Breaking News

ವಿಟ್ಲ: ಫೇಸ್‌ಬುಕ್‌ನಿಂದ ಬಾಲಕಿಯ ಫೋಟೋ ತೆಗೆದು ದುರ್ಬಳಕೆ ಪ್ರಕರಣ ರದ್ಧತಿಗೆ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಬಾಲಕಿಯೊಬ್ಬಳ ಫೋಟೋವನ್ನು ಕದ್ದು ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದತಿ ಕೋರಿ ಆರೋಪಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಅ.26ರಂದು ಹೈಕೋರ್ಟ್ ವಜಾಗೊಳಿಸಿದೆ.
ವಿಟ್ಲದ ಬಾಲಕಿಯೊಬ್ಬಳು ಫೇಸ್‌ಬುಕ್‌ನಲ್ಲಿ ತನ್ನ ಫೋಟೋವನ್ನು ಅಪ್‌ಲೋಡ್ ಮಾಡಿದ್ದರು. ವಿದೇಶದಲ್ಲಿರುವ ಶಿರಸಿ ಮೂಲದ ಶಾಂತಾರಾಮ ಹೆಗಡೆಕಟ್ಟೆ ಎಂಬವರು ಆ ಫೋಟೋವನ್ನು ಕದ್ದು ಬಳಿಕ ಅದನ್ನು ಸತ್ಯ ಶೋಧ ಮಿತ್ರ ಮಂಡಳಿ ಎಂಬ ಗ್ರೂಪಿಗೆ ಹಾಕಿ, ಅವಾಚ್ಯವಾಗಿ ಬರೆದು, ಮಾನಹಾನಿ ಮಾಡಿದ್ದು, ಅದನ್ನು ಬೆಂಗಳೂರು ನಿವಾಸಿ ಬಾಲಕೃಷ್ಣರಾಜ್ ನೀರ್ಚಾಲು ಶೇರ್ ಮಾಡಿ, ವ್ಯಂಗ್ಯ ಕಮೆಂಟ್ ಮಾಡಿದ್ದ. ಇದನ್ನು ಅರಿತ ಬಾಲಕಿಯ ಹೆತ್ತವರು 2015ರ ಎ.13ರಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪೋಕ್ಸೋ ಮತ್ತು ಭಾರತೀಯ ದಂಡ ಸಂಹಿತೆ 354, 509 ಮತ್ತು ೩೪ರ ಕಾಯ್ದೆಯಡಿ ಆಪಾದಿತರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಘಟನೆ ಬಳಿಕ ಮಾಣಿಗೆ ಬಂದಿದ್ದ ಬಾಲಕೃಷ್ಣರಾಜ್‌ನನ್ನು ವಿಟ್ಲ ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು. ಆದರೆ ಶಾಂತಾರಾಮ ಹೆಗಡೆಕಟ್ಟೆ ವಿದೇಶಕ್ಕೆ ತೆರಳಿದ್ದರು. ತನ್ನ ಮೇಲಿನ ಪ್ರಕರಣ ರದ್ದತಿ ಕೋರಿ ಆರೋಪಿ ಬಾಲಕೃಷ್ಣರಾಜ ನೀರ್ಚಾಲುರವರು ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದೆ. ಹೈಕೋರ್ಟ್ ನ್ಯಾಯವಾದಿ ಪವನಚಂದ್ರ ಶೆಟ್ಟಿರವರು ಈ ಪ್ರಕರಣ ದಾಖಲಿಸಿರುವುದು ಸರಿಯೆಂದು ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.