Breaking News

ರಾಮಕುಂಜ: ಅಕ್ರಮ ಪ್ರವೇಶಮಾಡಿ ಜೀವಬೆದರಿಕೆ-ಆರೋಪಿಗೆ ಜಾಮೀನು

Puttur_Advt_NewsUnder_1
Puttur_Advt_NewsUnder_1

 

 

 

 

ಪುತ್ತೂರು: ರಾಮಕುಂಜದಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ಸೆಲೂನ್ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಜೀವಬೆದರಿಕೆ ಒಡ್ಡಿದ್ದ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದು ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.
ಅ.26ರಂದು ರಾಮಕುಂಜದಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ಸುಲೈಮಾನ್‌ರವರ ಪುತ್ರ ಮಹಮ್ಮದ್ ಎಂಬವರು ಶರತ್ ಭಂಡಾರಿಯವರ ಸೆಲೂನ್‌ಗೆ ಅಕ್ರಮವಾಗಿ ಪ್ರವೇಶ ಮಾಡಿ ಜೀವ ಬೆದರಿಕೆಯೊಡ್ಡಿರುವುದಾಗಿ ಶರತ್ ಭಂಡಾರಿಯವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಬಿ.ಎಸ್ ಮಹಮ್ಮದ್‌ರವರು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ಆರೋಪಿ ಪರ ವಕೀಲರಾದ ಪ್ರಶಾಂತ್ ರೈ ಪುಣ್ಚಪ್ಪಾಡಿ, ಹರಿಪ್ರಸಾದ್ ರೈ ಅಜ್ಜಿಕಲ್ಲು ವಾದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.