Breaking News

ಕಾವು: ನನ್ಯ ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ

Puttur_Advt_NewsUnder_1
Puttur_Advt_NewsUnder_1

nanya

ಪುತ್ತೂರು: ಮಾಡ್ನೂರು ಗ್ರಾಮದ ನನ್ಯ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಪ್ರಾತ್ಯಕ್ಷಿತೆ ಸಪ್ತಾಹವು ಇತ್ತೀಚೆಗೆ ನಡೆಯಿತು.  ಅಂಗನವಾಡಿ ಮೇಲ್ವಿಚಾರಕಿ ವಿಜಯಲಕ್ಷ್ಮೀಯವರು ಮಹಿಳೆಯರಿಗೆ ಆರೋಗ್ಯದ ಬಗ್ಗೆ, ಪರಿಸರ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಸಮನ್ವಯ ಸಮಿತಿ ಅಧ್ಯಕ್ಷೆ ನವೀನ ಬಿ.ಡಿ ಪಂಚಾಯತ್‌ನಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆ ಉಷಾರವರು ಕೈತೊಳೆಯುವ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಸಪ್ತಾಹದಲ್ಲಿ ೧೫ ಮಹಿಳೆಯರು ವಿವಿಧ ಬಗೆಯ ಪೌಷ್ಠಿಕ ಆಹಾರ ತಯಾರಿಸಿ ತಂದು ಅದರಲ್ಲಿರುವ ಪೌಷ್ಠಿಕಾಂಶದ ಬಗ್ಗೆ ಅವರೇ ಮಾಹಿತಿ ನೀಡಿದರು. ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಬಹುಮಾನ ನೀಡಲಾಯಿತು. ನನ್ಯ ಪರಿಸರ ಸಮಿತಿಯ ಗೌರವಾಧ್ಯಕ್ಷ ಐತ್ತಪ್ಪ ಗೌಡ ಮಂಜಲ್ತಡ್ಕರವರು ಬಹುಮಾನದ ಪ್ರಾಯೋಜಕತ್ವ ನೀಡಿದರು. ಅವರಿಗೆ ಅಂಗನವಾಡಿಯ ಪರವಾಗಿ ಧನ್ಯವಾದ ನೀಡಲಾಯಿತು.

ವೇದಿಕೆಯಲ್ಲಿ ಹಿರಿಯ ನಾಗರಿಕೆ ದೇವಮ್ಮ ಉಪಸ್ಥಿತರಿದ್ದರು. ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಕಾರ್ಯಕರ್ತೆ ಸೀತಾರತ್ನ ಸ್ವಾಗತಿಸಿ ವಂದಿಸಿದರು. ಸಹಾಯಕಿ ಶಾರದಾ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.