Breaking News

‘ಸಮಾನ ಶಿಕ್ಷಣಕ್ಕೆ ಜಯಕರ್ನಾಟಕ ಬೆಂಬಲ’ ಮೊಟ್ಟೆತ್ತಡ್ಕ ಅಂಗನವಾಡಿ ಕೇಂದ್ರ ಪುನರಾರಂಭ

Puttur_Advt_NewsUnder_1
Puttur_Advt_NewsUnder_1

14

ಅಂಗನವಾಡಿ ಶಾಲೆಗೆ ಮುಂದಿನ ದಿನಗಳಲ್ಲಿ ಮಕ್ಕಳ ಹೆಚ್ಚಿನ ಅನುಕೂಲಕ್ಕಾಗಿ ಅಂಗನವಾಡಿ ಮುಂಭಾಗದಲ್ಲಿ ಶೀಟ್ ಅಳವಡಿಸಬೇಕೆಂಬ ಮಕ್ಕಳ ಮನವಿಗೆ ಕೂಡಲೇ ಸ್ಪಂದಿಸಿದ ಮೊಟ್ಟೆತ್ತಡ್ಕ ಜಯಕರ್ನಾಟಕ ಪುರುಷರ ಘಟಕ ರೂ,5 ಸಾವಿರ ಮೊತ್ತದ ದೇಣಿಗೆಯನ್ನು ನೀಡುವುದಾಗಿ ಘೋಷಿಸಿದೆ.
ಪುತ್ತೂರು: ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು. ಜಾತಿ, ಪಕ್ಷ, ಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದಲ್ಲಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಎಲ್ಲರಿಗೂ ಸಮಾನ ಶಿಕ್ಷಣ ವಿಚಾರದಲ್ಲಿ ಜಯಕರ್ನಾಟಕ ಸಂಘಟನೆ ಸದಾ ಬೆಂಬಲ ನೀಡುತ್ತದೆ ಎಂದು ಜಯಕರ್ನಾಟಕ ತಾಲೂಕು ಕಾರ್ಯದರ್ಶಿ ರಫೀಕ್ ಎಂ.ಕೆರವರು ಹೇಳಿದರು.
ನೆಲ ದುರಸ್ತಿಗೊಳಿಸಿ, ಇದೀಗ ಪುನರಾರಂಭಗೊಂಡ ಮೊಟ್ಟೆತ್ತಡ್ಕ ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜಯಕರ್ನಾಟಕ ಸಂಸ್ಥಾಪಕರಾದ ಮುತ್ತಪ್ಪ ರೈರವರು ಸರ್ವರಿಗೂ ಸಮಾನ ಶಿಕ್ಷಣ ಸಿಗಬೇಕೆಂದು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಮಕ್ಕಳು ದೇವರ ಸಮಾನ. ಮಕ್ಕಳಲ್ಲಿ ಯಾವುದೇ ಕಪಟತನ ಇರುವುದಿಲ್ಲ. ನಾವೂ ಮಕ್ಕಳಂತೆ ನಿಸ್ವಾರ್ಥಿಗಳಾಗಿ ಜೀವಿಸಬೇಕು ಮತ್ತು ಶಿಕ್ಷಣಕ್ಕೆ ಪ್ರತಿಯೊಬ್ಬರೂ ಮಹತ್ವ ನೀಡುತ್ತಾ ಪ್ರೋತ್ಸಾಹ ಕೊಡುವಂತಾಗಬೇಕು ಎಂದರು.
ಸ್ಥಳೀಯ ನಗರಸಭಾ ಸದಸ್ಯೆ ಹಾಗೂ ಅಂಗನವಾಡಿ ಸಮನ್ವಯ ಸಮಿತಿ ಅಧ್ಯಕ್ಷೆ ಶೈಲಾ ಪೈರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪೋಷಕರ, ದಾನಿಗಳ ಹಾಗೂ ಸಂಘಟನೆಗಳ ನೆರವಿನಿಂದ ಇಲ್ಲಿನ ಅಂಗನವಾಡಿ ಕೇಂದ್ರದ ದುರಸ್ತಿ ಕಾರ್ಯ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲೂ ಎಲ್ಲರ ಸಹಕಾರ ನಿರಂತರ ಸಿಗಲಿ ಎಂದು ಆಶಿಸಿದರು.
ಜಯಕರ್ನಾಟಕ ಮೊಟ್ಟೆತ್ತಡ್ಕ ಪುರುಷರ ಘಟಕದ ಅಧ್ಯಕ್ಷ ದಿಲೀಪ್ ಕುಮಾರ್‌ರವರು ಮಾತನಾಡಿ, ನಗರಸಭಾ ಸದಸ್ಯೆ ಶೈಲಾ ಪೈರವರ ಜೊತೆ ಮುಂದೆಯೂ ಹಲವಾರು ಸಾಮಾಜಿಕ, ಶೈಕ್ಷಣಿಕ ವಿಚಾರದಲ್ಲಿ ನಾವು ಸಹಕಾರ ನೀಡಲಿzವೆ. ಅಜ್ಞಾನದಿಂದ ಸುಜ್ಞಾನದೆಡೆಗೆ ನಾವು ಸಾಗಬೇಕಿದೆ ಎಂದರು.
ಜಯಕರ್ನಾಟಕ ಮೊಟ್ಟೆತ್ತಡ್ಕ ಪುರುಷರ ಘಟಕದ ಗೌರವಾಧ್ಯಕ್ಷ ವೇಣುಗೋಪಾಲ ಗೌಡರವರು ಮಾತನಾಡಿ, ಅಂಗನವಾಡಿ ಕೇಂದ್ರವು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಶಿಕ್ಷಣ ನೀಡುವ ಮೂಲಕ ಬದುಕಿಗೆ ಅರ್ಥ ಕೊಡುವವರು ಅಂಗನವಾಡಿ ಶಿಕ್ಷಕಿಯರು. ಅಂಗನವಾಡಿ ಕೇಂದ್ರವು ಬಾಣಂತಿಯರಿಗೂ ಸರಕಾರದಿಂದ ಕೆಲವು ಸಹಾಯ ಲಭಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.
ಜಯಕರ್ನಾಟಕ ಮೊಟ್ಟೆತ್ತಡ್ಕ ಪುರುಷರ ಘಟಕದ ಉಪಾಧ್ಯಕ್ಷ ಅಬ್ದುಲ್ಲ ಕೆ, ಕಾರ್ಯದರ್ಶಿ ವಿಶ್ವಜಿತ್ ಅಮ್ಮುಂಜ, ಸಂಚಾಲಕ ಯಶವಂತ ಪೆರಾಜೆ, ನ್ಯಾಯಬೆಲೆ ಅಂಗಡಿ ಮಾಲಕ ಅಬ್ದುಲ್ಲ, ಸ್ಥಳೀಯ ಕೊರಗಜ್ಜ ದೈವಸ್ಥಾನದ ದರ್ಶಿ ಮಣಿ, ಪ್ರಮೋದ ರೈ ಮಿಶನ್‌ಮೂಲೆ, ಮಕ್ಕಳ ಹೆತ್ತವರು, ಪೋಷಕರು, ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಹೇಮಲತಾ ಸ್ವಾಗತಿಸಿ, ಸಹಾಯಕಿ ಜ್ಯೋತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.