ಪಂಚಲಿಂಗೇಶ್ವರ ಪ್ರೌಢಶಾಲಾ ಮುಖ್ಯ ಶಿಕ್ಷಕ ಸರ್ವೋತ್ತಮ ಬೋರ್ಕರ್ ಅ.31ರಂದು ಸೇವಾ ನಿವೃತ್ತಿ-ಅ.28ರಂದು ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

panchaಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಸರ್ವೋತ್ತಮ ಬೋರ್ಕರ್‌ರವರು ಅ.31ರಂದು ಸೇವಾ ನಿವೃತ್ತಿಯನ್ನು ಹೊಂದಲಿದ್ದು, ಇವರಿಗೆ ಬೀಳ್ಕೊಡುಗೆ ಸಮಾರಂಭವು ಶ್ರೀ ಪಂಚಲಿಂಗೇಶ್ವರ ಪ್ರೌಢ ಶಾಲೆಯ ಸಭಾಂಗಣದಲ್ಲಿ ಅ.28ರಂದು ಅಪರಾಹ್ನ 2 ಗಂಟೆಗೆ ನಡೆಯಲಿದೆ.
ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪುರುಷೋತ್ತಮ ಪುಣ್ಚತ್ತಾಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ನಿವೃತ್ತ ಮುಖ್ಯಗುರು ಶ್ರೀಧರ ರೈ ಭಾಗವಹಿಸಲಿದ್ದಾರೆ.
1980ರ ಆ.26ರಂದು ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿ 2013 ಎಪ್ರಿಲ್ 1ರಿಂದ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡರು. ನಿಡ್ಪಳ್ಳಿ ಗ್ರಾಮದ ಗೋಪಾಲಕೃಷ್ಣ ನಾಯಕ್ ಮತ್ತು ರುಕ್ಮಿಣಿದೇವಿ ದಂಪತಿ ಪುತ್ರರಾದ ಇವರು ಪ್ರೌಢಶಿಕ್ಷಣ ಹಾಗೂ ಬಿ.ಎಸ್.ಸಿ ಪದವಿಯನ್ನು ಪುತ್ತೂರು ಸಂತಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ಪೂರೈಸಿ ಬಿ.ಇಡಿ ಪದವಿಯನ್ನು ಮಂಗಳೂರು ಸರಕಾರಿ ಬಿ.ಇಡಿ ಕಾಲೇಜಿನಲ್ಲಿ ಪಡೆದರು. ಇವರ ಪತ್ನಿ ಸುಲೋಚನಾ ಎಸ್.ಬೋರ್ಕರ್ ಗೃಹಿಣಿಯಾಗಿದ್ದು, ಮಗ ರಾಜೇಶ್ ಬೋರ್ಕರ್ ಬಿ.ಎಸ್. ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದು ಪುತ್ರಿ ಗೀತಾ ಬಿ.ಎಸ್. ಒಳಮೊಗ್ರು ಪಂಚಾಯತ್ ಪಿ.ಡಿ.ಒ ಆಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.