ಕಾರ್ಯಾಡಿ ಹಿಂದೂರುದ್ರಭೂಮಿ ‘ಮೋಕ್ಷಧಾಮ’ ಲೋಕಾರ್ಪಣೆ, ಸಮುದಾಯ ಭವನ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

moksha1

moksha2

moksha3 moksha4

‘ಮೋಕ್ಷಧಾಮ’ ಇತರ ಪಂಚಾಯತ್‌ಗಳಿಗೆ ಮಾದರಿಯಾಗಲಿ

*ನ.1ರಿಂದ ಸಾರ್ವಜನಿಕ ಬಳಕೆಗೆ

*ಸಮಯ ಬೆಳಿಗ್ಗೆ  8ರಿಂದ ಸಂಜೆ 6

*ಕುಳ ,ಇಡ್ಕಿದು ಗ್ರಾಮಸ್ಥರಿಗೆ ರೂ.3000 ಶುಲ್ಕ

*ನೆರೆಯ ಗ್ರಾಮಸ್ಥರಿಗೆ ರೂ.3500 ಶುಲ್ಕ

ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್‌ನ ಕಾರ್ಯಾಡಿಯಲ್ಲಿ ನಿರ್ಮಾಣವಾಗಿರುವ ಹಿಂದೂ ರುದ್ರಭೂಮಿಯು ಇತರ ಪಂಚಾಯತ್‌ಗಳಿಗೆ ಮಾದರಿಯಾಗಲಿ. ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಇಂತಹ ಕಾರ್ಯವಾಗಲು ಸಾಧ್ಯ ಎಂದು ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ಮತ್ತು ಇಡ್ಕಿದು ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ಸುವರ್ಣ ಗ್ರಾಮ ಯೋಜನೆಯಲ್ಲಿ ನಿರ್ಮಿಸಿರುವ ಸಮುದಾಯ ಭವನ ಹಾಗೂ ಮಹಾತ್ಮಗಾಂಧಿ ರಾಷ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆ, ದಾನಿಗಳ ಸಹಕಾರದಿಂದ ಕಾರ್ಯಾಡಿಯಲ್ಲಿ ನಿರ್ಮಿಸಿರುವ ಹಿಂದೂ ರುದ್ರಭೂಮಿ ಮೋಕ್ಷಧಾಮ ಲೋಕಾರ್ಪಣೆ ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಸ್ಮಶಾನ ಎಂದರೆ ಭಯದ ವಾತಾವರಣ ಇತ್ತು ಆದರೆ ಇಲ್ಲಿನ ವಾತಾವರಣವನ್ನು ಕಂಡಾಗ ಭಯ ದೂರವಾಗಿದೆ. ಇಲ್ಲಿ ಸುತ್ತಲು ಗಾರ್ಡನ್ ಶಿವನ ಮೂರ್ತಿ, ಸತ್ಯಹರಿಶ್ಚಂದ್ರನ ಮೂರ್ತಿ ಇದೆ. ಈಗಾಗಲೇ ಪರಿಸರದಲ್ಲಿ ತೆಂಗಿನಗಿಡವನ್ನು ನೆಡಲಾಗಿದ್ದು ಮುಂದಿನ ದಿನಗಳಲ್ಲಿ ಅದು ಬೆಳೆದು ದೊಡ್ಡದಾದ ಮೇಲೆ ಇಲ್ಲಿನ ನಿರ್ವಹಣೆಗೆ ಒಂದು ದಾರಿಯಾಗಬಹುದು. ಜನರು ಒಗ್ಗಟ್ಟಿನಿಂದ ಇಂತಹ ಕಾರ್ಯ ಮಾಡಿದಾಗ ಪ್ರಾಮುಖ್ಯತೆಯೂ ಹೆಚ್ಚು ಎಂದ ಅವರು ಉಳಿದ ಗ್ರಾಮಗಳಲ್ಲಿಯೂ ಇಂತಹ ರುದ್ರಭೂಮಿ ನಿರ್ಮಾಣವಾಗಲಿ ಎಂದರು. ಸುವರ್ಣ ಗ್ರಾಮ ಯೋಜನೆಯಲ್ಲಿ ನಿರ್ಮಿಸಿರುವ ಸಮುದಾಯ ಭವನವನ್ನು ಅವರು ಉದ್ಘಾಟಿಸಿದರು.

ಮೋಕ್ಷಧಾಮವನ್ನು ಉದ್ಘಾಟಿಸಿ ಮೋಕ್ಷಧಾಮದ ಕುರಿತಾಗಿ ಇರುವ ಕೈಪಿಡಿಯನ್ನು ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರರವರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ಒಳ್ಳೆಯ ವ್ಯಕ್ತಿಗಳು ಒಟ್ಟುಸೇರಿದಾಗ ಒಳ್ಳೆಯ ಕೆಲಸ ಮಾಡಲು ಸಾಧ್ಯ. ಅಧಿಕಾರಿಗಳು ಹಾಗೂ ಗ್ರಾ.ಪಂ. ಸದಸ್ಯರು, ನಾಗರಿಕರ ಸಹಕಾರದಿಂದ ರುದ್ರಭೂಮಿ ನಿರ್ಮಿಸಿರುವುದು ಒಂದು ಪುಣ್ಯದ ಕೆಲಸವಾಗಿದೆ. ಅಲ್ಲದೆ ಯಶಸ್ಸಿನ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ತಾ.ಪಂ.ನಿಂದಾಗುವ ಅನುದಾನವನ್ನು ನೀಡಲು ನಾನು ಪ್ರಯತ್ನಿಸುತ್ತೇನೆ ಎಂದರು.

ಮೋಕ್ಷಧಾಮಕ್ಕೆ ಬರುವ ಕಾಂಕ್ರೀಟ್ ರಸ್ತೆಯನ್ನು ಜಿ.ಪಂ ಸದಸ್ಯೆ ಜಯಶ್ರೀ ಕೋಡಂದೂರುರವರು ಉದ್ಘಾಟಿಸಿದರು.

ಇಡ್ಕಿದು ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ ಬರೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಇಡ್ಕಿದು ಕ್ಷೇತ್ರದ ತಾ.ಪಂ. ಸದಸ್ಯೆ ವನಜಾಕ್ಷಿ ಎಸ್. ಭಟ್ ಮಿತ್ತೂರು, ಇಡ್ಕಿದು ಸೇವಾಸಹಕಾರಿ ಸಂಘದ ಅಧ್ಯಕ್ಷ ಬಿ. ಗೋಪಾಲಕೃಷ್ಣ ಭಟ್ ಬೈಪದವು, ಜಿ.ಪಂ. ಉಪಕಾರ್ಯದರ್ಶಿ ಎನ್. ಆರ್. ಉಮೇಶ್, ಬಂಟ್ವಾಳ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಜಿ.ಪಂ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ನರೇಂದ್ರ ಬಾಬು, ಕೋಡಿಂಬಾಡಿ ರೈ ಎಸ್ಟೇಟ್‌ನ ಮಾಲಕ ಅಶೋಕ್ ರೈ, ಮಾಸ್ಟರ್ ಪ್ಲಾನರಿಯ ಮಾಲಕ ಎಸ್. ಕೆ.ಆನಂದ ಕುಮಾರ್, ಉದ್ಯಮಿ ದಿವಾಕರ ನೇರ್ಲಾಜೆ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಟಿ ಶೈಲಜ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಅಂಕಿತ ಪ್ರಾರ್ಥಿಸಿದರು, ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಸ್ವಾಗತಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾ.ಪಂ . ಸದಸ್ಯ ಚಿದಾನಂದ ಪೆಲತ್ತಿಂಜ ವಂದಿಸಿದರು.

ಸನ್ಮಾನ... ಈ ಸಂದರ್ಭದಲ್ಲಿ ಮಾಸ್ಟರ್ ಪ್ಲಾನರಿಯ ಮಾಲಕ ಎಸ್.ಕೆ ಆನಂದ, ಉದ್ಯಮಿ ದಿವಾಕರ ನೇರ್ಲಾಜೆ, ಜಿ.ಪಂ ಉಪಕಾರ್ಯದರ್ಶಿ ಎನ್. ಆರ್ ಉಮೇಶ್, ಇಡ್ಕಿದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೋಕುಲ್‌ದಾಸ್ ಭಕ್ತ, ಗ್ರಾ.ಪಂ ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಗ್ರಾಪಂ ಸದಸ್ಯ ಜಯರಾಮ ಕಾರ್ಯಾಡಿಗುತ್ತುರವರನ್ನು ಸನ್ಮಾನಿಸಲಾಯಿತು.

ಮುಸ್ಲಿಮರ ದಫನ ಭೂಮಿಗೆ ಸ್ಥಳ ಮೀಸಲು: ಕಾರ್ಯಾಡಿಯ ಹಿಂದೂ ರುದ್ರಭೂಮಿಯ ಪಕ್ಕದಲ್ಲಿ 25 ಸೆಂಟ್ಸ್ ಸ್ಥಳವನ್ನು ಮುಸ್ಲಿಂಮರ ದಫನ ಭೂಮಿಗಾಗಿ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ದಾಖಲೆ ಮುಖಾಂತರ ಕಾರ್ಯಾಡಿ ಜುಮಾ ಮಸೀದಿಗೆ ಅದರ ಹಸ್ತಾಂತರ ನಡೆಯಲಿದೆ.

ನ.1ರಿಂದ ಸಾರ್ವಜನಿಕ ಬಳಕೆಗೆ: ಲೋಕಾರ್ಪಣೆಯಾಗಿರುವ ಹಿಂದೂ ರುದ್ರಭೂಮಿ ನ.೧ರಿಂದ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದ್ದು, ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕಾರ್ಯ ನಿರ್ವಹಿಸಲಿದೆ. ಕುಳ, ಇಡ್ಕಿದು ಗ್ರಾಮಸ್ಥರಿಗೆ ರೂ.3000, ನೆರೆಯ ಗ್ರಾಮಸ್ಥರಿಗೆ ರೂ.3500 ಶುಲ್ಕ ನಿಗದಿ ಮಾಡಲಾಗಿದೆ. ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಇಡ್ಕಿದು ಗ್ರಾ.ಪಂ.ನ್ನು ಸಂಪರ್ಕಿಸಬಹುದು. ಇಲ್ಲವಾದಲ್ಲಿ ಇಡ್ಕಿದು ಗ್ರಾಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಸದಸ್ಯರಾದ ಚಿದಾನಂದ ಪೆಲತ್ತಿಂಜ, ಜಯರಾಮ ಕಾರ್ಯಾಡಿಗುತ್ತುರವರನ್ನು ಸಂಪರ್ಕಿಸಬಹುದಾಗಿದೆ. ಮುಂದಿನ ಒಂದು ವರ್ಷದವರೆಗೆ ಇಡ್ಕಿದು ಸೇವಾ ಸಹಕಾರಿ ಸಂಘದ ವತಿಯಿಂದ ಓರ್ವ ಸಿಬ್ಬಂದಿಯನ್ನು ನೇಮಿಸಲಾಗುವುದು.

ಸಮವಸ್ತ್ರ ಧರಿಸಿ ಗಮನ ಸೆಳೆದ ಗ್ರಾ.ಪಂ. ಸಿಬ್ಬಂದಿ, ಸದಸ್ಯರು: ಕಾರ್ಯಕ್ರಮದ ಪ್ರಯುಕ್ತ ಇಡ್ಕಿದು ಗ್ರಾ.ಪಂ. ಅಧಿಕಾರಿ, ಸಿಬ್ಬಂದಿ ಹಾಗೂ ಗ್ರಾ.ಪಂ. ಸದಸ್ಯರು ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದರು.

ರುದ್ರ ಪಾರಾಯಣ.: ಕಾರ್ಯಾಡಿ ಹಿಂದೂ ರುದ್ರಭೂಮಿ ಮೋಕ್ಷಧಾಮದಲ್ಲಿ ಬೆಳಿಗ್ಗೆ 7ರಿಂದ 8ರ ವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರುದ್ರ ಸಮಿತಿ ವತಿಯಿಂದ ರುದ್ರ ಪಾರಾಯಣ ನಡೆಯಿತು.

ಗಾರ್ಡನ್ ರಚನೆ.: ರುದ್ರಭೂಮಿಯ ಪರಿಸರದಲ್ಲಿ  ವಿಶೇಷ ಆಕರ್ಷಣೆಯಾಗಿರುವ ಶಿವನ ಮೂರ್ತಿಯನ್ನು ಹಾಗೂ ಅದರ ಸುತ್ತಲಿನ ಗಾರ್ಡನನ್ನು ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದರವರು ಹಾಗೂ ಹರಿಶ್ಚಂದ್ರನ ಮೂರ್ತಿಯನ್ನು ದಿವಾಕರ  ನೇರ್ಲಾಜೆಯವರು ನೀಡಿದ್ದಾರೆ. ಇನ್ನೊಂದು ಭಾಗದ ಗಾರ್ಡನನ್ನು ಅಳಕೆಮಜಲು ನಿನ್ನಿಕಲ್ಲು ನರ್ಸರಿಯ ಮಾಲಕ ಜಾಕ್ ಅನಿಲ್ ಹಾಗು ಉರಿಮಜಲು ನವೋದಯ ಅಗ್ರಿಫಾರ್ಮ್ ಮಾಲಕ ಎಂ.ಬಿ ರವೀಂದ್ರರವರು ಕೊಡುಗೆಯಾಗಿ ಮಾಡಿಕೊಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.