ಕೊನೆಗೂ ಕೂಡಿಬಂತು ಮುಹೂರ್ತ- ನ.5ರಂದು ಆದರ್ಶ ರೈಲ್ವೇ ನಿಲ್ದಾಣ ಉದ್ಘಾಟನೆ; ಸಂಸದ ನಳಿನ್ ಕುಮಾರ್ ಭೇಟಿ-ಕಾಮಗಾರಿ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1

nalin

ಪುತ್ತೂರು: ಪುತ್ತೂರು ಆದರ್ಶ ರೈಲ್ವೇ ನಿಲ್ದಾಣದ ಉದ್ಘಾಟನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ, ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭುರವರು ಆಗಮಿಸುವುದು ಖಚಿತವಾದರೆ ನ.6ರಂದು ಉದ್ಘಾಟನೆಗೊಳ್ಳಲಿದೆ, ಒಂದು ವೇಳೆ ನ.6ರಂದು ರೈಲ್ವೇ ಸಚಿವರಿಗೆ ಆಗಮಿಸಲು ಸಾಧ್ಯವಾಗದಿದ್ದರೆ ನ.5ರಂದು ಸಂಜೆ 5.30ಕ್ಕೆ ಗೋವಾದ ಮಡಂಗಾವ್‌ನಲ್ಲಿ ವಿಡೀಯೋ ಕಾನ್ಫರೆನ್ಸ್ ಮೂಲಕ ಪುತ್ತೂರು ಆದರ್ಶ ರೈಲ್ವೇ ನಿಲ್ದಾಣ ಉದ್ಘಾಟನೆಗೊಳ್ಳಲಿದೆ. ಅ.29ರಂದು ಸಂಜೆ ಉದ್ಘಾಟನಾ ದಿನಾಂಕ ಖಚಿತವಾಗಲಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್‌ರವರು ಹೇಳಿದ್ದಾರೆ.

ಅವರು ಅ.28ರಂದು ಮಧ್ಯಾಹ್ನ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಆದರ್ಶ ರೈಲ್ವೇ ನಿಲ್ದಾಣದ ಅಂತಿಮ ಹಂತದ ಕಾಮಗಾರಿಯ ವೀಕ್ಷಣೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಮಗಾರಿಯು ಶೇ.90ರಷ್ಟು ಪೂರ್ಣಗೊಂಡಿದೆ:

ಆದರ್ಶ ರೈಲ್ವೇ ನಿಲ್ದಾಣದ ಕಾಮಗಾರಿಯು ರೂ. 2.89 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ನಡೆದಿದ್ದು ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. ಗಾರ್ಡನ್, ಸಂಪರ್ಕ ರಸ್ತೆ ಅಭಿವೃದ್ಧಿ, ಪಾರ್ಕಿಂಗ್ ಕೆಲಸಗಳು ಇನ್ನೂ ಬಾಕಿ ಇದ್ದು ಈ ವಾರದಲ್ಲಿ ಪೂರ್ತಿಯಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಆದರ್ಶ ರೈಲ್ವೇ ನಿಲ್ದಾಣವು ನ.5ರಂದು ಉದ್ಘಾಟನೆಗೊಳ್ಳಲಿರುವುದರಿಂದ ಅಂತಿಮ ಹಂತದಲ್ಲಿ ಬಾಕಿಯಿರುವ ಕಾಮಗಾರಿಗಳಿಗೆ ವೇಗ ಕೊಡುವ ಸಲುವಾಗಿ ಇಂದು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿzನೆ ಎಂದು ಅವರು ಹೇಳಿದರು.

ಬಹುತೇಕ ಬೇಡಿಕೆಗಳು ಈಡೇರಿದೆ:

ಪುತ್ತೂರು ರೈಲ್ವೇ ನಿಲ್ದಾಣದ ಬಹುತೇಕ ಬೇಡಿಕೆಗಳು ಈಡೇರಿದೆ. ಆದರ್ಶ ರೈಲ್ವೇ ನಿಲ್ದಾಣವಾಗಿ ಮೇಲ್ದರ್ಜೆಗೊಂಡ ಬಳಿಕ ನಡೆದ ಕಾಮಗಾರಿಯಲ್ಲಿ 24 ಬೋಗಿಗಳ ನಿಲುಗಡೆಗೆ ಅವಕಾಶ ಇದೆ, ಎರಡನೇ ಪ್ಲ್ಯಾಟ್ ಫಾರಂ, ಮಹಿಳೆಯರಿಗೆ ಪ್ರತ್ಯೇಕವಾಗಿರುವ ಮೇಲ್ದರ್ಜೆಯ ವಿಶ್ರಾಂತಿ ಕೊಠಡಿಗಳು, ನವೀಕೃತ ಶೌಚಾಲಯ ನಿರ್ಮಾಣವಾಗಿದ್ದು ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ, ಸಂಪರ್ಕ ರಸ್ತೆ ಅಭಿವೃದ್ಧಿ, ನಿಲ್ದಾಣದ ಕಟ್ಟಡದ ದುರಸ್ತಿ, ಪೈಂಟಿಂಗ್ ಕಾರ್ಯಗಳು, ರೈಲು ಬಂದಾಗ ತಿಳಿಸುವ ಮೈಕ್ ವ್ಯವಸ್ಥೆ, ಈಗಿರುವ 24 ಆಸನಗಳನ್ನು ಬದಲಾಯಿಸಿ ಗ್ರೈನೈಡ್ ಮಾದರಿಯ ಆಸನದ ವ್ಯವಸ್ಥೆ, ಹೊರಗಡೆ ಸ್ವಚ್ಛತೆ ವ್ಯವಸ್ಥೆ, ಅಂಗವಿಕಲರಿಗೆ ಓಡಾಡುವ ವ್ಯವಸ್ಥೆ, ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ವ್ಯವಸ್ಥೆ ಈಗಾಗಲೇ ಅಂತಿಮಗೊಂಡಿದೆ, ಕಾಮಗಾರಿಗಳು ವ್ಯವಸ್ಥಿತವಾಗಿ ಆಗುವಲ್ಲಿ ರೈಲ್ವೇ ಅಧಿಕಾರಿಗಳು ಗಮನ ಇಟ್ಟು ಕೆಲಸ ಮಾಡಿದ್ದಾರೆ ಎಂದು ನಳಿನ್ ಕುಮಾರ್‌ರವರು ಹೇಳಿದರು.

ರೈಲ್ವೇ ನಿಲ್ದಾಣದಲ್ಲಿ ಭದ್ರತೆಯ ವ್ಯವಸ್ಥೆ ಹೇಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದರು ರೈಲ್ವೇ ನಿಲ್ದಾಣದ ಒಳಗಿನ ಭದ್ರತೆಗೆ ರೈಲ್ವೇ ಅಧಿಕಾರಿಗಳು ಜವಾಬ್ದಾರರಾದರೂ ಹೆಚ್ಚಿನ ಭದ್ರತೆ ದೃಷ್ಟಿಯಿಂದ ನಿಲ್ದಾಣದಲ್ಲಿ ಖಾಯಂ ಆಗಿ ಲೋಕಲ್ ಪೊಲೀಸ್ ಒದಗಿಸುವಂತೆ ಪೊಲೀಸ್ ಇಲಾಖೆಯನ್ನು ಕೇಳಿಕೊಳ್ಳಲು ರೈಲ್ವೇ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದರು.

ರೈಲ್ವೇ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದೆ:

ರೈಲ್ವೇ ಇಲಾಖೆಯು ವ್ಯಾಪಾರಿ ಮನೋಭಾವವನ್ನು ಬಿಟ್ಟು ಸೇವಾ ಮನೋಭಾವದಲ್ಲಿ ಕೆಲಸ ಮಾಡುತ್ತಿದೆ, ರೈಲ್ವೇ ತನ್ನ ಜಾಗವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ, ಹಾಗಾಗಿ ಕೆಲವು ಕಡೆಗಳಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿ ಮತ್ತು ಇತರ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ನಳಿನ್ ಕುಮಾರ್ ರವರು ಹೇಳಿದರು.

ಮಂಗಳೂರು ರೈಲು ನಿಲ್ದಾಣ ವಿಶ್ವದರ್ಜೆಯ ನಿಲ್ದಾಣವಾಗಿ ಬೆಳೆಯುತ್ತಿದೆ:

ಮಂಗಳೂರು ರೈಲು ನಿಲ್ದಾಣವು ವಿಶ್ವ ದರ್ಜೆಯ ರೈಲು ನಿಲ್ದಾಣವಾಗಿ ಮಾರ್ಪಡುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಮುಗಿದಿದೆ. ಪುತ್ತೂರು ಆದರ್ಶ ರೈಲ್ವೇ ನಿಲ್ದಾಣವಾಗಿದೆ, ಸುಬ್ರಹ್ಮಣ್ಯ, ಎಡಮಂಗಲ ರೈಲ್ವೇ ನಿಲ್ದಾಣಗಳು ಅಭಿವೃದ್ಧಿಗೊಳ್ಳುತ್ತಿದೆ, ಬಹುವರ್ಷದ ಬೇಡಿಕೆಯಾಗಿದ್ದ ಮಂಗಳೂರಿನ ಪಡೀಲ್ ಮತ್ತು ಜೆಪ್ಪುವಿನ ಅಂಡರ್‌ಪಾಸಿಂಗ್ ಸಮಸ್ಯೆ ಈಡೇರಿದೆ ಇವೆಲ್ಲಾ ನನಗೆ ಬಹಳ ಖುಷಿ ತಂದಿದೆ ಎಂದ ನಳಿನ್ ಕುಮಾರ್‌ರವರು ಮಂಗಳೂರು ವಿಭಾಗ ಆಗಬೇಕೆಂಬುದು ಇನ್ನೊಂದು ಬಹುದೊಡ್ಡ ಬೇಡಿಕೆ. ಇದಕ್ಕೆ ತ್ರಿಶಂಕು ಸಮಸ್ಯೆ ಇದೆ, ಕೊಂಕಣ್ ರೈಲ್ವೇ, ಫಾಲ್ಗಾಟ್ ರೈಲ್ವೇ, ಮೈಸೂರು ವಿಭಾಗ ಇವು ಸಮಸ್ಯೆಗಳಾಗಿವೆ, ಆದರೂ ಸಾಕಷ್ಟು ಪ್ರಸ್ತಾವನೆಗಳನ್ನು ಕಳುಹಿಸಿzನೆ ಎಂದು ಕಟೀಲ್‌ರವರು ಹೇಳಿದರು.

ಸಂಪರ್ಕ ರಸ್ತೆಯು ಅಭಿವೃದ್ಧಿಯಾಗಲಿದೆ:

ಹಾರಾಡಿ ಕ್ರಾಸ್ ಬಳಿಯಿಂದ ರೈಲು ನಿಲ್ದಾಣಕ್ಕೆ ಬರುವ ಸಂಪರ್ಕ ರಸ್ತೆಯು ತೀರಾ ಹದಗೆಟ್ಟಿದ್ದು ಅದನ್ನು ಸರಿಪಡಿಸುವಂತೆ ಬಂದ ಮನವಿಗೆ ಉತ್ತರಿಸಿದ ಸಂಸದರು ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ರೈಲ್ವೇ ಅಧಿಕಾರಿಗಳಿಗೆ ತಿಳಿಸಿzನೆ, ಅದಕ್ಕೆ ಬೇಕಾದ ಅನುದಾನವನ್ನು ನಾನು ಒದಗಿಸುತ್ತೇನೆ ಎಂದು ಅವರು ಹೇಳಿದರು. ಪೂರ್ಣ ಪ್ರಮಾಣದಲ್ಲಿ ಭದ್ರತೆಯ ದೃಷಿಯಿಂದ ಲೋಕಲ್ ಪೊಲೀಸ್ ಅಗತ್ಯ ಇದೆ ಅದನ್ನು ಒದಗಿಸುವಂತೆಯೂ ಹೇಳುತ್ತೇನೆ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ, ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ರಾಧಾಕೃಷ್ಣ ಬೋರ್ಕರ್, ಮುಕುಂದ ಗೌಡ, ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ರಾಜೇಶ್ ಬನ್ನೂರು, ಶಕ್ತಿ ಸಿನ್ಹಾ, ಚಂದ್ರ ಸಿಂಗ್, ಬಿಜೆಪಿ ಪುತ್ತೂರು ಮಂಡಲದ ಪ್ರಧಾನ ಕಾರ್ಯದರ್ಶಿ ಕೇಶವ ಬಜತ್ತೂರು, ಶಂಭು ಭಟ್, ಉಪಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲ ಮಹಿಳಾ ಮೋರ್ಛಾದ ಅಧ್ಯಕ್ಷೆ ವಿದ್ಯಾ ಆರ್. ಗೌರಿ, ಕಾರ್ಯದರ್ಶಿ ಜಯಶ್ರೀ, ಯುವಮೋರ್ಛಾದ ತಾಲೂಕು ಅಧ್ಯಕ್ಷ ಸುನೀಲ್ ದಡ್ಡು, ಎಸ್.ಸಿ ಮೋರ್ಛಾದ ತಾಲೂಕು ಅಧ್ಯಕ್ಷ ಕಿಟ್ಟ ಅಜಿಲ, ಅಲ್ಪಸಂಖ್ಯಾತ ಮೋರ್ಛಾದ ಅಧ್ಯಕ್ಷ ಅಬ್ದುಲ್ ಕುಂಞಿ ಪಟ್ಟೆ, ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ನಿರ್ದೇಶಕರಾದ ಸೀತಾರಾಮ ಗೌಡ, ಗುರುನಾಥ ಗೌಡ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮದಾಸ ಹಾರಾಡಿ, ಬೂಡಿಯಾರ್ ರಾಧಾಕೃಷ್ಣ ರೈ, ಚಂದ್ರಶೇಖರ ರಾವ್ ಬಪ್ಪಳಿಗೆ, ಅಶೋಕ್ ಹಾರಾಡಿ, ಪುರುಷೋತ್ತಮ ಗೌಡ ಮುಂಗ್ಲಿಮನೆ, ಎ.ವಿ ನಾರಾಯಣ, ರಾಘವೇಂದ್ರ ಭಟ್, ಭಾಸ್ಕರ ರೈ ಕಂಟ್ರಮಜಲು, ಹರಿಪ್ರಸಾದ್ ಕೌಡಿಚ್ಚಾರ್, ಕೃಷ್ಣಪ್ರಸಾದ್ ಬೆಟ್ಟ, ಮಾಜಿ ಜಿ.ಪಂ ಸದಸ್ಯೆ ಪುಷ್ಪಾವತಿ ಕಳುವಾಜೆ, ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಸಚಿನ್ ಪಾಪೆಮಜಲು ಮತ್ತಿತರರು ಉಪಸ್ಥಿತರಿದ್ದರು.

ಸಂಸದರು ಹೇಳಿದ್ದು…

 ಕಾಮಗಾರಿಯು ಶೇ.90ರಷ್ಟು ಪೂರ್ಣಗೊಂಡಿದೆ

 ಬಹುತೇಕ ಬೇಡಿಕೆಗಳು ಈಡೇರಿದೆ

 ಸಂಪರ್ಕ ರಸ್ತೆಯು ಅಭಿವೃದ್ಧಿಯಾಗಲಿದೆ

 ರೈಲ್ವೇ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದೆ

 ಮಂಗಳೂರು ರೈಲು ನಿಲ್ದಾಣ ವಿಶ್ವದರ್ಜೆಯ ನಿಲ್ದಾಣವಾಗಿ ಬೆಳೆಯುತ್ತಿದೆ

 ಸಾಲ್ಮರ ರೈಲ್ವೇ ಗೇಟ್ ಸಮಸ್ಯೆಗೆ 15 ದಿನದೊಳಗೆ ಸಭೆ

ಸಾಲ್ಮರ ರೈಲ್ವೇ ಗೇಟ್ ಸಮಸ್ಯೆಗೆ 15 ದಿನದೊಳಗೆ ಸಭೆ

ಪ್ರಸ್ತುತ ಸಾಲ್ಮರ ಎಪಿಎಂಸಿಯಲ್ಲಿ ರೈಲ್ವೇ ಗೇಟ್ ಸಮಸ್ಯೆ ಮತ್ತು ವಿವೇಕಾನಂದ ಕಾಲೇಜು ಬಳಿಯಲ್ಲಿ ಕಿರಿದಾದ ಸೇತುವೆ ಸಮಸ್ಯೆ ಇದೆ. ಎಪಿಎಂಸಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಲು ರೈಲ್ವೇ ಇಲಾಖೆಯ ಅನುಮತಿ ಇದೆ ಆದರೆ ಅವರ ಇಲಾಖೆಯ ಸರ್ವೇಯ ಆಧಾರದಲ್ಲಿ ಅನುದಾನದ ಹಂಚಿಕೆ ಆಗಬೇಕಿದೆ, ಆ ನಿಟ್ಟಿನಲ್ಲಿ ಮೇಲ್ಸೇತುವೆ ನಿರ್ಮಾಣ ಮತ್ತು ಅನುದಾನದ ಬಗ್ಗೆ ಚರ್ಚೆ ನಡೆಸಲು ಡಿಆರ್‌ಎಂನ್ನು ಇಟ್ಟುಕೊಂಡು ಮುಂದಿನ 15 ದಿನದೊಳಗೆ ಎಪಿಎಂಸಿಯಲ್ಲಿ ಸಭೆ ನಡೆಸಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.