ಅ.29,30: ಸಾಲ್ಮರ ನವಭಾರತ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸಾಲ್ಮರ ಕ್ರೀಡೋತ್ಸವ 2016-17

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನವಭಾರತ್ ಸ್ಪೋರ್ಟ್ಸ್ ಕ್ಲಬ್ ಸಾಲ್ಮರ ಇದರ ಆಶ್ರಯದಲ್ಲಿ 3ನೇ ವರ್ಷದ ಸಾಲ್ಮರ ಕ್ರೀಡೋತ್ಸವ-2016  ಅ.29 ಮತ್ತು ಅ.30 ರಂದು ಸಾಲ್ಮರ ಮೌಂಟನ್‌ವ್ಯೂ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭ ಅ.29 ರಂದು ಬೆಳಿಗ್ಗೆ ನವಭಾರತ್ ಸ್ಪೋರ್ಟ್ಸ್ ಕ್ಲಬ್ ಇದರ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಖಾದರ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಗರಸಭಾ ಸದಸ್ಯ ಅನ್ವರ್ ಖಾಸಿಂ ಸಾಲ್ಮರ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.  ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅ.30ರಂದು ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭದಲ್ಲಿ ನಗರಸಭಾ ಮಾಜಿ ಸದಸ್ಯ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಠಾಣಾ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಗ್ರಾಮಾಂತರ ಠಾಣಾ ಎಸ್‌ಐ ಅಬ್ದುಲ್ ಖಾದರ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ನವಭಾರತ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಜುನೈದ್ ಸಾಲ್ಮರ ಹಾಗು ಕ್ರೀಡೋತ್ಸವ ಸಮಿತಿ ಅಧ್ಯಕ್ಷ ಖಾಸಿಂ ಕೆರೆಮೂಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಗಳು

 ಕ್ರಿಕೆಟ್,ವಾಲಿಬಾಲ್, ಸಂಗೀತಕುರ್ಚಿ, ಕಬಡ್ಡಿ, ಓಟ, ಹಗ್ಗಜಗ್ಗಾಟ ಮತ್ತು ಇತರ ಸ್ಪರ್ಧೆಗಳು ನಡೆಯಲಿದೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.