“ಚೀನಾ ಪಟಾಕಿ ಮಾರಾಟ ನಿಷೇಧ, ರಾಜ್ಯದಲ್ಲಿ ಹಿಂದೂ ನಾಯಕರಿಗೆ ರಕ್ಷಣೆ”

Puttur_Advt_NewsUnder_1
Puttur_Advt_NewsUnder_1

2

ಹಿಂದೂ ಜನಜಾಗೃತಿ ವೇದಿಕೆಯಿಂದ ಸರಕಾರಕ್ಕೆ ಮನವಿ : ಶತ್ರುದೇಶದ ಪಟಾಕಿಯನ್ನು ಮಾರಾಟ ಮಾಡಿ, ಭಾರತದ ವಿರುದ್ಧ ಭಯೋತ್ಪಾದನೆಗೆ ಬೆಂಬಲ ನೀಡುವುದು ದೇಶದ ಸೈನಿಕರಿಗೆ ಮತ್ತು ದೇಶಕ್ಕೇ ಮಾಡಿದ ಅನ್ಯಾಯವಲ್ಲವೇ? ಅದಕ್ಕಾಗಿ ಭಾರತ ದೇಶವು ಆರ್ಥಿಕ ಸಂಕಟ, ಭಯೋತ್ಪಾದನೆಯ ಸಂಕಟ ಮತ್ತು ಶತ್ರುಗಳ ಉಪಟಳದಲ್ಲಿ ಇರುವಾಗ ಶತ್ರುದೇಶದ ಪಟಾಕಿಗಳ ಮಾರಾಟ ಮಾಡಬಾರದೆಂದು ಮನವಿಯಲ್ಲಿ ವಿನಂತಿಸಿದ್ದಾರೆ
.

ಪುತ್ತೂರು: ಶತ್ರುದೇಶ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಕುತಂತ್ರ ಬುದ್ಧಿಯ ಚೀನಾ ಪಟಾಕಿಯ ಮಾರಾಟವನ್ನು ನಿಲ್ಲಿಸುವಂತೆ ಮತ್ತು ಕರ್ನಾಟಕದಲ್ಲಿ ಹಿಂದೂ ನಾಯಕರಿಗೆ ರಕ್ಷಣೆ ನೀಡಬೇಕು ಎಂದು ಹಿಂದೂ ಜನಜಾಗೃತಿ ವೇದಿಕೆ ವತಿಯಿಂದ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಭಾರತವು ಶತ್ರು ದೇಶವಾದ ಪಾಕಿಸ್ತಾನದ ಭಯೋತ್ಪಾದನೆಯಿಂದ ನರಳುತ್ತಿದೆ. ನಮ್ಮ ಅನೇಕ ಸೈನಿಕರ ಬಲಿದಾನವಾಯಿತು. ದೇಶದ ಸೈನಿಕರು ಶತ್ರುದೇಶ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದಕ್ಕೆ ಸಂಪೂರ್ಣ ದೇಶದ ನಾಗರಿಕರು ಮಾತ್ರವಲ್ಲ, ವಿಶ್ವದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ ನಿರಂತರ ಭಾರತಕ್ಕೆ ಮೋಸ ಮಾಡುವ ಕುತಂತ್ರ ಬುದ್ಧಿಯ ಚೀನಾ ಮಾತ್ರ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ. ಹೀಗಿರುವಾಗ ಶತ್ರುದೇಶ ಚೀನಾಗೆ ಪಾಠ ಕಲಿಸಲು ದೇಶದ ಎಲ್ಲಾ ನಾಗರಿಕರು ಚೀನಾ ಪಟಾಕಿ ಬಹಿಷ್ಕರಿಸುವಂತೆ ದೇಶವ್ಯಾಪಿ ಆಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ ಭಾಗವಹಿಸುವುದರಿಂದ ಶತ್ರುದೇಶ ಪಾಕಿಸ್ತಾನ ಮತ್ತು ಚೀನಾಗೆ ಯೋಗ್ಯ ಪಾಠ ಕಲಿಸಿದಂತಾಗುತ್ತದೆ.
ಚೀನಾ ಮಾರಾಟ ಮಾಡುತ್ತಿರುವ ಪಟಾಕಿಗಳಲ್ಲಿ ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಅತ್ಯಂತ ಹಾನಿಕಾರಕ ರಸಾಯನಗಳು ಇದ್ದು, ದೆಹಲಿ ಪರಸರ ಇಲಾಖೆಯ ಸೂಚನೆ ಮೇರೆಗೆ ದೆಹಲಿ ಸರಕಾರವು ಚೀನಾ ಪಟಾಕಿಯ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿದೆ. ಹಿಂದೂ ದೇವತೆಗಳ, ರಾಷ್ಟ್ರ ಪುರುಷರ ಚಿತ್ರವಿರುವ ಪಟಾಕಿಗಳನ್ನು ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದೂ ಮನವಿಯಲ್ಲಿ ಕೋರಲಾಗಿದೆ.
ಕರ್ನಾಟಕದಲ್ಲಿ ಹಿಂದೂ ನಾಯಕರಿಗೆ ರಕ್ಷಣೆ ನೀಡಬೇಕು: ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್. ರುದ್ರೇಶರವರನ್ನು ಹಾಡಹಗಲೇ ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದಕ್ಕೂ ಮೊದಲೂ ಕರ್ನಾಟಕದಲ್ಲಿ ಮೈಸೂರಿನ ಹಿಂದೂ ನಾಯಕ ಕೆ. ರಾಜು, ಮೂಡಬಿದ್ರೆಯ ಗೋರಕ್ಷಕ ಪ್ರಶಾಂತ ಪೂಜಾರಿ, ಕುಶಾಲ ನಗರದ ಹಿಂದೂ ಕಾರ್ಯಕರ್ತ ಪ್ರವೀಣ ಪೂಜಾರಿ ಮತ್ತು ಕೊಡಗಿನ ವಿಶ್ವಹಿಂದೂ ಪರಿಷತ್ ಪ್ರಮುಖ ಕುಟ್ಟಪ್ಪ ಹೀಗೆ ಹಿಂದುತ್ವಕ್ಕಾಗಿ ಪ್ರಾಮಾಣಿಕ ಕಾರ್ಯ ಮಾಡುವವರನ್ನು ಬರ್ಬರವಾಗಿ ಇದೇ ಮಾದರಿಯಲ್ಲಿ ಹತ್ಯೆ ಮಾಡಿದರು. ಅದರೆ ಇದುವರೆಗೂ ಯಾರಿಗೂ ಸಹ ಶಿಕ್ಷೆ ಆಗಿಲ್ಲ. ಇದುವರೆಗೆ ನಡೆದ ತನಿಖೆಗಳ ಆಧಾರದ ಮೇಲೆ ಹಿಂದೂ ನಾಯಕರಿಗೆ ಸೂಕ್ತ ಭದ್ರತೆಯನ್ನು ಪೋಲಿಸ್ ಇಲಾಖೆಯು ಕೂಡಲೇ ಕಲ್ಪಿಸಬೇಕು. ಹಿಂದೂ ನಾಯಕರ ಕೊಲೆಯ ತನಿಖೆಗೆ ವಿಶೇಷ ಕೋರ್ಟ್ ಶೀಘ್ರ ಸ್ಥಾಪಿಸಬೇಕು ಮತ್ತು ಕೂಡಲೇ ತಪ್ಪಿತಸ್ಥರಿಗೆ ಕಠೋರ ಶಿಕ್ಷೆಯನ್ನು ಜಾರಿಗೊಳಿಸಬೇಕು. ಮತಾಂಧತೆಯನ್ನು ಪ್ರೋತ್ಸಾಹಿಸುವ ರಾಜಕಾರಣಿಗಳು ಮತ್ತು ಬುದ್ದಿಜೀವಿಗಳ ಮೇಲೂ ಸಹ ಉಗ್ರ ಕ್ರಮ ಜರುಗಿಸಬೇಕು. ಹಲ್ಲೆಗೊಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಮನವಿಯಲ್ಲಿ ಹಿಂದೂಜನಜಾಗೃತಿ ಸಮಿತಿಯು ವಿನಂತಿಸಿದೆ. ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಉಪತಹಸೀಲ್ದಾರ್ ಶಶಿಕಲಾ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಜನಾರ್ದನ, ಕೇಶವ ಗೌಡ, ಲೋಕೇಶ್, ದಯಾನಂದ್, ಪ್ರಶಾಂತ್, ವಂದನಾ, ಮಾಧವ, ಕೃಷ್ಣ ಕುಮಾರ್ ಶರ್ಮ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.