ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ನಯನ ರೈಯವರಿಗೆ ಮಹಿಳಾ ಬಂಟರ ಸಂಘದಿಂದ ಸನ್ಮಾನ

Puttur_Advt_NewsUnder_1
Puttur_Advt_NewsUnder_1

up-raiಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ಆಶ್ರಯದಲ್ಲಿ ಅ.25ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ತಿಂಗಳಾಡಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ನಯನ ರೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆ ಮಲ್ಲಿಕಾ ಪ್ರಸಾದ್, ಅಧ್ಯಕ್ಷೆ ಕುಮುದಾ ಎಲ್.ಎನ್,ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿದ ನಯನ ರೈಯವರು ಕ್ಥತಜ್ಞತೆ ಸಲ್ಲಿಸಿದರು. ಹರಿಣಾಕ್ಷಿ ಜೆ.ಶೆಟ್ಟಿಯವರು ಸನ್ಮಾನ ಪತ್ರ ವಾಚಿಸಿದರು. ಶ್ಯಾಮಲಾ ಪಿ ಶೆಟ್ಟಿಯವರು ಪ್ರಾರ್ಥನೆಗೈದರು.

ಕಾರ‍್ಯದರ್ಶಿ ಸ್ವರ್ಣಲತಾ ಜೆ ರೈಯವರು ಸ್ವಾಗತಿಸಿದರು. ಕೋಶಾಧಿಕಾರಿ ಆಶಾ ರೈ ವಂದಿಸಿದರು. ಉಪಾದ್ಯಕ್ಷೆ ಸಬಿತಾ ಭಂಡಾರಿಯವರು ಯುವ ಬಂಟರ ಸಂಘದ ಆಶ್ರಯದಲ್ಲಿ ನ.1 ರಂದು ಪರ್ಪುಂಜದಲ್ಲಿ ನಡೆಯುವ ಬಂಟ್ರೆಗಮ್ಮತ್ತ್ ಕಾರ‍್ಯಕ್ರಮದ ಬಗ್ಗೆ ತಿಳಿಸಿದರು

ಮಾಹಿತಿ: ಈ ಸಂದರ್ಭದಲ್ಲಿ ಹರ್ಬಲ್ ಹೆಲ್ತ್ ಕೇರ್ ಮತ್ತು ನ್ಯೂಟ್ರೀಶಯನ್ ಬಗ್ಗೆ ಮಂಗಳೂರಿನ ಭೈರವಿಯವರು ಮಾಹಿತಿ ನೀಡಿದರು. ರತ್ನಾ ರೈ,ಪ್ರಪುಲ್ಲಾರವರುಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.