ಅ.31: ಉಪ್ಪಿನಂಗಡಿ ಪ.ಪೂ.ಕಾಲೇಜಿನ ಪದವೀಧರ ಶಿಕ್ಷಕ ಕೆ.ಸುಬ್ರಹ್ಮಣ್ಯ ಭಟ್ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1

subramanya-bhat_2

ಉಪ್ಪಿನಂಗಡಿ: ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ ಪದವೀಧರ ಶಿಕ್ಷಕ(ಕನ್ನಡ)ಕೆ.ಸುಬ್ರಹ್ಮಣ್ಯ ಭಟ್‌ರವರು ಅ.31ರಂದು ಕರ್ತವ್ಯದಿಂದ ನಿವೃತ್ತರಾಗಲಿದ್ದಾರೆ.

ಸುಬ್ರಹ್ಮಣ್ಯ ಭಟ್‌ರವರು ಒಟ್ಟು 36 ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ೨೩-೯-೧೯೮೦ರಂದು ಸುಳ್ಯ ತಾಲೂಕಿನ ಕೊಡಿಯಾಲ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ಸರಕಾರಿ ಕರ್ತವ್ಯಕ್ಕೆ ಇವರು ಹಾಜರಾಗಿದ್ದರು. ಇಲ್ಲಿ ೭ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಬಳಿಕ ಬೆಳ್ಳಾರೆ ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿದ್ದರು. ಇಲ್ಲಿ ೫ ವರ್ಷ ಕರ್ತವ್ಯ ನಿರ್ವಹಿಸಿ ನಂತರ ಬಲ್ನಾಡು ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ೩ ವರ್ಷ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಪುತ್ತೂರು ನೆಲ್ಲಿಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ೫ ವರ್ಷ ಪದವೀಧರ ಪ್ರಭಾರ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಸೇವಾ ಮುಂಬಡ್ತಿ ಪಡೆದುಕೊಂಡು ೨೦-೧೧-೨೦೦೦ಕ್ಕೆ ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಪದವೀಧರ(ಕನ್ನಡ)ಶಿಕ್ಷಕರಾಗಿ ವರ್ಗಾವಣೆಗೊಂಡಿದ್ದರು. ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನಲ್ಲಿ ೧೬ ವರ್ಷಗಳ ಕಾಲ ಇವರು ಕರ್ತವ್ಯ ನಿರ್ವಹಿಸಿದ್ದು ಅ.೩೧ರಂದು ನಿವೃತ್ತರಾಗುತ್ತಿದ್ದಾರೆ. ೩೬ ವರ್ಷಗಳ ಕರ್ತವ್ಯದ ಅವಧಿಯಲ್ಲಿ ಸುಬ್ರಹ್ಮಣ್ಯ ಭಟ್‌ರವರು ಟಿಎಸಿ ಕಾರ್ಯದರ್ಶಿಯಾಗಿ, ಸ್ಕೂಲ್ ಕಾಂಪ್ಲೆಕ್ಸ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ನೆಲ್ಲಿಕಟ್ಟೆ ಪ್ರೌಢಶಾಲೆಯಲ್ಲಿ ಪದವೀಧರ ಪ್ರಭಾರ ಮುಖ್ಯಶಿಕ್ಷಕರಾಗಿದ್ದ ವೇಳೆ ಪ್ರೌಢಶಾಲೆ ಆರಂಭಗೊಂಡಿತ್ತು.

ಕೇರಳದ ಕಾಸರಗೋಡಿನ ಪೆರ್ಲ ಕೆ.ಸುಬ್ರಹ್ಮಣ್ಯ ಭಟ್‌ರವರ ಹುಟ್ಟೂರು ಆಗಿದ್ದು, ಬೆಳ್ಳಾರೆಯಲ್ಲಿ ನೆಲೆಸಿ ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಇದೀಗ ಇವರು ಪುತ್ತೂರು ದರ್ಬೆಯ ವಿದ್ಯಾನಗರದಲ್ಲಿ ವಾಸ್ತವ್ಯವಿದ್ದಾರೆ. ಇವರ ಪತ್ನಿ ಶ್ರೀಮತಿ ಪ್ರಸನ್ನ ಗೃಹಿಣಿಯಾಗಿದ್ದು ಪುತ್ರ ಕಿರಣ್ ಕೆ.ಎಸ್.,ರವರು ಕರ್ನಾಟಕ ಬ್ಯಾಂಕ್‌ನ ಕೊಳ್ಳೇಗಾಲ ಶಾಖೆಯಲ್ಲಿ ಮೇನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.