ಉಡುಪಿ ಜಿಲ್ಲಾಧಿಕಾರಿ ನಿಲುವು ಪ್ರಶ್ನಿಸಿ ಅಶೋಕ್ ರೈ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್; ‘ಕಂಬಳ’ ಆಯೋಜಿಸಲು ನ್ಯಾಯಮೂರ್ತಿ ಎ.ಎಸ್. ಬೋಪಣ್ಣರವರಿಂದ ‘ಗ್ರೀನ್ ಸಿಗ್ನಲ್’

Puttur_Advt_NewsUnder_1
Puttur_Advt_NewsUnder_1

kambala

ಪುತ್ತೂರು: ತುಳುನಾಡಿನ ಪ್ರಾಚೀನ ಜಾನಪದ ಕ್ರೀಡೆಯಾದ ೞಕಂಬಳೞ ಕೂಟ ಆಯೋಜಿಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಕಂಬಳ ನಡೆಸಲು ಅನುಮತಿ ನಿರಾಕರಿಸಿದ್ದ ಉಡುಪಿ ಜಿಲ್ಲಾಧಿಕಾರಿಯವರ ನಿಲುವನ್ನು ಪ್ರಶ್ನಿಸಿ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಜಿಲ್ಲಾ ಕಂಬಳ ಸಮಿತಿಯು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣರವರಿದ್ದ ನ್ಯಾಯಪೀಠವು ‘ಕಂಬಳ’ಕ್ಕೆ ಹಸಿರು ನಿಶಾನೆ ತೋರಿಸಿದೆ. ಈ ಮೂಲಕ ಪುತ್ತೂರಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಮತ್ತು ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ನಿರಾತಂಕವಾಗಿ ನಡೆಯಲು ಅವಕಾಶ ದೊರಕಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಬಿ.ವಿ. ಆಚಾರ್ಯ ಮತ್ತು ರಾಜಶೇಖರ್ ಇಲ್ಯಾರ್‌ರವರು ಹೈಕೋರ್ಟ್‌ನಲ್ಲಿ ವಾದಿಸಿದ್ದರು.

ಹೈಕೋರ್ಟ್ ಗ್ರೀನ್ ಸಿಗ್ನಲ್: ಉಡುಪಿ ಜಿಲ್ಲೆಯಲ್ಲಿ ಕಂಬಳ ಉತ್ಸವವನ್ನು ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಬಾರ್ಕೂರು ಮತ್ತು ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್‌ರವರು ನೀಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಉಡುಪಿ ಜಿಲ್ಲಾಧಿಕಾರಿಯವರು ‘ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವುದರಿಂದ ಕಂಬಳ ಕ್ರೀಡೆ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ ಹಾಗೂ ಯಾವುದೇ ರೀತಿಯಲ್ಲಿ ಸಹಕರಿಸಲು ಸಹ ಸಾಧ್ಯವಿಲ್ಲ’ ಎಂದು ಲಿಖಿತ ಉತ್ತರ ನೀಡಿದ್ದರು. ಉಡುಪಿ ಜಿಲ್ಲಾಧಿಕಾರಿಯವರಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರೂ ಕಂಬಳಕ್ಕೆ ಅವಕಾಶ ನೀಡದಿರುವ ಸಾಧ್ಯತೆ ಇರುವುದರಿಂದ ಪುತ್ತೂರಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಮತ್ತು ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳಕ್ಕೂ ನಿಷೇಧದ ಭೀತಿ ಆವರಿಸಿದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಯವರ ನಿರ್ಣಯವನ್ನು ಪ್ರಶ್ನಿಸಿ ಹಾಗೂ ಕಳೆದ ಬಾರಿಯಂತೆ ಕಂಬಳ ಕೂಟ ಆಯೋಜಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಜಿಲ್ಲಾ ಕಂಬಳ ಸಮಿತಿಯ ಮೂಲಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣರವರು ಕಳೆದ ಬಾರಿಯಂತೆ ಯಥಾಸ್ಥಿತಿಯಲ್ಲಿ ಕಂಬಳ ಕೂಟ ಆಯೋಜಿಸಲು ಅನುಮತಿ ನೀಡಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಕೂಟವು ನಿಗದಿಯಂತೆ ನಡೆಯಲಿದೆ.

ashok

‘ಕಂಬಳ ಕೂಟವು ನಮ್ಮ ತುಳುನಾಡಿನ ಜನಪದ ಕ್ರೀಡೆಯಾಗಿದೆ, ಜನರು ಅತ್ಯಂತ ಪ್ರೀತಿಯಿಂದ ಕಂಬಳದಲ್ಲಿ ಪಾಲ್ಗೊಳ್ಳುತ್ತಾರೆ, ಇಲ್ಲಿನ ಸಂಸ್ಕೃತಿ, ಸಂಪ್ರದಾಯ ಅರಿಯದ ಕೆಲವರು ಕಂಬಳ ನಿಷೇಧಿಸಲು ಹೋರಾಟ ನಡೆಸುತ್ತಿದ್ದಾರೆ, ಕಂಬಳ ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ, ಕಂಬಳ, ಯಕ್ಷಗಾನದಂತಹ ಕಲೆಗಳಿಗೆ ದೈವ, ದೇವರ ಅನುಗ್ರಹವೂ ಇದೆ, ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕಂಬಳ ನಿಷೇಧ ಆಗದಂತೆ ಹೋರಾಟ ನಡೆಸಲಾಗುತ್ತಿದೆ, ಇದೀಗ ಹೈಕೋರ್ಟ್ ಕಂಬಳಕ್ಕೆ ಅನುಮತಿ ನೀಡಿದೆ, ಮುಂದೆ ಶಾಶ್ವತವಾಗಿ ಕಂಬಳ ನಡೆಸುವಂತಾಗಲು ಸುಪ್ರೀಂಕೋರ್ಟ್‌ವರೆಗೂ ಹೋರಾಟ ನಡೆಸಲು ಸಿದ್ದರಿದ್ದೇವೆ.’

ಅಶೋಕ್ ಕುಮಾರ್ ರೈ ಕೆ.ಯಸ್

ಅಧ್ಯಕ್ಷರು ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಉಪ್ಪಿನಂಗಡಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.