ರಾಜ್ಯಈಜು ಸ್ಪರ್ಧೆ: ಪುತ್ತೂರು ಅಕ್ವೆಟಿಕ್ ಕ್ಲಬ್‌ಗೆ ಹಲವು ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

swim

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅ.18 ಮತ್ತು 19ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರು ಅಕ್ವೆಟಿಕ್ ಕ್ಲಬ್‌ನ ನೆವಿಲ್ ಮಸ್ಕರೇನ್ಹಸ್ 50 ಮೀ., 100 ಮೀ., 200 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, ನೀಲ್ ಮಸ್ಕರೇನ್ಹಸ್ 50 ಮೀ. ಮತ್ತು 100 ಮೀ.  ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ನಾರ್ಬಟ್ ಮಸ್ಕರೇನ್ಹಸ್ ಮತ್ತು ಪ್ರಮೀಳಾ ದಂಪತಿಯ ಪುತ್ರರಾಗಿರುತ್ತಾರೆ.

ನಿಧಿ ಎಸ್. 200 ಮೀ. ವೈಯಕ್ತಿಕ ಮಿಡ್ಲೆಯಲ್ಲಿ ಚಿನ್ನದ ಪದಕ, 400 ಮೀ. ಫ್ರೀ ಸ್ಟೈಲ್ ಮತ್ತು 200 ಮೀ. ಫ್ರೀ ಸ್ಟೈಲಲ್ಲಿ ಕಂಚಿನ ಪದಕ ಪಡೆದಿರುತ್ತಾರೆ. ಇವರು ಶಶಿಧರ್ ಮತ್ತು ನಿರ್ಮಲಾ ದಂಪತಿಯ ಪುತ್ರಿಯಾಗಿರುತ್ತಾರೆ.  ರತನ್ ಕುಮಾರ್ 200 ಫ್ರೀ ಸ್ಟೈಲ್ ಮತ್ತು 100 ಫ್ರೀ ಸ್ಟೈಲಲ್ಲಿ ಕಂಚಿನ ಪದಕ ಪಡೆದಿರುತ್ತಾರೆ. ಇವರು ವಸಂತ ಕುಮಾರ್ ಬಿ. ಮತ್ತು ಚಂದ್ರಾವತಿ ದಂಪತಿಯ ಪುತ್ರ.

ಅತುಲ್ ಎಂ. ಭಟ್ 200 ಮೀ. ಮತ್ತು 50 ಮೀ. ಬ್ಯಾಕ್ ಸ್ಟೋಕ್‌ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ. ಇವರು ಅವಿನಾಶ್ ಗಿಳಿಯಾಲು ಮತ್ತು ಆಶಾ ಸಾವಿತ್ರಿ ಇವರ ಪುತ್ರ.  ಶ್ರೀನಿಧಿ 200 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.  ಇವರು ದಾಮೋದರ್ ಕೆ. ಎ. ಮತ್ತು ಸುಪ್ರಭಾ ಇವರ ಪುತ್ರಿ.

ನೆವಿಲ್ ಮಸ್ಕರೇನ್ಹಸ್, ನೀಲ್ ಮಸ್ಕರೇನ್ಹಸ್ ಮತ್ತು ನಿಧಿ ಎಸ್. ರಾಜ್‌ಕೋಟ್‌ನಲ್ಲಿ ನಡೆಯಲಿರುವ  ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಇವರು ಪುತ್ತೂರು ಅಕ್ವೆಟಿಕ್ ಕ್ಲಬ್‌ನ ಪಾರ್ಥ ವಾರಣಾಶಿ, ವಸಂತ ಕುಮಾರ್ ಬಿ. ಮತ್ತು ನಿರೂಪ್ ಜಿ. ಆರ್.ರವರಿಂದ ತರಬೇತಿ ಪಡೆಯುತ್ತಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.