ಉಪ್ಪಿನಂಗಡಿ ಜೇಸಿಐಗೆ ಅತ್ಯುತ್ತಮ ಪಬ್ಲಿಕ್ ರಿಲೇಶನ್ ಪ್ರೋಗ್ರಾಂ ವಿನ್ನರ್ ಅವಾರ್ಡ್

Puttur_Advt_NewsUnder_1
Puttur_Advt_NewsUnder_1

uppiಉಪ್ಪಿನಂಗಡಿ: ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ಜೇಸಿಐ ವಲಯ 15ರ ಪ್ರತಿಷ್ಠಿತ ಘಟಕಗಳಲ್ಲೊಂದಾದ ಜೇಸಿಐ ಉಪ್ಪಿನಂಗಡಿ ಘಟಕವು ಉಡುಪಿಯಲ್ಲಿ ನಡೆದ ರಜತ ವೈಭವ ವಲಯ ಸಮ್ಮೇಳನ-2016ರಲ್ಲಿ ಅತ್ಯುತ್ತಮ ಪಬ್ಲಿಕ್ ರಿಲೇಶನ್ ಪ್ರೋಗ್ರಾಂ ವಿನ್ನರ್ ಆವಾರ್ಡ್ ಸಹಿತ ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿದೆ.
ಈ ಅವಾರ್ಡ್‌ನ ಜತೆಗೆ ಅತ್ಯುತ್ತಮ ಲೋಕಲ್ ಆರ್ಗನೈಜೇಶನ್ ರನ್ನರ್ ಅವಾರ್ಡ್, ಸಿಲ್ವರ್ ಲೋಮ್ ಅವಾರ್ಡ್ ಪಡೆದುಕೊಂಡಿದೆ. ಜೇಸಿಐ ಭಾರತದ ನಿರ್ದೇಶನದಂತೆ ಜೇಸಿಐ ಇಂಡಿಯಾ ಪೌಂಢೇಶನ್‌ಗೆ ದೇಣಿಗೆ, ಘಟಕ ವಿಸ್ತರಣೆ ಮೊದಲಾದ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ವಲಯದ ವಿವಿಧ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಜತೆಗೆ ವಲಯಾಧ್ಯಕ್ಷ ಸಂದೀಪ್ ಕುಮಾರ್ ಅವರು ಘೋಷಿಸಿರುವ ಸಿಲ್ವರ್ ಲೋಮ್ ಅವಾರ್ಡ್ ನೀಡಿ ಕ್ಲಬ್‌ನ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಪ್ರಶಾಂತ್‌ಕುಮಾರ್ ರೈ, ಉಪ್ಪಿನಂಗಡಿ ಜೇಸಿಐನ ಪೂರ್ವಾಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ, ರವೀಂದ್ರ ದರ್ಬೆ, ಹರೀಶ್ ನಟ್ಟಿಬೈಲು, ಜಯಾನಂದ ಕಲ್ಲಾಪು, ಸದಸ್ಯರಾದ ನಂದನ್‌ಕುಮಾರ್, ಸುಚಿತ್‌ರಾಜ್, ಅನೂಪ್ ಸಿಂಗ್, ದೀಪಕ್, ಶಿವಕುಮಾರ್ ಬಾರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.