Breaking News

ಜೆಸಿಐ ವಲಯ ತರಬೇತುದಾರರಾಗಿ ರಮೇಶ್ ಬಿ.ಕೆ. ಆಯ್ಕೆ

Puttur_Advt_NewsUnder_1
Puttur_Advt_NewsUnder_1

jciಪುತ್ತೂರು: ಜೆಸಿಐ ವಲಯ ತರಬೇತುದಾರರಾಗಿ ವಿಟ್ಲ ಜೇಸಿ ಘಟಕದ ಸದಸ್ಯ ರಮೇಶ್ ಬಿ.ಕೆ.ಯವರು ಆಯ್ಕೆಗೊಂಡಿದ್ದಾರೆ. ಜೆಸಿಐ ಇಂಡಿಯಾ ಜುಲೈ ತಿಂಗಳಲ್ಲಿ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ನಡೆಸಿದ ವಲಯ ತರಬೇತುದಾರರ ಕಾರ್ಯಾಗಾರದಲ್ಲಿ ಭಾಗವಹಿಸಿ ತೇರ್ಗಡೆಗೊಂಡು ಬಳಿಕ ಜೆಸಿಐ ಇಂಡಿಯಾಕ್ಕೆ ಕಾರ್ಯಯೋಜನೆ ಸಲ್ಲಿಸಿರುವ ಇವರನ್ನು ಜೆಸಿಐ ಇಂಡಿಯಾ ವಲಯ ತರಬೇತುದಾರರನ್ನಾಗಿ ಆಯ್ಕೆ ಮಾಡಿದೆ. ಅ.23ರಂದು ಉಡುಪಿಯಲ್ಲಿ ನಡೆದ ವಲಯ 15ರ ಸಮ್ಮೇಳನದಲ್ಲಿ ವಲಯಾಧ್ಯಕ್ಷರಿಂದ ಇವರು ಪ್ರಮಾಣ ಪತ್ರ ಪಡೆದರು. ಬೆಳ್ತಂಗಡಿ ತಾಲೂಕಿನ ಓಡಿಲ್‌ನಾಳ ಗ್ರಾಮದ ಶಾಂತಿಕೋಡಿ ನಿವಾಸಿಯಾಗಿರುವ ಇವರು ಪ್ರಸ್ತುತ ವಿಟ್ಲ ವಿಠಲ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಮೇಶ್ ಬಿ.ಕೆ. ಯವರು ಓರ್ವ ಜಾನಪದ ಕಲಾವಿದರು, ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಕರೂ ಆಗಿದ್ದು ತನ್ನ ಶಾಲೆಯ ಸಾಂಸ್ಕೃತಿಕ ತಂಡವನ್ನು ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟದವರೆಗೂ ತಲುಪಿಸಿದ್ದಾರೆ. ಇಂಗ್ಲೀಷ್ ಭಾಷಾ ಹಾಗೂ ವ್ಯಕ್ತಿತ್ವ ವಿಕಸನದಂತಹ ಅನೇಕ ತರಬೇತಿ ಕಾರ್ಯಾಗಾರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಇವರು ಭಾಗವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.