Breaking News

ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿ.ಎಸ್ ಯಡಿಯೂರಪ್ಪ ಖುಲಾಸೆ ಪುತ್ತೂರಿನಲ್ಲಿ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಹರ್ಷಾಚರಣೆ

Puttur_Advt_NewsUnder_1
Puttur_Advt_NewsUnder_1

3ಪುತ್ತೂರು: ಮೈನಿಂಗ್ ಕಂಪನಿಗೆ ಪರವಾನಿಗೆ ನೀಡಲು ಕಿಕ್ ಬ್ಯಾಕ್ ಪಡೆದ ಆರೋಪದ ಪ್ರಕರಣ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲಾ 13 ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಬಿ.ಎಸ್ ಯಡಿಯೂರಪ್ಪ ಅಭಿಮಾನಿಗಳು ಮತ್ತು ಬಿಜೆಪಿ ವತಿಯಿಂದ ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಡಾ. ಎಂ.ಕೆ.ಪ್ರಸಾದ್, ಅರುಣ್ ಕುಮಾರ್ ಪುತ್ತಿಲ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್‍ಯದರ್ಶಿ ರಾಮ್‌ದಾಸ್ ಹಾರಾಡಿ, ನಗರಸಭಾ ಸದಸ್ಯರಾದ ರಾಜೇಶ್ ಬನ್ನೂರು, ಸುಜೀಂದ್ರ ಪ್ರಭು, ಚಂದ್ರ ಸಿಂಗ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಅಶೋಕ್ ಕುಮಾರ್ ಪುತ್ತಿಲ, ಹಿಂದೂ ಜಾಗರಣಾ ವೇದಿಕೆ ನಗರ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ, ನಗರ ಸಂಚಾಲಕ ಶಶಿಕಾಂತ್, ನಗರ ಕಾರ್‍ಯದರ್ಶಿ ಗಿತೇಶ್, ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ನವೀನ್ ಪಡ್ನೂರು, ಗ್ರಾಮ ಸಮಿತಿಯ ಸಹ ಸಂಚಾಲಕ ಮೋಹನ್, ಸುಧೀರ್ ನೋಂಡಾ, ಯುವ ಮೋರ್ಛಾದ ಹರೀಶ್ ಕುಲಾಲ್, ಅಶೋಕ್ ಹಾರಾಡಿ, ಹರೀಶ್ ಆಚಾರ್ಯ, ಬಿಜೆಪಿ ಕಚೇರಿ ಕಾರ್ಯದರ್ಶಿ ರುಕ್ಮಯ್ಯ, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.