ಕುಸಿದು ಬಿದ್ದು ಕುಂಬ್ರ ನಿವಾಸಿ ವೆಂಕಮ್ಮ ಮೃತ್ಯು

Puttur_Advt_NewsUnder_1
Puttur_Advt_NewsUnder_1

7

ಅ.28 ಹುಟ್ಟಿದ ಹಬ್ಬ : ಅ.28ರಂದು ವೆಂಕಮ್ಮವರ ಜನ್ಮದಿನಾಚರಣೆ ನಡೆಯಲಿತ್ತು. ಆದರೆ ಹುಟ್ಟಿದ ಹಬ್ಬದ ಎರಡು ದಿನ ಮುನ್ನ ಅವರು ಮೃತಪಟ್ಟಿದ್ದಾರೆ.
ಪುತ್ತೂರು: ಕುಂಬ್ರ ಮುರುವ ದಿ.ಸಾಂತಪ್ಪ ಪೂಜಾರಿಯವರ ಪತ್ನಿ ವೆಂಕಮ್ಮ(80ವ)ರವರು ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಪ್ರಸ್ತುತ ತನ್ನ ಮಗನೊಂದಿಗೆ ವಾಸ್ತವ್ಯವಿದ್ದ ವೆಂಕಮ್ಮರವರ ತಂದೆ ದಿ.ಬದ್ಧ ಪೂಜಾರಿಯವರ ಮನೆಯಂಗಳದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರು ಪುತ್ರರಾದ ಕೃಷಿಕ ಕೃಷ್ಣಪ್ಪ ಪೂಜಾರಿ, ಕುಂಬ್ರದಲ್ಲಿ ಪೋಸ್ಟ್‌ಮೆನ್ ಆಗಿರುವ ಉಮೇಶ್, ಪ್ರಗತಿಪರ ಕೃಷಿಕ ವಿಶ್ವನಾಥ್ ಪೂಜಾರಿ, ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ರತ್ನಾಕರ ಪೂಜಾರಿ, ಉದ್ಯಮಿ ಜಯಂತ ಬರೆಮೇಲು ಮತ್ತು ಪುತ್ರಿ ಭವಾನಿ ಕರುಣಾಕರ ಶಾಂತಿವನರವರನ್ನು ಅಗಲಿದ್ದಾರೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ತಾ.ಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಸದಸ್ಯ ಎಂ.ಎಸ್ ಮುಕುಂದ ಶಾಂತಿವನ, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಆರ್.ಸಿ.ನಾರಾಯಣ, ಒಳಮೊಗ್ರು ಗ್ರಾ.ಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಸದಸ್ಯರಾದ ಉಷಾ ನಾರಾಯಣ ಗೌಡ, ತ್ರಿವೇಣಿ ಪಳ್ಳಾತ್ತಾರು, ನ್ಯಾಯವಾದಿ ಮಾಧವ ಪೂಜಾರಿ, ಪಯಂದೂರು ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಎ.ಕೆ.ರೈ ಅರಿಯಡ್ಕ ಮತ್ತಿತರ ಅನೇಕರು ಭೇಟಿ ನೀಡಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.