Breaking News

ಕಾಡು ಹಂದಿಯಿಂದ ಬೆಳೆಹಾನಿ ಸಂಭವಿಸಿದಲ್ಲಿ ಬೇಟೆಯಾಡಲು ಶರತ್ತು ಬದ್ದ ಅನುಮತಿ

Puttur_Advt_NewsUnder_1
Puttur_Advt_NewsUnder_1

18

ಪಾಲಿಸಬೇಕಾದ ಕಟ್ಟುನಿಟ್ಟಿನ ಅಂಶಗಳು:  * ಕಾಡು ಹಂದಿಗಳು ರೈತರ ಜಮೀನಿಗೆ ದಾಳಿ ಮಾಡಿ ಬೆಳೆಹಾನಿ ಉಂಟು ಮಾಡಿದಲ್ಲಿ ಪರವಾನಿಗೆ ಹೊಂದಿರುವ ಬಂದೂಕಿನಿಂದ ಅಥವಾ ಬೇರೆ ಆಯುಧದಿಂದ ರೈತರ ಜಮೀನಿನ ಸ್ಥಳದಲ್ಲೇ ಬೇಟೆಯಾಡಲು ಅನುಮತಿ * ಬಂದೂಕಿನಿಂದ ಅಥವಾ ಇನ್ಯಾವುದೇ ಆಯುಧದಿಂದ ಬೇಟೆಯಾಡಿದ ಕಾಡು ಹಂದಿಯನ್ನು ಜೀವಂತವಾಗಲೀ ಅಥವಾ ಮೃತಹೊಂದಿದ ದೇಹವನ್ನಾಗಲಿ 24 ಗಂಟೆಯ ಒಳಗಾಗಿ ಹತ್ತಿರದ ಅರಣ್ಯ ಕಚೇರಿಗೆ ಹಸ್ತಾಂತರಿಸಬೇಕು * ಬೇಟೆಗಾಗಿ ಉಪಯೋಗಿಸಿದ ಆಯುಧವನ್ನು ಪ್ರಾಧಿಕಾರದ ಮುಂದೆ 2ಸಾಕ್ಷಿಗಳೊಂದಿಗೆ 24 ಗಂಟೆಯೊಳಗಾಗಿ ಹಾಜರುಪಡಿಸಬೇಕು * ಕಾಡು ಹಂದಿಯನ್ನು ಬೇಟೆಯಾಡಿದಲ್ಲಿ, ಸಂಬಂಧಪಟ್ಟ ಉಪ ವಲಯ ಅರಣ್ಯಾಧಿಕಾರಿಗಳು ಕನಿಷ್ಠ 2 ಸಾಕ್ಷಿಗಳೊಂದಿಗೆ ಮಹಜರು ನಡೆಸಬೇಕು * ಸತ್ತ ಕಾಡು ಹಂದಿಯ ಮಾಂಸವನ್ನು ಆಹಾರವನ್ನಾಗಿ ಅಥವಾ ಇನ್ಯಾವುದೇ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ. * ಸತ್ತ ಕಾಡು ಹಂದಿಯ ದೇಹವನ್ನು ಭೂಮಿಯಲ್ಲಿ 3 ಅಡಿ ಒಳಗೆ ಹೂಳತಕ್ಕದ್ದು ಅಥವಾ ಸುಡತಕ್ಕದ್ದು * ಕಾರ್ಯಾಚರಣೆ ಸಂದರ್ಭದಲ್ಲಿ ಕಾಡು ಹಂದಿಯು ಕಾಡಿನೊಳಗೆ ತಪ್ಪಿಸಿಕೊಂಡಲ್ಲಿ ಅದನ್ನು ಹಿಂಬಾಲಿಸತಕ್ಕದ್ದಲ್ಲ ಮತ್ತು ಬೇಟೆಯಾಡುವಂತಿಲ್ಲ. * ಸತ್ತ ಕಾಡು ಹಂದಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಯೇ ಕಡ್ಡಾಯವಾಗಿ ಹೂಳತಕ್ಕದ್ದು ಅಥವಾ ಸುಡತಕ್ಕದ್ದು * ತನ್ನ ಮರಿಯ ಜೊತೆಗಿರುವ ಕಾಡು ಹಂದಿಯನ್ನು ಅಥವಾ ಹಾಲುಣಿಸುತ್ತಿರುವ ಕಾಡುಹಂದಿಯನ್ನು ಬೇಡೆಯಾಡತಕ್ಕದ್ದಲ್ಲ * ಇಂತಹ ಪ್ರಕರಣಗಳ ಬಗ್ಗೆ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಕೂಡಲೇ ವರದಿ ಮಾಡುವುದು

ಪುತ್ತೂರು: ಕಾಡು ಹಂದಿಗಳಿಂದ ರೈತರ ಜಮೀನಿನಲ್ಲಿ ಬೆಳೆಹಾನಿ ಸಂಭವಿಸಿದ್ದಲ್ಲಿ ಕೇರಳ ಮಾದರಿಯಲ್ಲಿ ಕಾಯ್ದೆಯನ್ನು ಜಾರಿ ಮಾಡಿ ಬೇಟೆಯಾಲು ವನ್ಯ ಜೀವಿ ಸಂರಕ್ಷಣಾ ಇಲಾಖೆ ಬೆಂಗಳೂರು ಆದೇಶ ಮಾಡಿದೆ. ಆದರೆ ಕೆಲವೊಂದು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.
ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ನಿಯಮ 11(1) ಬಿಯಲ್ಲಿ ಯಾವುದೇ ವನ್ಯ ಪ್ರಾಣಿಯು ಮನುಷ್ಯನ ಪ್ರಾಣಕ್ಕೆ ಅಥವಾ ಸ್ವತ್ತಿಗೆ ತೊಂದರೆ ನೀಡಿದಾಗ ಅಥವಾ ಅದು ಚೇತರಿಸಿಕೊಳ್ಳಲಾಗದಷ್ಟು ಅಶಕ್ತವಾಗಿದೆಯೆಂದು ಅಥವಾ ರೋಗಗ್ರಸ್ಥರಾಗಿದೆಯೆಂದು ಮುಖ್ಯ ವನ್ಯಜೀವಿ ಪ್ರತಿಪಾಲಕನಿಗೆ ಮನದಟ್ಟದಾರೆ ಆ ಕಾರಣಗಳನ್ನು ನಮೂದಿಸಿ ಅಂತಹ ಪ್ರಾಣಿಗಳನ್ನು ಬೇಟೆಯಾಡಲು ಅನುಮತಿ ಕೊಡಬಹುದು. ಕೇರಳ ರಾಜ್ಯದಲ್ಲಿ ಕಾಡುಹಂದಿಯನ್ನು ವನ್ಯಜೀವಿ ಕಾಯ್ದೆಯ ಷೆಡ್ಯೂಲಿನಿಂದ ಹೊರ ತೆಗೆದಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರಕಾರವು ಸಹ ಕಾಡು ಹಂದಿಯನ್ನು ಷೆಡ್ಯೂಲ್ ಪಟ್ಟಿಯಿಂದ ತೆಗೆದು ಹಾಕುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಈ ಕುರಿತು ಮುಖ್ಯಮಂತ್ರಿಗಳು ಪರಿಶೀಲನೆಗಾಗಿ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದ್ದರು. ಕೇರಳ ರಾಜ್ಯದಲ್ಲಿ ಕಾಡು ಹಂದಿಯ ಹಾವಳಿಯ ಕುರಿತು ಅಧ್ಯಯನದ ಸಮಿತಿ ನೀಡಿರುವ ಸಲಹೆ ಸೂಚನೆಗಳ ಮೇರೆಗೆ ಕಾಡು ಹಂದಿಯನ್ನು ಬೇಟೆ ಮಾಡಲು ರಾಜ್ಯದಲ್ಲೂ ಶರತ್ತುಬದ್ಧ ಅನುಮತಿ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.