Breaking News

ನ.27: ಪುತ್ತೂರಿನಲ್ಲಿ ದೈವಾರಾಧಕರ ಸಮಾವೇಶ-ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

2610rjh7_2

ಪುತ್ತೂರು: ದೈವಾರಾಧಕರ ಕೇಂದ್ರ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ನಡೆಯುವ ಮೊತ್ತಮೊದಲ ದೈವಾರಾಧಕರ ಸಮಾವೇಶವು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ನ. 27 ರಂದು ನಡೆಯಲಿದೆ. ಸಮಾವೇಶದ ಸಿದ್ಧತೆ ಹಾಗೂ ಸಮಾವೇಶ ಸಮಿತಿ ರಚನೆಯ ಕುರಿತು ಅ.26ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಮಾವೇಶ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ದೈವಾರಾಧನೆಯ ಸಂಪ್ರದಾಯ ಹಾಗೂ ಆಚರಣೆಗಳ ಕುರಿತಂತೆ ಪ್ರತಿಯೊಬ್ಬರಿಗೂ ತಿಳಿಯಬೇಕೆಂಬ ದೃಷ್ಟಿಯಿಂದ, ಧರ್ಮ ಪರಂಪರೆ ಉಳಿಯಬೇಕೆಂಬ ದೃಷ್ಟಿಯಿಂದ ಆಯೋಜಿಸಿರುವ ಕಾರ್ಯಕ್ರಮ ಅತ್ಯಂತ ಪ್ರಸ್ತುತವಾಗಿದೆ, ದೈವಾರಾಧನಾ ವ್ಯವಸ್ಥೆಯಲ್ಲಿ ಬರುವ ಎಲ್ಲರನ್ನೂ ಸೇರಿಸಿಕೊಂಡು ಕಾರ್ಯಕ್ರಮ ಆಯೋಜನೆಯಾಗಲಿದೆ ಎಂದರು.

ಸಾಹಿತಿ, ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ತುಳುನಾಡಿನವರು ದೇವರು, ದೈವಗಳ ಆರಾಧನೆಯೊಂದಿಗೆ ಬದುಕುವವರು. ಇದು ಪವಿತ್ರ ಕೆಲಸ ಎಂದು ನಂಬಿದವರು. ಗುರು ಹಿರಿಯರ ಆಶೀರ್ವಾದದೊಂದಿಗೆ ಎಲ್ಲರೂ ಒಟ್ಟುಸೇರಿ ಸಮಾವೇಶದ ಯಶಸ್ಸಿಗಾಗಿ ಕೆಲಸ ಮಾಡೋಣ ಎಂದರು.

ಸಮಾವೇಶದ ರೂಪುರೇಷೆಗಳ ಬಗ್ಗೆ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಮಾಹಿತಿ ನೀಡಿದರು.

ಸಮಾವೇಶ ಹೀಗೆ ನಡೆಯಲಿದೆ:

ನ. 27 ರಂದು ನಡೆಯಲಿರುವ ದೈವಾರಾಧಕರ ಸಮಾವೇಶದಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಧ್ವಜಾರೋಹಣದ ಬಳಿಕ ಸಮಾವೇಶ ಉದ್ಘಾಟನೆ, ಎರಡು ಗೋಷ್ಠಿಗಳಲ್ಲಿ 6 ಮಂದಿ ಸಂಪನ್ಮೂಲ ವ್ಯಕ್ತಿಗಳಿಂದ ತುಳು ಭಾಷೆ, ದೈವಾರಾಧನೆಯಲ್ಲಿ ನ್ಯಾಯ, ಸತ್ಯ, ಧರ್ಮ, ಯಕ್ಷಗಾನದ ಮೇಲೆ ದೈವಾರಾಧನೆ ಪ್ರಭಾವ ಮೊದಲಾದ ವಿಷಯಗಳಲ್ಲಿ ಗೋಷ್ಠಿಗಳನ್ನು ನಡೆಸುವುದು, ಊಟದ ಬಳಿಕ ಸಭಾ ಕಾರ್ಯಕ್ರಮ, ಸಂಜೆ ತುಳುವಿಗೆ ಸಂಬಂಧಿಸಿದ ನಾಟಕ ಪ್ರದರ್ಶನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪುತ್ತೂರು ತುಳು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಭಂಡಾರಿ ಹೆಬ್ಬಾರಬಲು, ದೈವಾರಾಧಕರ ಕೂಟ ಕ್ಷೇತ್ರ ಸಮಿತಿಯ ವಿಟ್ಲ ಅರಮನೆಯ ಕೃಷ್ಣಯ್ಯ, ಜಯಪ್ರಕಾಶ್ ನೂಜಿಬಲು, ಲೋಕಯ್ಯ ಸೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವಹಿಸಿದವರು ವಿವಿಧ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ನೀಡಿದರು.

ಸಮಾವೇಶ ಸಮಿತಿ ಸಂಚಾಲಕ ಡಾ| ನವೀನ್ ಕುಮಾರ್ ಮರಿಕೆ ಸ್ವಾಗತಿಸಿ, ಸಹ ಸಂಚಾಲಕ ಸಂಕೇತ್ ವಂದಿಸಿದರು.

ಸಮಾವೇಶ ಸಮಿತಿ ರಚನೆ

27

ದೈವಾರಾಧಕರ ಸಮಾವೇಶದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸಮಾವೇಶ ಸಮಿತಿ ಅಧ್ಯಕ್ಷರಾಗಿ ಜಯಂತ ನಡುಬೈಲು, ಕಾರ್ಯಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಸಂಚಾಲಕರಾಗಿ ಡಾ| ನವೀನ್ ಕುಮಾರ್ ಮರಿಕೆ ಅವರನ್ನು ಆಯ್ಕೆ ಮಾಡಲಾಯಿತು ಹಾಗೂ ವಿವಿಧ ಉಪ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.