Breaking News

‘ನಮಗೂ ವೇತನ ಶ್ರೇಣಿ ಶಿಫಾರಸ್ಸು ಮಾಡಿ’ ಶರವೂರು ದೇವಾಲಯದ ಸಿಬ್ಬಂದಿಗಳಿಂದ ಸಚಿವ ರೈಯವರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

sharavuruಆಲಂಕಾರು: ಎ ಗ್ರೇಡ್ ದೇವಸ್ಥಾನವಾಗಿರುವುದರಿಂದ ವೇತನ ಶ್ರೇಣಿಯ ಬಗ್ಗೆ ಶಿಫಾರಸು ಮಾಡುವಂತೆ ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಿಬ್ಬಂದಿಗಳು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರಿಗೆ ಮನವಿ ಮಾಡಿದ್ದಾರೆ.
ಪುತ್ತೂರು ತಾಲೂಕಿನ ‘ಎ’ ಗ್ರೇಡ್ ದೇವಸ್ಥಾನಗಳಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೌಕರರಿಗೆ ಈಗಾಗಲೇ ವೇತನ ಶ್ರೇಣಿ ಮಂಜೂರಾಗಿದೆ. ಅದೇ ರೀತಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ‘ಎ’ ಗ್ರೇಡ್ ದೇವಸ್ಥಾನವಾಗಿದ್ದು, ಅದೇ ವೇತನ ಶ್ರೇಣಿ ನಮಗೂ ಮಂಜೂರಾಗುವಂತೆ ಶಿಫಾರಸ್ಸು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. ಪ್ರಸ್ತುತ ಸರಕಾರದಿಂದ ವೇತನ ಶ್ರೇಣಿಯ ಬಗ್ಗೆ ಪ್ರಸ್ತಾವನೆಯಲ್ಲಿದ್ದು ಈ ಪ್ರಸ್ತಾವನೆಯನ್ನು ತಾವು ಶಿಫಾರಸ್ಸುಗೊಳಿಸಿ ನಮಗೆ ಆದಷ್ಟು ಬೇಗನೇ ವೇತನ ಶ್ರೇಣಿ ಮಂಜೂರುಗೊಳಿಸಿ ಕೊಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ನೌಕರರಾದ ಹರಿಪ್ರಸಾದ್ ಉಪಾಧ್ಯಾಯ, ರಾಘವೇಂದ್ರ ಭಟ್, ಶ್ರೀಧರ ಆಚಾರ್ಯ, ಜಯಂತ ಕುಮಾರ್, ಮಂಜುನಾಥ್ ದೇವಾಡಿಗ, ಶ್ರೀಮತಿ ಹೊನ್ನಮ್ಮ, ನೋಣಯ್ಯ ಮಡಿವಾಳರವರು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.