ವಿದ್ಯಾಭಾರತಿ ರಾಷ್ಟ್ರೀಯ ಖೋ-ಖೋ;  ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ

Puttur_Advt_NewsUnder_1
Puttur_Advt_NewsUnder_1

img-20161025-wa0002_2

ಪುತ್ತೂರು: ಉತ್ತರ ಪ್ರದೇಶದ ಗಜಿಯಾಬಾದ್‌ನ ಸರಸ್ವತಿ ವಿದ್ಯಾಮಂದಿರದಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಡೆದ ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. 17 ವರ್ಷದ ಒಳಗಿನ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದಂತಹ ೮ ತಂಡಗಳಲ್ಲಿ ಈ ವಿಭಾಗ ಸ್ಪರ್ಧಿಸಿದ್ದು ಶಾಲಾ ತಂಡ ಪ್ರಥಮ ಸ್ಥಾನದೊಂದಿಗೆ ನವೆಂಬರ್‌ನಲ್ಲಿ ಛತ್ತೀಸ್‌ಗಡ್‌ನಲ್ಲಿ ನಡೆಯಲಿರುವ ಸ್ಕೂಲ್‌ಗೇಮ್ಸ್ ಫೆಡರೇಶನ್‌ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತದೆ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ತರಬೇತುದಾರರಾಗಿ ಹಾಗೂ ಕ್ರೀಡಾಕೂಟದಲ್ಲಿ ಧನ್ಯಶ್ರೀ (ಅಜೇಯನಗರ ನಿವಾಸಿ ಈಶ್ವರಗೌಡ ಮತ್ತುದೇವಕಿ ದಂಪತಿ ಪುತ್ರಿ), ಗುಣಶ್ರೀ (ಕೋಡಿ ಮನೆ ಮೋನಪ್ಪಗೌಡ ಮತ್ತು ನಳಿನಿ ದಂಪತಿ ಪುತ್ರಿ), ಗೀತಶ್ರೀ (ಕೋಡಿ ಮನೆ ಮೋನಪ್ಪಗೌಡ ಮತ್ತು ನಳಿನಿ ದಂಪತಿ ಪುತ್ರಿ), ಭಾಗ್ಯಶ್ರೀ (ಮಣಿಯಡ್ಕ  ನಾರಾಯಣ ನಲ್ಕೆ ಮತ್ತು ಲೀಲಾ ದಂಪತಿ ಪುತ್ರಿ), ಅನುಶ್ರೀ (ಪಡ್ಡಾಯೂರು ನಿವಾಸಿ ಬಾಲಕೃಷ್ಣ ಮತ್ತು ವಿಶಾಲಾಕ್ಷಿ ದಂಪತಿ ಪುತ್ರಿ), ಕಾವ್ಯಶ್ರೀ (ಲಿಂಗದಗುಡ್ಡೆ ಉಮೇಶ್ ಗೌಡ ಮತ್ತು ಗೀತಾ ದಂಪತಿ ಪುತ್ರಿ), ಸ್ವಾತಿ ಎನ್ (ಸಿಟಿಗುಡ್ಡೆ ಮೋಹನ ಆಚಾರ್ಯ ಮತ್ತು ರೇವತಿ ದಂಪತಿ ಪುತ್ರಿ), ಅಪೂರ್ವ (ಪೆರಿಯತ್ತೋಡಿ ನಿವಾಸಿ ಕೇಶವ ಪೂಜಾರಿ ಮತ್ತು ರಾಧಾ ದಂಪತಿ ಪುತ್ರಿ), ರಶ್ಮಿತಾ (ಬಾರೆಕೊಲಾಡಿ ಬಿ.ಕೆ ಸುಂದರ ನಾಯ್ಕ ಮತ್ತು ಪ್ರಸನ್ನಕುಮಾರಿ ದಂಪತಿ ಪುತ್ರಿ), ಫಾತಿಮತ್‌ಅಫಿಜಾ (ನಿಕ್ಕಲು ನಿವಾಸಿ ಕೆ. ಜುಬೈರ್ ಮತ್ತು ಆಸ್ಮಾ.ಬಿ ದಂಪತಿ ಪುತ್ರಿ), ಚೈತ್ರಾ(ಇಂದಿರಾನಗರ ನಿವಾಸಿ ಬಿ.ಎಸ್ ಬಾಬು ಪೂಜಾರಿ ಮತ್ತು ಸುಶೀಲ ದಂಪತಿ ಪುತ್ರಿ), ನವ್ಯ(ಬಂದಾರು ನಿವಾಸಿ ಗಂಗಾಧರ ಮತ್ತು ಸರಸ್ವತಿ ದಂಪತಿ ಪುತ್ರಿ) ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.