‘ಸಂತೆಗೆ ಕಿಲ್ಲೆ ಮೈದಾನದಲ್ಲೇ ಅವಕಾಶ’ ಪುತ್ತೂರು ನಗರ ಕಾಂಗ್ರೆಸ್‌ನಿಂದ ಎ.ಸಿ, ಶಾಸಕಿಯವರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

20161027_145922

ಪುತ್ತೂರು: ನಗರದ ಕಿಲ್ಲೆ ಮೈದಾನದಿಂದ ಎಪಿಎಂಸಿಗೆ ಸ್ಥಳಾಂತರಗೊಂಡಿರುವ ಸಂತೆಗೆ ಅಲ್ಲಿ ಪೂರಕವಾದ ಜನಸ್ಪಂದನೆ ದೊರೆಯದೇ, ನಿರಂತರ ಗೊಂದಲಗಳು ನಡೆಯುತ್ತಿದೆ, ಹಾಗಾಗಿ ವಾರದ ಸಂತೆಗೆ ಕಿಲ್ಲೆ ಮೈದಾನದಲ್ಲೇ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಪುತ್ತೂರು ನಗರ ಕಾಂಗ್ರೆಸ್‌ನಿಂದ ಅ.27ರಂದು ಸಹಾಯಕ ಕಮೀಷನರ್‌ಗೆ ಮತ್ತು ಶಾಸಕಿಯವರಿಗೆ ಮನವಿ ಸಲ್ಲಿಸಲಾಯಿತು.
ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈಯವರು ಮನವಿಯನ್ನು ಓದಿ ಹೇಳಿ, ಸಹಾಯಕ ಕಮೀಷನರ್ ಅನುಪಸ್ಥಿತಿಯಲ್ಲಿ ಕಛೇರಿ ಮೆನೇಜರ್ ಬಾಬು ನಾಯ್ಕರವರಿಗೆ ಮನವಿ ಹಸ್ತಾಂತರಿಸಿದರು. ಬಳಿಕ ಶಾಸಕಿ ಶಕುಂತಳಾ ಶೆಟ್ಟಿಯವರ ಕಛೇರಿಗೆ ತೆರಳಿ ಶಾಸಕಿಯವರ ಅನುಪಸ್ಥಿತಿಯಲ್ಲಿ ಶಾಸಕರ ಆಪ್ತ ಸಹಾಯಕ ಸುಧಾಕರ ರೈಯವರಲ್ಲಿ ಮನವಿ ನೀಡಲಾಯಿತು.
ನಗರಸಭೆಯ ಮುಂಭಾಗದ ಕಿಲ್ಲೆಮೈದಾನದಲ್ಲಿ ಶತಮಾನಗಳಿಂದ ನಡೆಯುತ್ತಿದ್ದ ಸಂತೆಯನ್ನು ಕಳೆದ ಎರಡು ತಿಂಗಳ ಹಿಂದೆ ಎಪಿಎಂಸಿಗೆ ಸ್ಥಳಾಂತರಿಸಿದ್ದರೂ ಅಲ್ಲಿ ಸಂತೆಗೆ ಪೂರಕವಾದ ಜನಸ್ಪಂದನೆ ದೊರೆಯದೇ, ದಿನನಿತ್ಯ ಹಲವು ರೀತಿಯ ವ್ಯತಿರಿಕ್ತ ಬದಲಾವಣೆಗಳು ಆಗುತ್ತಿದ್ದು, ಜನತೆ ನಿರಂತರ ಗೊಂದಲಗಳಿಗೆ ಒಳಗಾಗುತ್ತಿದ್ದಾರೆ, ಅಧಿಕಾರಿ ವರ್ಗ, ಜನಪ್ರತಿನಿಧಿಗಳ ನಡುವೆಯೂ ಸಂಘರ್ಷದ ಹಾದಿ ನಿರ್ಮಾಣವಾಗುತ್ತಿದೆ, ಒಟ್ಟಿನಲ್ಲಿ ಜನತೆ ಮತ್ತು ಸಂತೆಯಲ್ಲಿ ವ್ಯಾಪಾರ ನಡೆಸುವ ಕೃಷಿಕರು, ವ್ಯಾಪಾರಸ್ಥರಿಗೆ ಸಂತೆ ಸ್ಥಳಾಂತರದಿಂದ ತೀವ್ರ ಹೊಡೆತ ಬಿದ್ದಿದ್ದು ಮಾರುಕಟ್ಟೆ ಸಂಪೂರ್ಣ ಕುಸಿದಿದೆ, ಕೃಷಿಯೇತರ ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡುವುದು ಅಸಾಧ್ಯವಾಗಿದೆ, ಪುತ್ತೂರಿನ ಸಂತೆ ಎಂಬುದು ಭಾವನಾತ್ಮಕ ವಿಷಯ ಆಗಿದ್ದು, ಈ ಹಿಂದೆ ನಡೆಯುತ್ತಿದ್ದಂತೆ ಸಂತೆಯನ್ನು ಕಿಲ್ಲೆ ಮೈದಾನದಲ್ಲೇ ನಡೆಸಲು ಅನುವು ಮಾಡಿಕೊಡಬೇಕು ಆ ಮೂಲಕ ಸಂತೆಯ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ನಗರ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಖ್ ಸಾಲ್ಮರ, ಪ್ರಧಾನ ಕಾರ್ಯದರ್ಶಿ ಸಾದಿಕ್ ಬರೆಪ್ಪಾಡಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕೋಶಾಧಿಕಾರಿ ಯಾಕೂಬ್, ಪುಡಾ ಸದಸ್ಯ ಸುದೇಶ್ ನಾಕ್ ಚಿಕ್ಕಪುತ್ತೂರು, ಚಂದ್ರಶೇಖರ ಪಡೀಲ್, ಬಾಲಕೃಷ್ಣ ರೈ ನೆಲ್ಲಿಕಟ್ಟೆ, ಸೂರಜ್ ಶೆಟ್ಟಿ, ಶ್ರೀಧರ್ ಭಂಡಾರಿ ಪಡೀಲ್, ರೋಶನ್ ಭಂಡಾರಿ ಪಡೀಲ್, ಅಬ್ದುಲ್ ರಜಾಕ್ ಪಡೀಲ್, ಪೂರ್ಣೇಶ್ ಮಂಜಲ್ಪಡ್ಪು, ಎ.ಪಿ.ಜೆ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.