ಕರ್ಕಳ: ಬಾವಿಗೆ ಬಿದ್ದು ಯುವಕ ಮೃತ್ಯು: ರಕ್ಷಿಸಲು ಬಾವಿಗೆ ಹಾರಿದ ಸಹೋದರ ಪಾರು

Puttur_Advt_NewsUnder_1
Puttur_Advt_NewsUnder_1

5-2 5-1ವಿಟ್ಲ : ಬಾವಿ ಕಟ್ಟೆಯಿಂದ ಕಳೆ ಕೀಳುತ್ತಿದ್ದ ಸಂದರ್ಭ ಯುವಕನೋರ್ವ ಆಕಸ್ಮಿವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದು, ಆತನನ್ನು ರಕ್ಷಿಸಲು ಬಾವಿಗೆ ಹಾರಿದ ಆತನ ಸಹೋದರ ಗಾಯಗೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕರ್ಕಳ ಕೋಡಿ ಎಂಬಲ್ಲಿ ಅ.27ರಂದು ನಡೆದಿದೆ.
ವಿಟ್ಲ ಪಡ್ನೂರು ಗ್ರಾಮದ ಕರ್ಕಳ ಕೋಡಿ ನಾರಾಯಣ ಸಪಲ್ಯರವರ ಪುತ್ರ ಬಾಲಕೃಷ್ಣ(26.ವ) ಮೃತ ಪಟ್ಟವರಾಗಿದ್ದಾರೆ. ಅವರ ಸಹೋದರ ಶೇಖರ(32.ವ) ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತನ್ನ ಮನೆಯ ಅಂಗಳದಲ್ಲಿದ್ದ ಬಾವಿಯ ಕಟ್ಟೆ ಮೇಲೆ ನಿಂತು ಕಳೆ ಕೀಳುತ್ತಿದ್ದ ಬಾಲಕೃಷ್ಣ ಆಕ್ಮಸಿವಾಗಿ ಬಾವಿಗೆ ಬಿದ್ದಿದ್ದರು. ತಕ್ಷಣವೇ ತಮ್ಮನ ಪ್ರಾಣ ಉಳಿಸುವುದಕ್ಕಾಗಿ ಅಲ್ಲೇ ಪಕ್ಕದಲ್ಲಿದ್ದ ಅಣ್ಣ ಶೇಖರರವರು ಬಾವಿಗೆ ಹಾರಿದ್ದು, ಆತ ಕೂಡಾ 20ಅಡಿ ನೀರಿನಲ್ಲಿ ಮುಳುಗಿದ್ದಾರೆ. ಆತಂಕಗೊಂಡ ಮನೆಯವರು ಬೊಬ್ಬೆ ಹೊಡೆಯುತ್ತಿದ್ದಂತೆಯೆ ಸ್ಥಳೀಯ ಕೆಲವರು ಘಟನಾ ಸ್ಥಳಕ್ಕೆ ಬಂದು ಶೇಖರರನ್ನು ಮೇಲಕ್ಕೆತ್ತಿದ ಕಾರಣ ಅವರು ಬದುಕಿ ಉಳಿದಿದ್ದಾರೆ. ಆದರೆ ಅಷ್ಟರಲ್ಲಾಗಲೇ ನೀರಿನಲ್ಲಿ ಮುಳುಗಿದ್ದ ಬಾಲಕೃಷ್ಣ ಸಾವನ್ನಪ್ಪಿದ್ದರು. ಬಳಿಕ ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ವಿಟ್ಲ, ಅಲಿ ಮತ್ತು ಹಮೀದ್ ಕೊಡಂಗಾಯಿ ಮತ್ತಿತರರು ಬಾಲಕೃಷ್ಣರ ಮೃತದೇಹ ಮೇಲಕ್ಕೆತ್ತಿದ್ದಾರೆ. ಮೃತ ಬಾಲಕೃಷ್ಣರವರು ಅವಿವಾಹಿತರಾಗಿದ್ದರು, ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಘಟನಾ ಸ್ಥಳಕ್ಕೆ ವಿಟ್ಲ ಎಸ್.ಐ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿಗಳು ಆಗಮಿಸಿ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.