ತಾ.ಪಂ. ಸಾಮರ್ಥ್ಯ ಸೌಧದಲ್ಲಿ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಣೆ

Puttur_Advt_NewsUnder_1
Puttur_Advt_NewsUnder_1

tpಒಟ್ಟು 99 ಸಾಧನ ಸಲಕರಣೆ ವಿತರಣೆ
28 ವೀಲ್ ಚಯರ್‌ಗಳು, 11 ಸೈಕಲ್‌ಗಳು, 48 ಶ್ರವಣ ಸಾಧನಗಳು, 8ವಾಕಿಂಗ್ ಸ್ಟಿಕ್ ಸೇರಿದಂತೆ ಒಟ್ಟು 99 ಸಾಧನ ಸಲಕರಣೆ ವಿತರಣೆ ಮಾಡಲಾಯಿತು.

ಪುತ್ತೂರು: ರೂರಲ್ ಇಲೆಕ್ಟ್ರಿಫಿಕೇಶನ್ ಕಾರ್ಪೋರೇಶನ್ ಸಹಯೋಗದೊಂದಿಗೆ ಕೇಂದ್ರ ಸರಕಾರದ ಆಧೀನದಲ್ಲಿರುವ ಆರ್ಟಿಫೀಶಿಯಲ್ ಲಿಂಬಾಸ್ ಮ್ಯಾನ್ಯುಫೆಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾದ ವತಿಯಿಂದ ಅಂಗವಿಕಲರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಅ.27ರಂದು ಇಲ್ಲಿನ ತಾ.ಪಂ ಸಾಮರ್ಥ್ಯ ಸೌಧದಲ್ಲಿ ವಿತರಣೆ ಮಾಡಲಾಯಿತು.
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದರವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಾಧನ ಸಲಕರಣೆಗಳನ್ನು ವಿತರಣೆ ಮಾಡಿ ಕಾರ‍್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ರಾಧಾಕೃಷ್ಣ ಬೋರ್ಕರ್, ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್. ಎಸ್, ರೂರಲ್ ಇಲೆಕ್ಟ್ರಿಫಿಕೇಶನ್ ಕಾರ್ಪೋರೇಶನ್ ಸಂಸ್ಥೆಯ ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಮೋನಿತ್ ಅಗರ್‌ವಾಲ್, ಮ್ಯಾನ್ಯುಫ್ಯಾಕ್ಚರಿಂಗ್ ಮಾಡಿದ ಪ್ರವೀಣ್ ಮಿಶ್ರ ಮತ್ತು ಸ್ಮತಿ ಮಲ್ಲಿಕ್, ವಿಕಲಚೇತನರ ಪುನರ್‌ಅಭಿವೃದ್ಧಿ ಕಾರ್ಯಕರ್ತ ನವೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 34 ನೆಕ್ಕಿಲಾಡಿಯ ಎಆರ್‌ಡಬ್ಲ್ಯೂ ಶೇಷಪ್ಪ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.