Breaking News

ನ.1ಕ್ಕೆ ಯುವ ಬಂಟರ ಸಂಘದಿಂದ ’ಬಂಟ್ರೆ ಗಮ್ಮತ್ ’ 

Puttur_Advt_NewsUnder_1
Puttur_Advt_NewsUnder_1

img_20161027_103846

ಪುತ್ತೂರು: ತುಳು ಬಾಷೆಯನ್ನು ಬೆಳೆಸುವ ಮತ್ತು ದೀಪಾವಳಿ ಹಬ್ಬಗಳ ಆಚರಣೆ ಹಾಗೂ ಮಸ್ಕಿರಿ ಕೂಟೊ, ಸಂಪ್ರದಾಯ ಭರಿತ ಹಲವು ಆಟಗಳ ನಡುವೆ ಬಂಟ್ರೆ ತಮ್ಮನ ಕೂಟವನ್ನು ಮಾಡುವ ವಿಶೇಷ ಕಾರ‍್ಯಕ್ರಮ ’ಬಂಟ್ರೆ ಗಮ್ಮತ್’ ನ.1 ರಂದು ಪರ್ಪುಂಜ ವಿರಾಮದ ಮನೆಯಲ್ಲಿ ಜರುಗಲಿದೆ ಎಂದು ಯುವ ಬಂಟರ ಸಂಘದ ಅಧ್ಯಕ್ಷ ಸೀತಾರಾಮ್ ಶೆಟ್ಟಿ ಕಂಬಳತ್ತಡ್ಡರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಯುವ ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ತಾಲೂಕು ಬಂಟರ ಸಂಘ, ಮಹಿಳಾ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘದ ಸಹಯೋಗದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ ಕಾರ‍್ಯಕ್ರಮ ನಡೆಯಲಿದ್ದು, ಬೆಳಿಗ್ಗೆ ಎಂ.ಆರ್.ಪಿ.ಎಲ್. ಮಂಗಳೂರಿನ ಸೀತಾರಾಮ ರೈ ಕೈಕಾರರವರು ಕಾರ‍್ಯಕ್ರಮ ಉದ್ಘಾಟಿಸಲಿದ್ದಾರೆ. ಒಳಮೊಗ್ರು ಗ್ರಾ.ಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಕುಂಬ್ರ ವಿ.ಎಸ್.ಎಸ್.ಎನ್ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ್‌ಚಂದ್ರ ರೈ ಕೈಕಾರ, ಪ್ರಗತಿಪರ ಕೃಷಿಕ ಶಶಿಕಿರಣ್ ನೂಜಿಬೈಲು, ಯುವ ಉದ್ಯಮಿ ರತ್ನಾಕರ ರೈ ಕೆದಂಬಾಡಿಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ನಡೆಯುವ ಬಂಟ್ರೆ ಗಮ್ಮತ್ ಕಾರ‍್ಯಕ್ರಮವನ್ನು ರಾಜ್ಯ ಸಂಸದೀಯ ಕಾರ‍್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಂಟರ ಮಾತೃ ಸಂಘದ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಕಾವುರವರು ನಲಿಕೆದ ಕೂಟವನ್ನು ಉದ್ಘಾಟಿಸಲಿದ್ದಾರೆ. ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಕುಮುದಾ ಎಲ್.ಎನ್.ಶೆಟ್ಟಿ, ಯುವ ಉದ್ಯಮಿ ಅರುಣ್ ರೈ ಡಿಂಬ್ರಿ ಉಪಸ್ಥಿತಿಯಲ್ಲಿರುತ್ತಾರೆ. ಇದೇ ಸಂದರ್ಭದಲ್ಲಿ ತಾಂಡವ ನೃತ್ಯ ಕಲಾಕೇಂದ್ರದ ವತಿಯಿಂದ ತುಳು ಧಾರವಾಹಿ ನಟಿ ಸುಮನ್ವಿ ರೈ ಮದಕ ಮತ್ತು ವಿದ್ಯಾಶ್ರೀ ರೈ ಕರ್ನೂರುರವರಿಂದ ನಾಟ್ಯ ವೈಭವ ಕಾರ‍್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಆಶಯ ಕಾರ‍್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಭಾಗವಹಿಸಲಿದ್ದಾರೆ. ದೀಪಕ್ ರೈ ಪಾಣಾಜೆ ಮತ್ತು ಬಳಗದವರು ಮಸ್ಕಿರಿ ಕಾರ‍್ಯಕ್ರಮ ನಡೆಸಿಕೊಡಲಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘದ ಯುವಜನ ವಿಭಾಗದ ಗೌರವಾಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ಮಸ್ಕಿರಿ ಕಾರ‍್ಯಕ್ರಮ ಉದ್ಘಾಟಿಸಲಿದ್ದಾರೆ. ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಕಲಾವಿದ ಸುಂದರ ರೈ ಮಂದಾರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಮಧ್ಯಾಹ್ನ ನಡೆಯುವ ಸಂಪ್ರದಾಯ ಭರಿತ ಆಟಗಳನ್ನು ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೊರ್ಮಂಡ ಉದ್ಘಾಟಿಸಲಿದ್ದಾರೆ. ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಕಬಡ್ಡಿ ಎಸೋಸಿಯೇಶನ್‌ನ ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುನೀತ್ ರೈ ಕುರಿಯ ಏಳ್ನಾಡುಗುತ್ತು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೆ.ಸಿ.ಐ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಗೆಣಸಿನಕುಮೇರು ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ಯುವ ಬಂಟರ ಸಂಘದ ಕಾರ‍್ಯದರ್ಶಿ ಪ್ರಕಾಶ್ ರೈ ಸಾರಕೆರೆ, ಕೋಶಾಧಿಕಾರಿ ನವೀನ್ ರೈ ಪಂಜಳ, ಬಂಟರ ಸಂಘದ ಕೋಶಾಧಿಕಾರಿ ಶಶಿಕುಮಾರ್ ರೈ ಬಾಲ್ಯೊಟ್ಟು ಉಪಸ್ಥಿತರಿದ್ದರು.

ಬೆಳಿಗ್ಗೆ ಗಂಟೆ 9ಕ್ಕೆ ಬಿನ್ನೆರೆ ದಿಬ್ಬಣ ಕೂಟೊ 

9.15ಕ್ಕೆ ಕಾಂಡೆದ ತಿಂಡಿ ತೆನಸ್‌ದ ಕೂಟೊ 

9.45ಕ್ಕೆ ಬಂಟ್ರೆ ಗಮ್ಮತ್ ಉದಿಪನ, ನಲಿಕೆದ ಕೂಟೊ 

10.00ಕ್ಕೆ ನಾಟ್ಯ ವೈಭವ 

10.30ಕ್ಕೆ ಆಶಯ ಪಾತೆರ 

11.00ಕ್ಕೆ ಮಸ್ಕಿರಿ ಕೂಟೊ 

12.00ಕ್ಕೆ ಗೊಬ್ಬುದ ಕಲ ಉದಿಪನ 

ಸಬಿ ಸವಾಲ್ – ರಂಗ್‌ದ ಗೊಬ್ಬುಲು 

1.30ಕ್ಕೆ ಬಂಟ್ರೆ ತಮ್ಮನ 

ಸಂಪ್ರದಾಯ ಭರಿತ ಆಟಗಳು

ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ತೆಂಗಿನ ಕಾಯಿ ಕುಟ್ಟುವುದು, ಸಂಗೀತ ಕುರ್ಚಿ, ನಿಧಿ ಹುಡುಕುವುದು ನಡೆಯಲಿದೆ. ಒಂದು ನಿಮಿಷದ ಸ್ಪರ್ಧೆಯಲ್ಲಿ ವಿವಿಧ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯಲಿದೆ. ಸ್ಪರ್ಧೆಯ ನಡೆದ ತಕ್ಷಣ ಬಹುಮಾನ ವಿತರಣೆ ನಡೆಯಲಿದೆ ಎಂದು ಬಂಟರ ಸಂಘದ ಕಾರ‍್ಯದರ್ಶಿ ನಿರಂಜನ ರೈ ಮಠಂತಬೆಟ್ಟು ಹೇಳಿದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.