Breaking News

ಆಲಂಕಾರು: ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಗುರು ಜಯಂತಿ

Puttur_Advt_NewsUnder_1
Puttur_Advt_NewsUnder_1

alankaru

  • ಭಜನೆ
  • ಧಾರ್ಮಿಕ ಸಭೆ
  • ಸಾಧಕರಿಗೆ ಸನ್ಮಾನ
  • ಬಹುಮಾನ ವಿತರಣೆ

ಆಲಂಕಾರು: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ ಆಲಂಕಾರು ಇದರ ಆಶ್ರಯದಲ್ಲಿ ಆಲಂಕಾರು, ಹಳೆನೇರಂಕಿ , ಕೊಲ , ರಾಮಕುಂಜ ಮತ್ತು ಪೆರಾಬೆ, ಕುಂತೂರು ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಜಿಯವರ ೧೬೨ ನೇ ಗುರು ಜಯಂತಿ ಪ್ರಯುಕ್ತ ಶ್ರೀ ದುರ್ಗಾಂಬ ಪದವಿ ಪೂರ್ವ ಮಹಾ ವಿದ್ಯಾಲಯ ಅಲಂಕಾರಿನಲ್ಲಿ ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ ಬಹುಮಾನ ವಿತರಣಾ ಸಮಾರಂಭವು ಅ.೨೩ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಆಲಂಕಾರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ ಇದರ ಅಧ್ಯಕ್ಷ ಸದಾನಂದ ಕುಮಾರ್ ಎಂ. ವಹಿಸಿದರು. ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಅಧ್ಯಕ್ಷ ಜಯಂತ ನಡುಬೈಲು ತೆಂಗಿನ ಹಿಂಗಾರ ಅರಳಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಜಾನಪದ ವಿದ್ವಾಂಸ ಡಾ| ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾಗಿ ಬಿಲ್ಲವ ಯುವಕರು ಸಮಾಜಘಾತುಕ ಶಕ್ತಿಗಳಾಗುವ ಬದಲು ಮನಸ್ಸು ಮನಸ್ಸುಗಳನ್ನು ಬೆಸೆಯುವ ಮೂಲಕ ಈ ಸಮಾಜದ ಆಸ್ತಿಗಳಾಗಬೇಕಿದೆ ಎಂದರು.
ಉಪನ್ಯಾಸಕ ಡಾ| ರಾಜೇಶ್ ಬೆಜ್ಜಂಗಳ, ಯುವ ವಾಹಿನಿ ಘಟಕ ಪುತ್ತೂರು ಇದರ ಅಧ್ಯಕ್ಷರಾದ ಜಯಂತ ಕೆಂಗುಡೇಲು, ಪುತ್ತೂರು ವಕೀಲರ ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಅಲಂಕಾರು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷ, ತಾಲೂಕು ಪಂಚಾಯತ್ ಸದಸ್ಯರಾದ ತಾರಾ ಕೇಪುಳು , ಕೋಟಿ ಚೆನ್ನಯ ಮಿತ್ರವೃಂದ ಆಲಂಕಾರು ಇದರ ಅಧ್ಯಕ್ಷರಾದ ದಿನೇಶ್ ಕೇಪುಳು , ಜಯಂತ ಪೂಜಾರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿನಿಯರಾದ ರಚನಾ, ಶ್ರಾವ್ಯ, ದೀಪ್ತಿ, ಪ್ರೀತಿ, ನವ್ಯಶ್ರೀ, ಜ್ಯೋತಿಕಾ ಮತ್ತು ಶ್ರಾವ್ಯರವರನ್ನು ಗೌರವಿಸಲಾಯಿತು. ವಿಶೇಷ ಸಾಧನೆ ಮಾಡಿದ ಆರೋಗ್ಯ ಇಲಾಖೆಯ ನಿವೃತ್ತ ನಿಬ್ಬಂದಿ ಲಿಂಗಪ್ಪ ಪೂಜಾರಿ, ರಾಜ್ಯ ರಸ್ತೆ ಸಾರಿಗೆ ನಿಗಮದ ನಿವೃತ್ತ ಸಿಬ್ಬಂದಿ ವೆಂಕಪ್ಪ ಪೂಜಾರಿ ಖಂಡಿಗ, ಸ್ವ ಉದ್ಯೋಗ ಮಾಡುತ್ತಿರುವ ಮೋಹನ್ ಕೊಂಡ್ಯಾಡಿ, ಹಿರಿಯ ಮೂರ್ತೆದಾರ ಅಣ್ಣಿ ಪೂಜಾರಿರವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು.
ಜನಾರ್ದನ ಬಿ.ಎಲ್. ಸ್ವಾಗತಿಸಿದರು. ದಯಾನಂದ ಕರ್ಕೇರ, ರವಿ ಮಾಯಿಲ್ಲ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನದ ಪಟ್ಟಿಯನ್ನು ವಾಚಿಸಿದರು. ಡೊಂಬಯ್ಯ ಸುವರ್ಣ ವಂದಿಸಿದರು. ಸರಿತಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೋಟಿ ಚೆನ್ನಯ ಮಿತ್ರವೃಂದರವರಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.