ರುದ್ರೇಶ್ ಕೊಲೆ ಆರೋಪಿಗಳನ್ನು ಬಂಧಿಸಿ-ಟಿಪ್ಪು ಜಯಂತಿ ಆಚರಣೆ ನಿಲ್ಲಿಸಿ ಕಡಬದಲ್ಲಿ ಬಿಜೆಪಿ ರಸ್ತೆ ತಡೆ, ಪ್ರತಿಭಟನೆ ಬಿಜೆಪಿ ಮುಸ್ಲಿಂ ಮುಖಂಡರ ಅನುಪಸ್ಥಿತಿ.!

Puttur_Advt_NewsUnder_1
Puttur_Advt_NewsUnder_1

 

16ಕಡಬ: ರುದ್ರೇಶ್‌ರವರನ್ನು ಕೊಲೆ ಮಾಡಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿಯವರು, ಈ ಬಾರಿಯೂ ಟಿಪ್ಪು ಜಯಂತಿ ಆಚರಣೆ ಮಾಡಿದರೆ ಆಗುವ ಅನಾಹುತಗಳಿಗೆ ಸರಕಾರವೇ ಹೊಣೆ ಎಂದು ಹೇಳಿದರು.

ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಅ.24ರಂದು ಉಪ್ಪಿನಂಗಡಿ ಸುಬ್ರಹ್ಮಣ್ಯ ರಸ್ತೆ ತಡೆ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ಬಿಜೆಪಿ ಕಾರ್‍ಯಕರ್ತ ರುದ್ರೇಶ್ ಕೊಲೆಗೆ ರಾಜ್ಯ ಗೃಹ ಸಚಿವರೇ ಕಾರಣ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಹಿಂದು ಮುಖಂಡರ ಕೊಲೆ ಮಾಡಲಾಗುತ್ತಿದೆ, ಈ ನಿಟ್ಟಿನಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ, ರಾಜ್ಯದಲ್ಲಿ ಹಿಂದೂ ಸಮುದಾಯವನ್ನು ಕಾಂಗ್ರೆಸ್ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಒಡೆಯಲು ಪ್ರಯತ್ನಿಸುತ್ತಿದ್ದು, ಇದೀಗ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಹೊರಟಿದೆ. ಮುಂದಿನ ದಿನಗಳಲ್ಲಿ ಒಸಾಮಾ ಬಿನ್ ಲಾಡೆನ್ ಹಾಗೂ ದಾವೂದ್ ಇಬ್ರಾಹಿಂರಂತಹ ದೇಶದ್ರೋಹಿಗಳ ಜನ್ಮದಿನಾಚರಿಸಿದರೂ ಅಚ್ಚರಿಯಿಲ್ಲ ಎಂದು ಹೇಳಿದರು.

ಮಾಜಿ ತಾ.ಪಂ. ಅಧ್ಯಕ್ಷೆ ಪುಲಸ್ತ್ಯ ರೈ ಮಾತನಾಡಿ ಕಳೆದ ವರ್ಷ ಟಿಪ್ಪು ಜಯಂತಿಯನ್ನು ರಾಜ್ಯ ಸರಕಾರವು ಘೋಷಿಸಿದ ಸಂದರ್ಭದಲ್ಲಿ ಮಡಿಕೇರಿ ಸೇರಿದಂತೆ ರಾಜ್ಯದ ಹಲವೆಡೆ ದೊಂಬಿ, ಗಲಾಟೆಗಳು ನಡೆದಿದ್ದು, ಪ್ರಾಣಹಾನಿಯೂ ಸಂಭವಿಸಿತ್ತು. ಸರಕಾರವೇ ಗಲಭೆಗೆ ಪ್ರಚೋದನೆ ನೀಡುವಂತಿದೆ, ಈ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ, ದೇಶಕ್ಕೋಸ್ಕರ ತ್ಯಾಗ ಮಾಡಿದ ಮಹಾವೀರರ ಜನ್ಮದಿನಗಳನ್ನು ಮಾತ್ರ ಆಚರಿಸುವ ಕ್ರಮ ಆದರೆ ದೇಶವನ್ನು ಕೊಳ್ಳೆ ಹೊಡೆದ ಟಿಪ್ಪು ಸುಲ್ತಾನ್‌ನ ಜನ್ಮ ದಿನವನ್ನು ಆಚರಿಸುತ್ತಿರುವುದು ದುರದೃಷ್ಟಕರ, ಇನ್ನಾದರೂ ಎಚ್ಚೆತ್ತುಕೊಂಡು ಟಿಪ್ಪು ಜಯಂತಿ ಆಚರಣೆಯನ್ನು ಕೈ ಬಿಡುವುದು ಒಳಿತು ಎಂದರು. ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಮಾತನಾಡಿ ಹಿಂದೂ ವಿರೋಧಿಯಾದ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಹಿಂದೂ ದಮನ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಸರಕಾರವನ್ನು ಕಿತ್ತೊಗೆಯಬೇಕು, ಕಾಂಗ್ರೆಸ್ಸಿಗರು ಕೇವಲ ದ್ವೇಷ ಸಾಧನೆ ಮಾಡುತ್ತಿದ್ದಾರೆ, ಅಭಿವೃದ್ದಿಯ ವಿಚಾರದಲ್ಲಿ ಚಿಂತನೆ ಮಾಡುತ್ತಿಲ್ಲ ಇವರ ಧೋರಣೆ ಖಂಡನೀಯ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸುಳ್ಯ ಶಾಸಕ ಎಸ್. ಅಂಗಾರ, ಎ.ಪಿ.ಎಂ.ಸಿ. ಸದಸ್ಯ ಸೀತಾರಾಮ ಗೌಡ ಪೊಸವಳಿಕೆ, ಪ್ರಮುಖ ಬಿಜೆಪಿ ಮುಖಂಡರಾದ ಚಿದಾನಂದ ಗೌಡ ದೇವುಪಾಲ್, ವಾಸುದೇವ ಬೈಪಾಡಿತ್ತಾಯ,ರಘುರಾಮ ನಾಕ್ ಕುಕ್ಕೆರೆಬೆಟ್ಟು, ಗಿರೀಶ್ ಎ.ಪಿ,ಅಶೋಕ್ ಕುಮಾರ್.ಪಿ, ಮಂಜುನಾಥ ಶೆಟ್ಟಿ ನವಸುಮ, ಪ್ರಶಾಂತ್ ಪಂಜೋಡಿ, ಜಯರಾಮ ಆರ್ತಿಲ, ಶೋಭಾ ಜಯಾನಂದ, ಸಂತೋಷ್ ಕುಮಾರ್ ಕೋಡಿಬೈಲು, ರವಿರಾಜ ಶೆಟ್ಟಿ, ಮೋಹನ್ ಕೊಲ, ಲಕ್ಷ್ಮೀಶ ಪೆಲತ್ತೋಡಿ, ಹರೀಶ್ ಕೊಡಂದೂರು, ಕೃಷ್ಣಪ್ಪ ಮಡಿವಾಳ ಸೇರಿದಂತೆ ಹಲವಾರು ಕಾರ್‍ಯಕರ್ತರು ಉಪಸ್ಥಿತರಿದ್ದರು. ಕಡಬ ಶಕ್ತಿ ಕೇಂದ್ರದ ಕಾರ್‍ಯದರ್ಶಿ ಪ್ರಕಾಶ್ ಎನ್.ಕೆ ಸ್ವಾಗತಿಸಿ, ಸುಳ್ಯ ಮಂಡಲ ಯುವ ಮೋರ್ಛಾದ ಉಪಾಧ್ಯಕ್ಷ ಸುರೇಶ್ ದೆಂತಾರು ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.