Breaking News

‘ರೈತರ ಸಮಸ್ಯೆಗೆ ಹೇಗೆ ನ್ಯಾಯ ಒದಗಿಸಬಹುದು’ ಬಿಜೆಪಿ ರೈತ ಮೋರ್ಛಾ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ

Puttur_Advt_NewsUnder_1
Puttur_Advt_NewsUnder_1

16ಯಡಿಯೂರಪ್ಪ ನೇತೃತ್ವದಲ್ಲೇ ಪರಿಹಾರ – ಸಂಜೀವ ಮಠಂದೂರು
ಪುತ್ತೂರು: ಜಿಲ್ಲೆಯಲ್ಲಿ ಶೇ.65 ಮಂದಿ ಕೃಷಿಯನ್ನೇ ಅವಲಂಭಿಸಿದ್ದಾರೆ. ಆದರೆ ಕೃಷಿಕರು ರಾಜ್ಯ ಸರಕಾರದ ಕೆಲವೊಂದು ನೀತಿಯಿಂದಾಗಿ ಶೋಚನೀಯ ಸ್ಥಿತಿಯಲ್ಲಿದ್ದಾರೆ ಇಂತಹ ಸಂದರ್ಭದಲ್ಲಿ ರೈತರ ಸಮಸ್ಯೆಗೆ ಬಿಜೆಪಿ ಹೇಗೆ ನ್ಯಾಯ ಒದಗಿಸಬಹುದು ಎಂದು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅ.28ರಂದು ನಡೆದ ಬಿಜೆಪಿ ಪುತ್ತೂರು ಮಂಡಲದ ರೈತ ಮೋರ್ಛಾದ ಕಾರ್ಯಾಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು.
ಯಡಿಯೂರಪ್ಪ ನೇತೃತ್ವದಲ್ಲೇ ಪರಿಹಾರ: ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ ಇಂದು ಅತ್ಯಧಿಕ ಸಮಸ್ಯೆ ಇರುವ ಕ್ಷೇತ್ರ ರೈತ ಕ್ಷೇತ್ರ, ಅತ್ಯಧಿಕ ಹೋರಾಟ ನಡೆದ ಕ್ಷೇತ್ರವೂ ರೈತ ಕ್ಷೇತ್ರ. ಗೋಲಿಬಾರ್ ನಡೆದಿದ್ದೂ ರೈತ ಹೋರಾಟದಿಂದ. ರಾಜ್ಯ ಸರಕಾರದ ಧೋರಣೆಯಿಂದಾಗಿ ಗ್ರಾಮಾಂತರದಿಂದ ರೈತರು ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ. ಮತ್ತೊಂದು ಕಡೆ ರೈತರ ಸಾಲ ಮನ್ನ ಮಾಡಿಲ್ಲ. ಅಡಿಕೆ ಧಾರಣೆಯನ್ನು ಕೇಳುವರಿಲ್ಲ. ಮರಳು, ಬೋರ್‌ವೆಲ್‌ಗೆ ಕಡಿವಾಣ ಹಾಕುವ ಮೂಲಕ ರಾಜ್ಯದ ಜನತೆ ಮತ್ತು ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಛಾ ಏನು ಮಾಡಬಹುದು ಮತ್ತು ಹೇಗೆ ಪರಿಹಾರ ಕಂಡು ಕೊಳ್ಳಬಹುದು ಎಂಬ ಪ್ರಶ್ನೆ ಮೂಡಬಹುದು. ಆದರೆ ನಿಜ ಅರ್ಥದಲ್ಲಿ ರೈತ ಪರ ಹೋರಾಟ ಮಾಡುವ ಯಡಿಯೂರಪ್ಪ ನೇತೃತ್ವದಲ್ಲೇ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದರು. ರಾಜ್ಯ ಸರಕಾರವನ್ನು ತೊಲಗಿಸುವ ಕೆಲಸ ಆಗಬೇಕಾಗಿದೆ. ಕೇವಲ ಸರಕಾರದ ವಿರುದ್ಧ ಹೋರಾಟ ಮಾತ್ರವಲ್ಲ. ರೈತರ ಕಣ್ಣೀರು ಒರೆಸುವ ಕೆಲಸವನ್ನೂ ಮಾಡಬೇಕಿದೆ ಎಂದು ಮಠಂದೂರು ಹೇಳಿದರು.
ಬಿಜೆಪಿ ಪುತ್ತೂರು ಮಂಡಲದ ರೈತ ಮೋರ್ಛಾ ಅಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೈತ ಮೋರ್ಛಾದ ಜಿಲ್ಲಾ ಅಧ್ಯಕ್ಷ ರಾಜೀವ ಭಂಡಾರಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಕಾರ್ಯದರ್ಶಿ ಶಂಭು ಭಟ್, ರೈತ ಮೋರ್ಛಾದ ಮಂಡಲದ ಪ್ರಧಾನ ಕಾರ್‍ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಜಿಲ್ಲಾ ಕಾರ್ಯರ್ಶಿ ರಾಘವೇಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೈತ ಮೋರ್ಛಾದ ವಿವಿಧ ಸಮಿತಿಯ ಪದಾಧಿಕಾರಿಗಳಾದ ಬಿ.ಸುರೇಶ್, ಕೆ.ಪದ್ಮನಾಭ, ಗಂಗಾಧರ ಕೆ.ಎಂ, ಮೋಹನ್ ಗೌಡ ಕೆದಿಲ, ನಾಗೇಶ್ ರಾವ್, ಕೆ, ಚಂದ್ರನ್ ತಲೆಪ್ಪಾಡಿ, ಬಿ.ರಾಜೇಂದ್ರ ರೈ, ಡಿ.ವಿಶ್ವನಾಥ ಶೆಟ್ಟಿ, ಸೀತಾರಾಮ, ರಾಮಯ್ಯ ಗೌಡ ಬೊಳ್ಳಾಡಿ, ರವಿಶಂಕರ ಶರ್ಮ, ಶೇಖರ ಗೌಡ ಪೆರಿಯಡ್ಕ, ಕೆ.ಮಾಧವ ಗೌಡ ಕಾಂತಿಲ, ಸಂಜೀವ ಪೂಜಾರಿ, ಬಾಲಚಂದ್ರ, ಯು.ಉದಯ, ಸಂತೋಷ್ ಕುಮಾರ್ ಪಿ. ಸಭೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.