Breaking News

ಹಿಂದೂ ಜಾಗರಣ ವೇದಿಕೆ ಪುತ್ತೂರು ನಗರ ಸಮಿತಿ: ಅಧ್ಯಕ್ಷ: ಕೃಷ್ಣಪ್ರಸಾದ್ , ಸಂಚಾಲಕ: ಶಶಿಕಾಂತ್

Puttur_Advt_NewsUnder_1
Puttur_Advt_NewsUnder_1

hinduಪುತ್ತೂರು: ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಬಜದಗುತ್ತು ನಿವಾಸಿ, ಗುತ್ತಿಗೆದಾರ ಕೃಷ್ಣಪ್ರಸಾದ್, ಗೌರವಾಧ್ಯಕ್ಷರಾಗಿ ಪ್ರಕಾಶ್ಚಂದ್ರ ಮುಗೇರುಗುತ್ತು, ಸಂಚಾಲಕರಾಗಿ ಪುತ್ತೂರು ಕೋರ್ಟ್‌ರೋಡ್ ನಿವಾಸಿ ಶಶಿಕಾಂತ್, ಕಾರ್ಯದರ್ಶಿಯಾಗಿ ಗೀತೇಶ್ ಮಡಪ್ಪಾಡಿರವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಮಧ್ಯ ಕ್ಷೇತ್ರೀಯ ಬೈಠಕ್‌ನಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್‌ರವರು ತಾಲೂಕು ನಗರ ಘಟಕದ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು. ನಗರ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಉದಯ ಸರ್ವೆ, ಹೋರಾಟ ಪ್ರಮುಖ್ ಆಗಿ ಪುಷ್ಪರಾಜ್ ದರ್ಬೆ, ಸಹ ಸಂಚಾಲಕರಾಗಿ ಗಿರೀಶ್ ಕೆರೆಮೂಲೆ, ರಾಜು ಪಾಂಗ್ಳಾಯಿ, ಮನೀಶ್ ಪುತ್ತೂರು, ಬಾಲಕೃಷ್ಣ ಪುತ್ತೂರುರವರನ್ನು ಆಯ್ಕೆ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.