Breaking News

ಬೈಕ್‌ಗಳ ಡಿಕ್ಕಿ: ಓರ್ವ ಗಂಭೀರ; ಇನ್ನೋರ್ವ ಚಿಂತಾಜನಕ

Puttur_Advt_NewsUnder_1
Puttur_Advt_NewsUnder_1

6-1 6-2

ಅಪಘಾತದಿಂದ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರರು ಗಾಯಗೊಂಡು ಬಿದ್ದಿದ್ದರೂ ಹೆದ್ದಾರಿಯಲ್ಲಿ ಸಾಗುವ ವಾಹನಗಳು ನಿಲ್ಲಿಸದೇ ಇದ್ದುದರಿಂದ ಕೆಲ ಕಾಲ ಅವರು ರಸ್ತೆಯಲ್ಲೇ ಹೊರಳಾಡಿಕೊಂಡು ಇರಬೇಕಾಯಿತು. ಬಳಿಕ ಅಲ್ಲಿಗೆ ಬಂದ ಕೆಲವರು ತಕ್ಷಣವೇ ಉಪ್ಪಿನಂಗಡಿ ಡಿವಿಜನ್‌ನ ಕೆಸಿಎಫ್ ಆಂಡ್ ಎಸ್ಸೆಸ್ಸೆಫ್‌ನ ಆಂಬುಲೆನ್ಸ್‌ಗೆ ಫೋನಾಯಿಸಿದ್ದು, ಸ್ಥಳಕ್ಕೆ ಬಂದ ಆಂಬುಲೆನ್ಸ್ ಚಾಲಕ ದಾವೂದ್ ಸರಳೀಕಟ್ಟೆ ಅವರು ಗಾಯಾಳುಗಳನ್ನು ಹಾಕಿಕೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರು. ಕೆಸಿಎಫ್ ಆಂಡ್ ಎಸ್ಸೆಸ್ಸೆಫ್‌ನ ಆಂಬುಲೆನ್ಸ್ ಸೇವೆ ಉಚಿತವಾಗಿದ್ದು, ಇವರ ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ.
ಉಪ್ಪಿನಂಗಡಿ: ಬೈಕ್‌ಗಳೆರಡು ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಿನಂಗಡಿಯ ಕುಮಾರಧಾರ ಸೇತುವೆಯ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಕರಾಯದ ನಿಝಾಮ್ (32) ಹಾಗೂ ಉಪ್ಪಿನಂಗಡಿ ಬಳಿಯ ಬಿಳಿಯೂರು ತೋಟ ನಿವಾಸಿ ಶಶಿಧರ್ (28) ಗಾಯಗೊಂಡ ಬೈಕ್ ಸವಾರರು. ಇವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಓರ್ವ ಬೈಕ್ ಸವಾರ 34ನೇ ನೆಕ್ಕಿಲಾಡಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಬರುತ್ತಿದ್ದರೆ, ಇನ್ನೊಬ್ಬ ಬೈಕ್ ಸವಾರ ಕುಮಾರಧಾರದ ಹಳೆ ಸೇತುವೆ ರಸ್ತೆಯಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಬಂದಾಗ ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಬೈಕ್ ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಸ್ತೆ: ಕುಮಾರಧಾರದ ಹಳೆಯ ಸೇತುವೆಯ ರಸ್ತೆಗಿಂತ ಕುಮಾರಧಾರ ನದಿಯ ಈಗಿನ ಸೇತುವೆಯಲ್ಲಿ ಹಾದು ಹೋಗುವ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಎತ್ತರದ ಪ್ರದೇಶದಲ್ಲಿದ್ದು, ಹಳೆ ಸೇತುವೆ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವವರು ಅತೀ ವೇಗದಿಂದ ಒಮ್ಮೆಲೆ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವರಿಗೆ ಈ ರಸ್ತೆಯಲ್ಲಿ ಬರುವ ವಾಹನಗಳು ಕಾಣಿಸದೇ ಇರುವುದರಿಂದ ಇಂತಹ ಸಂದರ್ಭದಲ್ಲಿ ಇಲ್ಲಿ ಹೆಚ್ಚಾಗಿ ಅಪಘಾತಗಳು ನಡೆಯುತ್ತವೆ. ಈ ಮೊದಲು ಇಲ್ಲಿ ಎರಡು ಜೀವಹಾನಿ ಕೂಡಾ ಸಂಭವಿಸಿವೆ. ಆದ್ದರಿಂದ ಹಳೆ ಸೇತುವೆ ರಸ್ತೆಯಿಂದ ಅತೀ ವೇಗದಲ್ಲಿ ಹೆದ್ದಾರಿಗೆ ವಾಹನಗಳು ನುಸುಳದಂತೆ ಈ ಸಂಪರ್ಕ ರಸ್ತೆಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸುವುದು ಒಳಿತೆಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.