ಪಟ್ಟೆ ಪ್ರತಿಭಾ ಪ್ರೌಢಶಾಲಾ ಬೆಳ್ಳಿಹಬ್ಬ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆ

Puttur_Advt_NewsUnder_1
Puttur_Advt_NewsUnder_1

patte

  • ದ.4: ಹಿರಿಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ
  • ನ. 27: ಗುಂಪು ಸ್ಪರ್ಧೆ
  • 2ನೇ ಹಂತದ ಸಭೆ

ಬಡಗನ್ನೂರು: ಪಟ್ಟೆ ಪ್ರತಿಭಾ ಪ್ರೌಢ ಶಾಲಾ ಬೆಳ್ಳಿ ಹಬ್ಬದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳ ಸಭೆಯು ಅ.23ರಂದು ಸಂಘದ ಅಧ್ಯಕ್ಷ ಪ್ರದೀಪ್ ಪಿ.ಆರ್. ರವರ ಅಧ್ಯಕ್ಷತೆಯಲ್ಲಿ ಪಟ್ಟೆ ಪ್ರತಿಭಾ ಪ್ರೌಢ ಶಾಲೆಯಲ್ಲಿ ನಡೆಯಿತು.
ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸುಮಾನ ಬೆಳ್ಳಿ ಹಬ್ಬದ ಕುರಿತು ಸಮಿತಿ ಮೂರು ಹಂತದ ಸಭೆಯಲ್ಲಿ ಕೈಗೊಂಡ ನಿರ್ಣಯ ಹಾಗೂ ಪ್ರಗತಿ ಬಗ್ಗೆ ತಿಳಿಸಿದರು.
ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಾತನಾಡಿ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಕಾರ ಅತೀ ಅಗತ್ಯ. ೨ದಿವಸ ನಡೆಯುವ ಕಾರ್ಯಕ್ರಮಕ್ಕೆ ಕೆಲವು ಸಮಿತಿಯಲ್ಲಿ ಜವಾಬ್ದಾರಿ ನೀಡಿಲಾಗಿದೆ. ಇದನ್ನು ನಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ವಿನಂತಿಸಿದರು.
ಬೆಳ್ಳಿ ಹಬ್ಬ ಸಂಭ್ರಮಕ್ಕೆ ಹಿರಿಯ ವಿದ್ಯಾರ್ಥಿಗಳಿಂದ ಹೆಚ್ಚು ಅಪೇಕ್ಷಿಸುತ್ತಾರೆ ಕೇವಲ ಅಧ್ಯಕ್ಷರು ಮಾತ್ರ ಇದ್ದರೆ ಸಾಧ್ಯವಿಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಆಗ ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಅಭಿಪ್ರಾಯ ತಿಳಿಸಿದರು. ಸಭೆಯಿಂದ ಕೆಲವೊಂದು ಸಲಹೆ ಸೂಚನೆ ಪಡೆಯಲಾಯಿತು.
ಬೆಳ್ಳಿ ಹಬ್ಬದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಅಯೋಜಿಸಿದ್ದು ಈ ಬಗ್ಗೆ ಗುಂಪು ಸ್ಪರ್ಧೆಗಳನ್ನು ನವಂಬರ್ 27ರಂದು ನಡೆಸಲು ತಿರ್ಮಾನಿಸಲಾಯಿತು.
ಪುರುಷರಿಗೆ-ಹಗ್ಗಜಗ್ಗಾಟ,ಕಬಡ್ಡಿ,ಕ್ರಿಕೆಟ್ ಮಹಿಳೆಯರಿಗೆ-ತ್ರೋಬಾಲ್, ಹಗ್ಗಜಗ್ಗಾಟ ಮತ್ತು ಸಂಗೀತ ಕುರ್ಚಿ ಸ್ಪರ್ಧೆ ನಡೆಸಲು ನಿರ್ಧರಿಸಲಾಯಿತು ಮತ್ತು ಕ್ರೀಡಾಕೂಟ ಡಿಸೆಂಬರ್ ೪ರಂದು ನಡೆಸುವ ಬಗ್ಗೆ ತಿಳಿಸಲಾಯಿತು. ೨ನೇ ಹಂತದ ಸಭೆಯನ್ನು ನ.೨೭ರಂದು ನಡೆಸಲು ನಿರ್ಧರಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ, ಪ್ರತಿಭಾ ಪ್ರೌಢ ಶಾಲಾ ಸಹ ಶಿಕ್ಷಕಿ ಭವಿತಾ, ಉಪಸ್ಥಿತರಿದ್ದರು. ಸಭೆಯಲ್ಲಿ ಸಂಜೀವ ಎಸ್, ಶ್ರೀನಿವಾಸ ಪಿ.ಆರ್, ಕಿಶೋರ್, ವೆಂಕಟ್ರಮಣ ಗೌಡ,ಪುರುಷೋತ್ತಮ,ಅನಿಲ್ ಸಂದೇಶ ರೈ ರವೀಂದ್ರ, ಜಗನ್ನಾಥ ಗೌಡ,ಅಶ್ರಫ್, ರಾಹುಲ್ ಕೆ.ಬಿ, ಮುರಳೀ ಪ್ರಕಾಶ್, ಲಿಂಗಪ್ಪ ಗೌಡ, ಮೋಹಿತ್,ಬಾಲಚಂದ್ರ, ಶಶಿಧರ ಭಾಗವಹಿಸಿದರು.
ಶ್ರೀಕೃಷ್ಣ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.