ಬಿಜೆಪಿ ಕಚೇರಿಯಲ್ಲಿ ನಿವೇದಿತಾ ಜಯಂತಿ ಆಚರಣೆ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ರೈತ ಮೋರ್ಛಾದ ಕಾರ್ಯಕಾರಿಣಿ ಸಭೆ

Puttur_Advt_NewsUnder_1
Puttur_Advt_NewsUnder_1

ನಿವೇದಿತಾ ಜಯಂತಿ ಆಚರಣೆ

ನಿವೇದಿತಾ ಜಯಂತಿ ಆಚರಣೆ

ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ರೈತ ಮೋರ್ಛಾದ ಕಾರ್ಯಕಾರಿಣಿ ಸಭೆ
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ರೈತ ಮೋರ್ಛಾದ ಕಾರ್ಯಕಾರಿಣಿ ಸಭೆ

bjpಸಹೋದರಿ ನಿವೇದಿತಾ ಮಹಿಳೆಯರಿಗೆ ಆದರ್ಶ-ಆಶಾ
ಪುತ್ತೂರು: ಬಿಜೆಪಿ ನಗರ ಮತ್ತು ಗ್ರಾಮಾಂತರ ಮಹಿಳಾ ಮೋರ್ಛಾದಿಂದ ಸಹೋದರಿ ನಿವೇದಿತಾ ಜಯಂತಿ ಆಚರಣೆ ಕಾರ‍್ಯಕ್ರಮ ಅ.೨೮ರಂದು ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಪುರಸಭೆ ಮಾಜಿ ಅಧ್ಯಕ್ಷೆ ಸುಗುಣಾ ಶೆಟ್ಟಿಯವರು ಸಹೋದರಿ ನಿವೇದಿತಾರವರ ಭಾವಚಿತ್ರದ ಎದುರು ದೀಪ ಬೆಳಗಿಸಿ ಪುಷ್ಪಾರ್ಚಣೆ ಮಾಡಿದರು.
ಸಹೋದರಿ ನಿವೇದಿತಾ ಮಹಿಳಾ ಸಮುದಾಯಕ್ಕೆ ಆದರ್ಶೆ – ಆಶಾ ಪ್ರಸಾದ್ : ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬಂಟ್ವಾಳದ ನ್ಯಾಯವಾದಿ ಆಶಾ ಪ್ರಸಾದ್‌ರವರು ಮಾತನಾಡಿ ವಿವೇಕಾನಂದರ ಆದರ್ಶ, ಚಿಂತನಗಳ ಪ್ರಭಾವಕ್ಕೆ ಒಳಗಾದ ಸಹೋದರಿ ನಿವೇದಿತಾ ಬಡವರ, ಅನಕ್ಷರಸ್ಥರ ಏಳಿಗೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಹಿಳಾ ಸಮುದಾಯಕ್ಕೆ ಆದರ್ಶವಾಗಿದ್ದಾರೆ ಎಂದು ಹೇಳಿದರು. ಪಾಶ್ಚಾತ್ಯ ಸಂಪ್ರದಾಯಗಳ ವಿರುದ್ಧ ಧ್ವನಿ ಎತ್ತುವ ಮೂಲಕ ದೇಶದ ಜನರಲ್ಲಿ ದೇಶೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು ಸ್ವಾಮಿ ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿ ಭಾರತದ ಪ್ರಭಾವ ಏನು ಎಂದು ಅರಿಯಲು ಭಾರತಕ್ಕೆ ಬಂದವರು ಭಾರತವನ್ನೇ ಪ್ರೀತಿಸಿದರು ಎಂದರು.
ಮಹಿಳೆಯರ ಸಬಲೀಕರಣಕ್ಕಾಗಿ ತಿಂಗಳು ಪೂರ್ತಿ ಕಾರ‍್ಯಕ್ರಮ: ಬಿಜೆಪಿ ಮಹಿಳಾ ಮೋರ್ಛಾದ ನಗರ ಮಂಡಲದ ಅಧ್ಯಕ್ಷೆ ವಿದ್ಯಾ ಗೌರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಪರದೇಶದಿಂದ ಭಾರತಕ್ಕೆ ಬಂದು ಸ್ವಾಮಿ ವಿವೇಕಾನಂದರ ಶಿಷ್ಯರಾಗಿ ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದ ಸಹೋದರಿ ನಿವೇದಿತಾರವರು ಹಿಂದುತ್ವವನ್ನು ಅರಿತವರು. ನಮ್ಮೊಂದಿಗೆ ಒಂದಾಗಿ ಬಾಳಿದವರು. ಅವರ ಈ ಒಂದು ನೆನಪಿಗಾಗಿ ತಿಂಗಳು ಪೂರ್ತಿ ಮಹಿಳಾ ಸಬಲೀಕರಣರದ ಕುರಿತು ಕಾರ‍್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು, ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಪ್ರಧಾನ ಕಾರ‍್ಯದರ್ಶಿ ಗೌರಿ ಹೆಚ್, ಗ್ರಾಮಾಂತರ ಮಂಡಲದ ಮಹಿಳಾ ಮೋರ್ಛಾದ ಅಧ್ಯಕ್ಷೆ ಉಷಾ ನಾರಾಯಣ, ಪ್ರಧಾನ ಕಾರ‍್ಯದರ್ಶಿ ಯಶಸ್ವಿನಿ ಉಪಸ್ಥಿತರಿದ್ದರು. ನಗರ ಮಂಡಲ ಮಹಿಳಾ ಮೋರ್ಛಾದ ಪ್ರಧಾನ ಕಾರ‍್ಯದರ್ಶಿ ಜಯಶ್ರೀ ಎಸ್ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಜಿ.ಪಂ ಸದಸ್ಯೆ ಶಯನಾ ಜಯಾನಂದ್, ತಾ.ಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್, ನಗರಸಭೆ ಸದಸ್ಯೆ ವನಿತಾ ಕೆ.ಟಿ, ಮಹಿಳಾ ಮೋರ್ಛಾದ ಸ್ವರ್ಣಲತಾ, ನಂದಿನಿ ಆರ್ ರೈ, ಗೀತಾ ಕೆ.ಎಸ್, ಶ್ಯಾಮಲಾ ವಸಂತ್, ಭಾರತಿ ಕೆ, ಸುಧಾ ರಾಮಚಂದ್ರ, ವೈಶಾಲಿ, ಶಶಿಕಿರಣ, ಅರ್ಪಣಾ, ಪ್ರೇಮಲತಾ, ಶಶಿಕಲಾ, ಹರಿಣಾಕ್ಷಿ, ಶುಭಶ್ರೀ, ಲಕ್ಷ್ಮೀ ರೈ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.