆಗೆ ಕೀರ್ತಿ ತರುವ ಕಾರ್ಯವಾಗಿದೆ ಎಂದು ಹೇಳಿ ಶುಭಹಾರೈಸಿದರು. ಕ್ರೀಡಾಪಟುಗಳಾದ ಸಿಂಚನಾ ಎಲ್.ಶೆಟ್ಟಿ, ರಚನಾ ಪೂಜಾರಿ, ಶರಣ್ಯ ಆಚಾರ್ಯ, ಮೋಕ್ಷಿತಾ. ಪಿ. ಗೌಡ, ತಂಡದ ನಾಯಕಿ ಧನ್ಯಶ್ರೀ ಪಜ್ಜಡ್ಕ ತಮ್ಮ ಅನುಭವವನ್ನು ಹಂಚಿಕೊಂಡರು.
ಶಾಲಾ ಕಾರ್ಯದರ್ಶಿ ಗಂಗಾಧರ ಗೌಡ ಕುಂಡಡ್ಕ, ಸದಸ್ಯರುಗಳಾದ ರಾಮಚಂದ್ರ ಭಟ್ ಅತ್ತಿವನ, ಈಶ್ವರ ಗೌಡ ಪಜ್ಜಡ್ಕ , ಇಂದುಶೇಖರ ಶೆಟ್ಟಿ, ಶ್ರೀಧರ ಬಲ್ಯಾಯ, ರಮಾನಾಥ ರೈ ಆಲಂಕಾರು, ಶಾಲೆಯ ಮುಖ್ಯ ಮಾತಾಜಿ ಕನಕಲತಾ ಎಸ್.ಎನ್. ಭಟ್, ಕ್ರೀಡಾಪಟುಗಳ ಪಾಲಕರಾದ ಲಕ್ಷ್ಮೀಶ ಶೆಟ್ಟಿ ಸುರುಳಿ, ದಾಮೋದರ ಆಚಾರ್ಯ ಆಲಂಕಾರು, ರಾಮಕೃಷ್ಣ ಗೌಡ ಪಜ್ಜಡ್ಕ , ಜಿನ್ನಪ್ಪ ಪೂಜಾರಿ ಆಲಂಕಾರು ಹಾಗೂ ಪಾಲಕರಾದ ಶಿವಪ್ಪ ಗೌಡ ಕಜೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.