ಕೋಡಿಂಬಾಡಿಯಲ್ಲಿ ರಸ್ತೆ ದುರಸ್ತಿಗೆ ಅಳತೆ ಕಾರ್ಯ ಆರಂಭ

Puttur_Advt_NewsUnder_1
Puttur_Advt_NewsUnder_1

4ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿರುವ ಕೋಡಿಂಬಾಡಿಯ ಅರ್ಬಿಯಿಂದ ವಿನಾಯಕನಗರದವರೆಗಿನ ರಸ್ತೆ ದುರಸ್ತಿಗೆ ಮತ್ತು ರಸ್ತೆ ಅಗಲೀಕರಣಕ್ಕೆ ಅಳತೆ ಕಾರ್ಯ ಅ.27ರಂದು ಆರಂಭಗೊಂಡಿದೆ.
ಸೇಡಿಯಾಪು ಅರ್ಬಿಯಿಂದ ಕೋಡಿಂಬಾಡಿ ವಿನಾಯಕನಗರದವರೆಗಿನ ರಸ್ತೆ ಪುನರ್‌ನಿರ್ಮಾಣಕ್ಕೆ ಸರಕಾರದ ಅನುದಾನ ಮಂಜೂರುಗೊಂಡು ಶಾಸಕರಿಂದ ಗುದ್ದಲಿ ಪೂಜೆ ನೆರವೇರಿದ್ದರೂ ಕಾಮಗಾರಿ ಆರಂಭವಾಗದೆ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕುರಿತು ಅ.೬ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ “ಅನುದಾನ ಬಂದಿದೆ…ಗುದ್ದಲಿ ಪೂಜೆಯೂ ಆಗಿದೆ… ಕಾಮಗಾರಿ ಅರ್ಧದಲ್ಲಿಯೇ ನಿಂತಿದೆ..” ಎಂದು ವರದಿ ಪ್ರಕಟಿಸಿ ಸಂಬಂಧಿಸಿದವರ ಗಮನಕ್ಕೆ ತರುವ ಕಾರ್ಯ ನಡೆದಿತ್ತಲ್ಲದೆ, ಲೋಕೋಪಯೋಗಿ ಇಲಾಖೆ ಮತ್ತು ಭೂಮಾಪನಾ ಇಲಾಖೆಯವರ ನಡುವಿನ ಸಮನ್ವಯತೆಯ ಸಮಸ್ಯೆಯ ಬಗ್ಗೆ ಗಮನ ಸೆಳೆಯಲಾಗಿತ್ತು. ಕೂಡಲೇ ಸ್ಪಂದಿಸಿರುವ ಲೋಕೋಪಯೋಗಿ ಮತ್ತು ಭೂಮಾಪನಾ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ತಿ ಮತ್ತು ಅಗಲೀಕರಣಕ್ಕೆ ಬೇಕಾದ ಜಾಗವನ್ನು ಗುರುತಿಸಲು ಸರ್ವೆ ಕಾರ್ಯ ಆರಂಭಿಸಿದ್ದಾರೆ. ರಸ್ತೆ ಅಗಲೀಕರಣದ ವೇಳೆ ತೆರವುಗೊಳಿಸಬೇಕಾದ ಕಟ್ಟಡ ಹಾಗೂ ವರ್ಗ ಜಾಗವನ್ನು ಕಳೆದುಕೊಳ್ಳುವವರ ಬಗ್ಗೆ ಅಧಿಕಾರಿಗಳು ಅಳತೆ ಮೂಲಕ ಮಾಹಿತಿ ಸಂಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.