ಅ.27: ಕಲ್ಲುಗುಡ್ಡೆಯಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2ನೇ ಶಾಖೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ೨ನೇ ಶಾಖೆ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿನ ಜೆ.ಜೆ.ಅಡಿಟೋರಿಯಂನಲ್ಲಿ ಅ.27ರಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ ಎಂದು ಬ್ಯಾಂಕ್‌ನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರು, ಉಪಾಧ್ಯಕ್ಷ ಕೆ.ಜಯಕರ ಪೂಜಾರಿ ಕಲ್ಲೇರಿ, ಕಲ್ಲುಗುಡ್ಡೆ ಶಾಖಾ ಸಲಹಾ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೆಯ್ಯಲ್ಗ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.

ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ ಬಳ್ಳಾಲರು ನೂತನ ಶಾಖಾ ಕಚೇರಿ ಉದ್ಘಾಟಿಸಲಿದ್ದಾರೆ. ಕಲ್ಲುಗುಡ್ಡೆ ಜೆ.ಜೆ.ಅಡಿಟೋರಿಯಂನ ಸ್ಯಾಮುವೆಲ್ ಜೋಸ್ ಭದ್ರತಾಕೋಶ ಉದ್ಘಾಟಿಸಲಿದ್ದಾರೆ. ಮಂಗಳೂರು ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಗಣಕಯಂತ್ರ ಉದ್ಘಾಟಿಸಲಿದ್ದಾರೆ. ಕಡಬ ಕ್ಷೇತ್ರದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ನಗದುಪತ್ರ ಬಿಡುಗಡೆಗೊಳಿಸಲಿದ್ದಾರೆ. ಬಳಿಕ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲುರವರ ಅಧ್ಯಕ್ಷತೆಯಲ್ಲಿ ಸಭಾ ಕಾರ‍್ಯಕ್ರಮ ನಡೆಯಲಿದ್ದು ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದರವರು ಸಭಾ ಕಾರ‍್ಯಕ್ರಮ ಉದ್ಘಾಟಿಸಲಿದ್ದಾರೆ.

ಕುಟ್ರುಪ್ಪಾಡಿ ಕ್ಷೇತ್ರದ ತಾ.ಪಂ.ಸದಸ್ಯ ಗಣೇಶ್ ಕೈಕುರೆ, ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ, ಇಚಿಲಂಪಾಡಿ ಸೈಂಟ್ ತೋಮಸ್ ಮಲಕಂಕರ ಕ್ಯಾಥೋಲಿಕ್ ಚರ್ಚ್ ಮತ್ತು ನೂಜಿಬಾಳ್ತಿಲ ಪ್ರೊ.ಕೆಥೆಡ್ರಲ್ ಚರ್ಚ್‌ನ ವಿಕಾರ್ ಫಾ.ಆಂಟನಿ, ರೆಂಜಿಲಾಡಿ ಸಾನ್‌ತೋಮ್ ಆಥೋಡೆಕ್ಸ್ ಚರ್ಚ್‌ನ ಫಾ.ವರ್ಗೀಸ್ ತೋಮಸ್, ರೆಂಜಿಲಾಡಿ ಸೈಂಟ್ ಮೆರೀಸ್ ಸೊನೊರೋ ಚರ್ಚ್‌ನ ಫಾ.ಕ್ಲಿಂಟೋ ಮ್ಯಾಥ್ಯೂ, ಪುತ್ತೂರು ಉಪವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಕೆ.ಮಂಜುನಾಥ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಕುರಿಯಾಳಕೊಪ್ಪ ಶ್ರೀ ಲಕ್ಷ್ಮೀ ಜನಾರ್ದ ದೇವಸ್ಥಾನದ ಅಧ್ಯಕ್ಷ ಮಹಾವೀರ ಜೈನ್, ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅಧ್ಯಕ್ಷ ಶಿವರಾಮ ಶೆಟ್ಟಿ, ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ವೆಂಕಟರಮಣ ಗೌಡ ಎಸ್.ಎಚ್., ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಧರ ಪೂಜಾರಿ ಕಂಪ, ಕಡಬ ಟೌನ್ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್, ಗೋಳಿಯಡ್ಕ ಎಸ್‌ಎನ್‌ಡಿಪಿ ಅಧ್ಯಕ್ಷ ಮಧುರಾಜನ್, ಕಟ್ಟತ್ತಡ್ಕ ಶ್ರೀ ನಾರಾಯಣ ಗುರು ಮಠ ಮತ್ತು ಮಿಷನ್‌ನ ಅಧ್ಯಕ್ಷ ಎಂ.ಕೆ.ಶಶಿಧರ್‌ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

1991ರಲ್ಲಿ ಕೊಯಿಲದಿಂದ ಬಿಳಿನೆಲೆಯವರೆಗಿನ 15 ಗ್ರಾಮಗಳನ್ನು ವ್ಯಾಪ್ತಿಯಾಗಿಟ್ಟುಕೊಂಡು ಆಲಂಕಾರು ಕೇಂದ್ರವಾಗಿಟ್ಟುಕೊಂಡು ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸ್ಥಾಪನೆಗೊಂಡಿತ್ತು. ೨೦೦೫ರಲ್ಲಿ ೨ಲಕ್ಷ ರೂ. ಬಂಡವಾಳದೊಂದಿಗೆ ಆಲಂಕಾರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಸಂಘ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿತು. ೨೦೧೫ರಲ್ಲಿ ಕಡಬದಲ್ಲಿ ಬ್ಯಾಂಕಿಂಗ್ ವ್ಯವಹಾರದ ಪ್ರಥಮ ಶಾಖೆ ಆರಂಭಗೊಂಡಿತ್ತು. ೨೦೧೫-೧೬ನೇ ಸಾಲಿನಲ್ಲಿ ಸಂಘ ೨೪.೫೦ ಕೋಟಿ ರೂ. ವ್ಯವಹಾರ ಮಾಡಿದ್ದು ಗ್ರಾಹಕರ ವಿಶ್ವಾಸ ಸಂಪಾದಿಸಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಘದ ನೂತನ ಕಚೇರಿ “ಬೈದಶ್ರೀ ಸಹಕಾರ ಸೌಧ” ಆಲಂಕಾರಿನಲ್ಲಿ ಉದ್ಘಾಟನೆಗೊಂಡಿತು. ಕಳೆದ ಮಹಾಸಭೆಯಲ್ಲಿ ಪ್ರಸ್ತಾಪಗೊಂಡಂತೆ ಕಲ್ಲುಗುಡ್ಡೆಯಲ್ಲಿ ಬ್ಯಾಂಕಿಂಗ್ ವ್ಯವಹಾರದ ೨ನೇ ಶಾಖೆ ಆರಂಭಗೊಳ್ಳುತ್ತಿದೆ. ಇದಕ್ಕಾಗಿ ವಸಂತ ಪೂಜಾರಿ ಬದಿಬಾಗಿಲುರವರ ಅಧ್ಯಕ್ಷತೆಯಲ್ಲಿ ಶಾಖಾ ಸಲಹಾ ಸಮಿತಿ ರಚನೆಗೊಂಡು ಕಾರ‍್ಯನಿರತವಾಗಿದೆ. ಊರ,ಪರವೂರ ಸಂಘ ಸಂಸ್ಥೆಗಳ, ಸ್ವಸಹಾಯ ಸಂಘಗಳ ಸಹಾಕರದೊಂದಿಗೆ ಬ್ಯಾಂಕಿಂಗ್ ವ್ಯವಹಾರ ಇನ್ನಷ್ಟೂ ವಿಸ್ತಾರಗೊಳ್ಳುತ್ತಿದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಆಲಂಕಾರು ತಿಳಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.