Breaking News

ಬೆಳಿಯೂರುಕಟ್ಟೆ: ಸಾಧಕರಿಗೆ ಸನ್ಮಾನ, ದಾನಿಗಳಿಗೆ ಅಭಿನಂದನೆ: ಸತ್ಕಾರ್ಯ ಮಾಡುವವನಿಗೆ ಯಶಸ್ಸು ಖಚಿತ-ಎಡನೀರು ಶ್ರೀ

Puttur_Advt_NewsUnder_1
Puttur_Advt_NewsUnder_1

2_2

  • ವಿಶ್ವನಾಥ ರೈ ಜೊತೆ ಕೈ ಜೋಡಿಸುತ್ತೇನೆ-ಸಾಜ
  • ವಿಶ್ವನಾಥ ರೈ ಗುರಿ ಮುಟ್ಟಿದ್ದಾರೆ-ಬಿ.ಎನ್.ಮೂರ್ತಿ
  • ಸರಕಾರದ ಅನುದಾನಕ್ಕೆ ಪ್ರಯತ್ನ-ಪ್ರವೀಣಚಂದ್ರ
  • ಸಮಾಜಕ್ಕೆ ದುಡಿದವರಿಗೆ ಭಗವಂತ ಅನುಗ್ರಹಿಸುತ್ತಾನೆ-ವಿನಯ
  • ಉತ್ತಮ ಕಾರ್ಯ ನಡೆದಿದೆ-ಪ್ರಕಾಶ್ಚಂದ್ರ
  • ಸುಮಾರು ರೂ.10 ಲಕ್ಷ ಮೊತ್ತದ ಕೆಲಸ ಬಾಕಿ ಇದೆ-ವಿಶ್ವನಾಥ ರೈ
  • ಇಬ್ಬರು ಸಾಧಕರಿಗೆ, ನಾಲ್ಕು ಮಂದಿ ದಾನಿಗಳಿಗೆ ಅಭಿನಂದನೆ

ಪುತ್ತೂರು: ಬೆಳಿಯೂರುಕಟ್ಟೆ ವಿವೇಕಾನಂದ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮ ಸಮುದಾಯ ಭವನಕ್ಕೆ ಕೊಡುಗೆ ನೀಡಿದ ಪರವೂರಿನ ದಾನಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಈರ್ವರು ಸಾಧಕರಿಗೆ ಸನ್ಮಾನ ಹಾಗೂ ಗಣಪತಿ ಹವನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಅ.೨೬ರಂದು ಸಮುದಾಯ ಭವನದಲ್ಲಿ ನಡೆಯಿತು.
ಧಾರ್ಮಿಕ ಕ್ಷೇತ್ರದಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಬೆಳಿಯೂರುಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಲವು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ, ಬೆಳಿಯೂರುಕಟ್ಟೆ ಕಲ್ಲಕಿನಾಯ ವುಡ್ ಫರ್ನಿಚರ‍್ಸ್ ಮ್ಹಾಲಕ ಗಣೇಶ್ ಭಟ್ ಸುದನಡ್ಕ ಮತ್ತು ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ ನಾರಾಯಣ ರೈ ಬೊಳ್ಳರಗುರಿ ಸಾಜ ಇವರನ್ನು ಹಾಗೂ ಸಮುದಾಯ ಭವನಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ ಬೆಂಗಳೂರಿನ ಉದ್ಯಮಿಗಳಾದ ಹರಿಕಿರಣ್, ಗಂಗಾಧರ, ವೆಂಕಟೇಶ್ ಹಾಗೂ ವೃಷಭರಾಜ ಜೈನ್ ಪುರುಷರಕಟ್ಟೆ ಇವರನ್ನು ಸ್ವಾಮೀಜಿಯವರು ಶಾಲು ಹಾಕಿ, ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಅಭಿನಂದಿಸಿದರು.
ಸತ್ಕಾರ್ಯ ಮಾಡುವವನಿಗೆ ಯಶಸ್ಸು ಖಂಡಿತ: ಸಮಾರಂಭದಲ್ಲಿ ಸಾಧಕರು, ದಾನಿಗಳನ್ನು ಸನ್ಮಾನಿಸಿ ಬಳಿಕ ಆಶೀರ್ವಚನ ನೀಡಿದ ಎಡನೀರು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು, ಸತ್ಕಾರ್ಯ ಮಾಡುವವನಿಗೆ ಪ್ರಾರಂಭದಲ್ಲಿ ಕಷ್ಟಗಳು ಎದುರಾದರೂ ತನ್ನ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುತ್ತಾನೆ. ಇದಕ್ಕೆ ಬೆಳಿಯೂರುಕಟ್ಟೆಯಲ್ಲಿ ಶ್ರೀರಾಮ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸಿದ ವಿಶ್ವನಾಥ ರೈಯವರು ನಿದರ್ಶನರಾಗಿದ್ದಾರೆ ಎಂದು ನುಡಿದರು.
ವಿಶ್ವನಾಥ ರೈ ಜೊತೆ ಕೈ ಜೋಡಿಸುತ್ತೇನೆ-ಸಾಜ: ಮುಖ್ಯ ಅತಿಥಿಯಾಗಿದ್ದ ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ವಿಶ್ವನಾಥ ರೈಯವರ ನೇತೃತ್ವದಲ್ಲಿ ಶ್ರೀರಾಮ ಸಮುದಾಯ ಭವನ ಎದ್ದು ನಿಂತಿದೆ. ಇಲ್ಲಿ ರಚಿಸಲಾದ ಬಾವಿಗೆ ಅನುದಾನ ನೀಡಿದ್ದೇನೆ. ಇನ್ನು ಮುಂದೆಯೂ ತನ್ನಿಂದಾಗುವ ಸಹಕಾರ ನೀಡುತ್ತ ಸಮುದಾಯ ಭವನದ ಕೆಲಸಗಳಿಗೆ ವಿಶ್ವನಾಥ ರೈಯವರ ಜೊತೆ ಕೈ ಜೋಡಿಸುತ್ತೇನೆ ಎಂದು ಹೇಳಿದರು.
ವಿಶ್ವನಾಥ ರೈ ಗುರಿ ಮುಟ್ಟಿದ್ದಾರೆ-ಬಿ.ಎನ್.ಮೂರ್ತಿ: ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವ ಹಿಂದೂ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎನ್.ಮೂರ್ತಿಯವರು ಮಾತನಾಡಿ, ವಿಶ್ವನಾಥ ರೈಯವರು ಏನೇ ಕಷ್ಟ ಬಂದರೂ ಎದುರಿಸುತ್ತಾ ಈ ಸಮುದಾಯ ಭವನ ನಿರ್ಮಾಣದಲ್ಲಿ ತಮ್ಮ ಗುರಿ ಮುಟ್ಟಿದ್ದಾರೆ ಎಂದರು.
ಸರಕಾರದ ಅನುದಾನಕ್ಕೆ ಪ್ರಯತ್ನ-ಪ್ರವೀಣಚಂದ್ರ: ಶ್ರೀರಾಮ ಸಮುದಾಯ ಭವನಕ್ಕೆ ಬಲ್ನಾಡು ಗ್ರಾಮ ಪಂಚಾಯತ್ ವತಿಯಿಂದ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಮುಂದೆಯೂ ಅವಕಾಶವಿದ್ದಲ್ಲಿ ಸಂಸದರು, ಶಾಸಕರ ಮೂಲಕ ಸರಕಾರದ ಅನುದಾನ ಒದಗಿಸಿಕೊಡಲು ಪ್ರಯತ್ನಿಸುತ್ತೇನೆ ಎಂದು ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಎಂ. ಪ್ರವೀಣಚಂದ್ರ ಆಳ್ವ ಹೇಳಿದರು.
ಸಮಾಜಕ್ಕೆ ದುಡಿದವರಿಗೆ ಭಗವಂತ ಅನುಗ್ರಹಿಸುತ್ತಾನೆ-ವಿನಯ: ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನಯ ವಸಂತರವರು ಮಾತನಾಡಿ, ಸಮಾಜಕ್ಕಾಗಿ ದುಡಿಯವವರಿಗೆ ದೇವರ ಅನುಗ್ರಹ ಸಿಗುತ್ತದೆ. ಸಮಾಜಕ್ಕಾಗಿ ವಿಶ್ವನಾಥ ರೈಯವರು ಮಾಡುತ್ತಿರುವ ಕೆಲಸಕ್ಕೆ ನಾವೆಲ್ಲ ಬೆಂಬಲವಾಗಿ ನಿಂತು ಸಹಕರಿಸಬೇಕು ಎಂದು ಹೇಳಿದರು. ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಊರಿನವರು ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.
ಉತ್ತಮ ಕಾರ್ಯ ನಡೆದಿದೆ-ಪ್ರಕಾಶ್ಚಂದ್ರ: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಎಂ. ಪ್ರಕಾಶ್ಚಂದ್ರ ಆಳ್ವರವರು ಮಾತನಾಡಿ, ವಿಶ್ವನಾಥ ರೈಯವರಿಂದ ಉತ್ತಮ ಕೆಲಸ ಕಾರ್ಯ ಬೆಳಿಯೂರುಕಟ್ಟೆಯಲ್ಲಿ ನಡೆದಿದೆ. ನೇತೃತ್ವ ವಹಿಸಿ ಕೆಲಸ ಮಾಡುವವರಿಗೆ ಎಲ್ಲರು ಸಹಕಾರ ನೀಡುವುದು ಅಗತ್ಯ ಎಂದರು.
ವಿಜಯಾ ಬ್ಯಾಂಕ್ ನಿವೃತ್ತ ನೌಕರ ಶ್ರೀನಿವಾಸ ಶೆಟ್ಟಿ ಕೊಳಕೆಬೈಲು ಅವರು ಮಾತನಾಡಿ, ಸಮುದಾಯ ಭವನ ಮತ್ತು ಭಜನಾ ಮಂದಿರದ ವಿಚಾರದಲ್ಲಿ ವಿಶ್ವನಾಥ ರೈಯವರು ದೃಢ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತನ್ನಿಂದಾದ ಸಹಕಾರ ನೀಡಲು ಸಿದ್ದ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಧರ್ಣಪ್ಪ ಕುಲಾಲ್‌ರವರು ಮಾತನಾಡಿ, ವಿಶ್ವನಾಥ ರೈಯವರು ತ್ಯಾಗ ಮನೋಭಾವದಿಂದ ಕೆಲಸ ಮಾಡಿದ್ದರಿಂದ ಇಲ್ಲಿ ಈ ಸಮುದಾಯ ಭವನ ನಿರ್ಮಾಣವಾಗಲು ಸಾಧ್ಯವಾಗಿದೆ ಎಂದರು.
ಸನ್ಮಾನಿತರ ಪರವಾಗಿ ಮಾತನಾಡಿದ ಗಣೇಶ್ ಭಟ್ ಸುದನಡ್ಕರವರು, ಈ ಭಾಗದಲ್ಲಿ ನಡೆಯುವ ಎಲ್ಲಾ ಕೆಲಸಗಳಲ್ಲಿ ಯುವಕ-ಯುವತಿಯರು ಭಾಗವಹಿಸಬೇಕು. ನಮ್ಮ ಸಂಪಾದನೆಯಲ್ಲಿ ಕಿಂಚಿತನ್ನು ಸಮಾಜಕ್ಕಾಗಿ ವಿನಿಯೋಗಿಸಬೇಕು ಎಂದು ಹೇಳಿದರು. ಶ್ರೀರಾಮ ಸಮುದಾಯ ಭವನದ ಅಧ್ಯಕ್ಷ ವಿಶ್ವನಾಥ ರೈ ಕೆಳಗಿನಮನೆಯವರು ಮಾತನಾಡಿ, ಈ ಸಮುದಾಯಭವನ ಪ್ರಾರಂಭಿಸಲು ಮೊಗರೋಡಿ ಬಾಲಕೃಷ್ಣ ರೈಯವರು ಮೂಲ ಕಾರಣರಾಗಿರುತ್ತಾರೆ ಎಂದರು. ದಾನಿಗಳನ್ನು ಸ್ಮರಿಸಿ ವಿಶ್ವನಾಥ ರೈಯವರು ಕೃತಜ್ಞತೆ ಸಲ್ಲಿಸಿದರು. ಸಮುದಾಯ ಭವನಕ್ಕೆ ಫ್ಯಾನ್, ಕುರ್ಚಿ,ಸುಸಜ್ಜಿತ ಪಾಕ ಶಾಲೆ ರಚನೆಯಾಗಬೇಕಿದ್ದು, ಇದಕ್ಕೆ ಸುಮಾರು ೧೦ ಲಕ್ಷ ರೂಪಾಯಿ ತಗಲಬಹುದೆಂದು ಅಂದಾಜಿಸಲಾಗಿದ್ದು, ಎಲ್ಲರು ಸಹಕರಿಸುವಂತೆ ಅವರು ಮನವಿ ಮಾಡಿದರು.
ವೇದಿಕೆಯಲ್ಲಿ ಬಲ್ನಾಡು ಗ್ರಾ.ಪಂ. ಸದಸ್ಯರಾದ ಇಂದಿರಾ ಎಸ್. ರೈ, ಟಿ. ಇದ್ದಿಕುಂಞಿ, ಬಾಲಕೃಷ್ಣ ಮುರುಂಗಿ ಉಪಸ್ಥಿತರಿದ್ದರು. ದೀಪಾ ಮತ್ತು ಬಳಗದವರು ಪ್ರಾರ್ಥಿಸಿದರು. ಗಣೇಶ್ ಭಟ್ ಸುದನಡ್ಕ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ವಿಶ್ವನಾಥ ರೈ ಮತ್ತು ಅವರ ಪತ್ನಿ ಸರೋಜಿನಿಯವರು ಅತಿಥಿಗಳಿಗೆ ಗುಲಾಬಿ ನೀಡಿ ಗೌರವಿಸಿದರು. ಬಳಿಕ ಸ್ವಾಮೀಜಿಯವರಿಗೆ ಫಲಪುಷ್ಪ ಸಮರ್ಪಿಸಿದರು. ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಚಂದಪ್ಪ ಪೂಜಾರಿ ಕಾಡ್ಲ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪ್ರಸಾದ್ ಮತ್ತಿತರರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂಜೀವ ಕಲ್ಲೇಗ, ಯು. ಲೋಕೇಶ್ ಹೆಗ್ಡೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.