Breaking News

ಪೆಟ್ರೋಲ್ ವಿತರಕರ ಬೇಡಿಕೆ ಈಡೇರಿಕೆಗೆ ಆಗ್ರಹ ಡೀಲರ್‍ಸ್‌ಗಳಿಂದ ಪ್ರಥಮ ಹಂತದ 2ನೇ ಮುಷ್ಕರ

Puttur_Advt_NewsUnder_1
Puttur_Advt_NewsUnder_1

6

ತೈಲಕ್ಕಾಗಿ ಕ್ಯೂ ಸಂಜೆ ಗಂಟೆ 7 ರಿಂದ 15ನಿಮಿಷಗಳ ಕಾಲ ತೈಲ ಪೂರೈಕೆ ಸ್ಥಗಿತಗೊಳಿಸಿದ ತಕ್ಷಣ ನೂರಾರು ವಾಹನಗಳು ತೈಲಕ್ಕಾಗಿ ಕ್ಯೂ ನಿಲ್ಲುವಂತಾಯಿತು. ಮುಷ್ಕರದ ಬಳಿಕ ತೈಲ ಪೂರೈಕೆ ಮಾಡಲಾಯಿತು.
ಪುತ್ತೂರು: ಪೆಟ್ರೋಲ್ ವಿತರಕರ ವಿವಿಧ ಬೇಡಿಕೆ, ಸಮಸ್ಯೆಗಳನ್ನು ಈಡೇರಿಸುವಂತೆ ನವದೆಹಲಿಯ ಅಖಿಲ ಭಾರತೀಯ ಪೆಟ್ರೋಲಿಯಂ ಡೀಲರ್‍ಸ್ ಅಸೋಸಿಯೇಶನ್‌ನ ಕರೆಯ ಮೇರೆಗೆ ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್‍ಸ್ ಮಹಾಮಂಡಲ ಒಕ್ಕೂಟದಿಂದ ನಡೆಸಲುದ್ದೇಶಿಸಿರುವ ಮೂರು ಹಂತಗಳ ಸಾಂಕೇತಿಕ ಮುಷ್ಕರದ ಪ್ರಥಮ ಹಂತದ 2ನೇ ಭಾಗವಾಗಿ ಅ.26ರಂದು 15ನಿಮಿಷಗಳ ಕಾಲ ತೈಲ ಪೂರೈಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗಿದೆ.
ಪ್ರತಿಭಟನೆಯ ಪ್ರಥಮ ಹಂತವಾಗಿ ಸಂಜೆ ಗಂಟೆ 7.00ರಿಂದ7.15ರವರೆಗೆ ಕೇವಲ 15 ನಿಮಿಷಗಳ ಬ್ಲಾಕ್ ಔಟ್ ಮತ್ತು ತೈಲ ಪೂರೈಸುವಿಕೆಯನ್ನು ಸ್ಥಗಿತಗೊಳಿಸುವ ಮೂಲಕ ಸಾಂಕೇತಿಕ ಮುಷ್ಕರ ನಡೆಸುವ ಉದ್ದೇಶದಂತೆ ಅ.19ರಂದು ಮುಷ್ಕರ ನಡೆದಿತ್ತು. ಇದೀಗ ಪ್ರಥಮ ಹಂತದ 2ನೇ ಭಾಗವಾಗಿ ಅ.26ರಂದೂ ಕೂಡಾ ಮುಷ್ಕರ ನಡೆಸಲಾಗಿದೆ.
ಮೂರು ಹಂತಗಳಲ್ಲಿ ನಡೆಯುವ ಪ್ರತಿಭಟನೆ: ವ್ಯಾಪಾರದಲ್ಲಿ ಐಕ್ಯತೆಯ ಬಗ್ಗೆ ಹಾಗೂ ಪೆಟ್ರೋಲಿಯಂ ವಿತರಕರಲ್ಲಿ ಒಗ್ಗಟ್ಟಿನ ಬಗ್ಗೆ ಓಎಮ್‌ಸಿಗಳ ಮನವರಿಕೆ ಮಾಡುವುದು ಪ್ರತಿಭಟನೆಯ ಮುಖ್ಯ ಉದ್ದೇಶವಾಗಿದ್ದು, ಪೆಟ್ರೋಲ್ ವಿತರಕರ ಎಲ್ಲಾ ಬೇಡಿಕೆ, ಸಮಸ್ಯೆಗಳ ಈಡೇರಿಕೆಗಾಗಿ ಪ್ರತಿಭಟನೆಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗಿದ್ದು ನ.3ರಂದು ದ್ವಿತೀಯ ಹಂತವಾಗಿ ಪೆಟ್ರೋಲಿಯಂ ಉತ್ಪನ್ನಗಳ ಖರೀದಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಯಲಿದೆ. ಬೇಡಿಕೆ ಈಡೇರದಿದ್ದಲ್ಲಿ ನ.15ರಂದು ತೃತೀಯ ಹಂತದ ಪ್ರತಿಭಟನೆಯಾಗಿ -ನೋ ಸೇಲ್, ನೋ ಪರ್ಚೇಸ್ ಮೂಲಕ ತೈಲ ಮಾರಾಟ ಹಾಗೂ ಖರೀದಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್‍ಸ್ ಮಹಾಮಂಡಲ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಶ್ವಾಸ್ ಶೆಣೈಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.