Breaking News

ಆಮ್ ಆದ್ಮಿ ಗ್ರಾಮ ಸುಧಾರಣಾ ಸಭೆ; ಕರ್ವೇಲು- ಶಾಂತಿನಗರ ರಸ್ತೆ ದುರಸ್ತಿಗೆ ಒತ್ತಾಯಿಸಲು ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

15ಉಪ್ಪಿನಂಗಡಿ: ಆಮ್ ಆದ್ಮಿ ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಗ್ರಾಮ ಸುಧಾರಣಾ ಸಭೆ ಅ.24ರಂದು ಬಿಳಿಯೂರು ಗ್ರಾಮದ ಕರ್ವೆಲ್‌ನಲ್ಲಿ ನಡೆಯಿತು.
ಪಕ್ಷದ ಮುಖಂಡ ಆನಂದ ಗೌಡ ರಾಮಕುಂಜ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗ್ರಾಮದ ಸಮಸ್ಯೆಗಳ ಪಟ್ಟಿ ಮಾಡಲಾಯಿತು. ಈ ಪೈಕಿ ಕರ್ವೇಲು-ಶಾಂತಿನಗರ ರಸ್ತೆ ತೀರಾ ಹದಗೆಟ್ಟಿದ್ದು ವಾಹನದಲ್ಲಿ ಓಡಾಡಲು, ನಡೆದುಕೊಂಡು ಹೋಗಲು ಕಷ್ಟಸಾಧ್ಯವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸದ್ರಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಮನವಿ, ಪ್ರತಿಭಟನೆ ನಡೆಸುವ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಲಾಯಿತು. ಇದರ ಅಧ್ಯಕ್ಷರಾಗಿ ಶಬ್ಬೀರ್, ಉಪಾಧ್ಯಕ್ಷರಾಗಿ ಜಯರಾಮ್, ಕಾರ್ಯದರ್ಶಿಯಾಗಿ ಸುನೀಲ್ ರಾಜ್, ಖಜಾಂಜಿಯಾಗಿ ಅಬೂಬಕ್ಕರ್, ಸಂಘಟನಾ ಕಾರ್ಯದರ್ಶಿಗಳಾಗಿ ಕಬೀರ್ ಕರ್ವೇಲ್, ಮುಜ್ಹಾಮಿಲ್, ಇರ್ಷಾದ್, ರಾಜೇಶ್, ಕರೀಮ್, ಅಫ್‌ನನ್, ಹಿರಿಯ ಸಲಹೆಗಾರರಾಗಿ ದೇವಕಿ, ಸೀತಾರಾಮ, ಸದಸ್ಯರನ್ನಾಗಿ ನವ್ಹಾಜ್, ಗಣೇಶ್ ಯಾನೆ ಸೀತಾರಾಮ, ನವಾಜ್ ನೆಕ್ಕಿಲಾಡಿ, ಜನೈದ್‌ರನ್ನು ಆಯ್ಕೆ ಮಾಡಲಾಯಿತು. ಸದ್ರಿ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಸಮಿತಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಲು ತೀರ್ಮಾನಿಸಲಾಯಿತು. ಮನವಿಗೆ ಸ್ಪಂಧನೆ ಸಿಗದೇ ಇದ್ದಲ್ಲಿ ಪತ್ರಿಕಾಗೋಷ್ಠಿ, ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಆಮ್ ಆದ್ಮಿ ಪಕ್ಷದ ಮುಖಂಡರಾದ ಮ್ಯಾಕ್ಸಿಂ ಲೋಬೋ ಸ್ವಾಗತಿಸಿದರು. ಕಾರ್ಯದರ್ಶಿ ಕಬೀರ್ ಕರ್ವೇಲ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.