ಕಡಬದಲ್ಲಿ ಶ್ರೀ ಹರಿ ಫೂಟ್‌ವೇರ‍್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

kadaba

ಕಡಬ: ಇಲ್ಲಿನ ವೈಭವ ಸಂಕೀರ್ಣದಲ್ಲಿ ಶ್ರೀ ಹರಿ ಫೂಟ್‌ವೇರ‍್ಸ್ ಅ.27ರಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಮಾಲಕರ ತಾಯಿ ಶ್ರೀಮತಿ ಕುಸುಮಾವತಿ, ತಂದೆ ಬಾಲಕೃಷ್ಣ ರೈ ಪೆರಿಯಡ್ಕರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತೂರು ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ, ತಾಲೂಕು ಕೇಂದ್ರವಾಗುವ ಕಡಬದಲ್ಲಿ ಇತ್ತೀಚಿನ ದಿನಗಳಲ್ಲಿ ಉದ್ಯಮಗಳು ಪ್ರಾರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ ಇದು ಕಡಬದ ಅಭಿವೃದ್ದಿಗೆ ಪೂರಕ. ವ್ಯಾಪಾರದಲ್ಲಿ ಪ್ರಾಮಾಣಿಕತೆ ಇದ್ದಾಗ ಆ ಉದ್ಯಮದ ಅಭಿವೃದ್ದಿಯೂ ಸಾಧ್ಯ ಈ ನಿಟ್ಟಿನಲ್ಲಿ ಕಿಶನ್ ಕುಮಾರ್ ರೈ ಹಾಗೂ ಕಿರಣ್ ಕುಮಾರ್ ರೈಯವರ ಉದ್ಯಮ ಯಶಸ್ವಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು. ಕಡಬ ಅಡಿಕೆ ವರ್ತಕ ಸಂಘದ ಅಧ್ಯಕ್ಷ ಎಸ್. ಅಬ್ದುಲ್ ಖಾದರ್ ಮಾತನಾಡಿ,  ವ್ಯವಹಾರದಲ್ಲಿ ಪ್ರಾಮಾಣಿಕತೆ ಮತ್ತು ಸೇವೆ ಮುಖ್ಯ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯದಿಂದ ವ್ಯವಹರಿಸಿದರೆ ಖಂಡಿತಾ ಯಶಸ್ಸು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು. ಉದ್ಯಮಿ ಸಿ.ಫಿಲಿಪ್, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ವೈಭವ ಸಂಕೀರ್ಣದ ಮಾಲಕ ಅರುಣ್ ಕುಮಾರ್ ಜಡೆಮನೆ, ಕುಟ್ರುಪಾಡಿ ಗ್ರಾ.ಪಂ. ಸದಸ್ಯ ಶಿವ ಪ್ರಸಾದ್ ರೈ ಮೈಲೇರಿ, ಉಪ್ಪಿನಂಗಡಿ ಪ್ರಸಾದ್ ಸ್ಟುಡಿಯೋ ಮಾಲಕ ಚಂದ್ರಶೇಖರ್ ಪ್ರಮುಖರಾದ ಭಾರತ್ ಆಗ್ರೋದ ಕಿಶಾನ್ ಕುಮಾರ್ ಸುರಿಯಾ, ಪ್ರೀತಮ್ ವಿಟ್ಲ, ರಾಜಶೇಖರ್ ಸುರಿಯ, ಕೃಷ್ಣ ಶೆಟ್ಟಿ ಸುರಿಯ, ಬಿಜೆಪಿ ಮುಖಂಡ ಪ್ರಕಾಶ್ ಎನ್.ಕೆ, ಹರೀಶ್ ಉಂಡಿಲ, ಶ್ರೀರಾಮ್ ಟವರ‍್ಸ್ ಮಾಲಕ ಶಿವರಾಮ ಶೆಟ್ಟಿ, ಚಂದ್ರಶೇಖರ ಬ್ರಂತೋಡು, ಸತೀಶ್ ಮಂಗಳೂರು, ದಿನೇಶ್ ಆಚಾರ್, ಗೋಪಾಲ್ ಮೇಲಿನ ಮನೆ, ನಿತ್ಯಾನಂದ ಸ್ಪರ್ಶ ಮೊಬೈಲ್, ಶಿವರಾಜ್ ಅಡಿಗ, ಪುತ್ತು ಮೂಳೆ ಮನೆ, ಡಿಸಿಸಿ ಬ್ಯಾಂಕ್‌ನ ಅಮಿತ, ಅಶ್ವಿನಿ ಫ್ಯಾನ್ಸಿಯ ನಾರಾಯಣ ಮಣಿಯಾಣಿ, ಕೊಳ್ತಿಗೆ ರಾಮಯ್ಯ ರೈ, ವಿಶ್ವನಾಥ ಎಡಮಂಗಲ ಸ್ವಸ್ಥ್ಯ ಕ್ಲಿನಿಕಲ್ ಲ್ಯಾಬೊರೇಟರಿಯ ಮಾಲಕ ಸುನೀಲ್ ಕುಮಾರ್, ಸಿಬ್ಬಂದಿ ಪುನಿತ್ ಆಗಮಿಸಿ ಶುಭ ಹಾರೈಸಿದರು.

ದಿವ್ಯಶ್ರೀ ರೈ ಪೆರಿಯಡ್ಕ, ತೇಜಶ್ರೀ ರೈ ಪೆರಿಯಡ್ಕ, ವಿಹಾನ್ ರೈ, ರಿಧಿ ರೈ ಪೆರಿಯಡ್ಕ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಕಿಶಾನ್ ಕುಮಾರ್ ರೈ ಸ್ವಾಗತಿಸಿ, ಕಿರಣ್ ಕುಮಾರ್ ರೈ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.