ಕೆ.ಎಸ್.ಆರ್.ಟಿ.ಸಿ ಡಿಪೋದ ಒಳಗೆ ಬಂದು ಚಾಲಕನಿಗೆ ಹಲ್ಲೆ-ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಕ್ರಂಪಾಡಿಯ ಕೆಎಸ್‌ಆರ್‌ಟಿಸಿ ಬಸ್ ಡಿಪೋದ ಒಳಗೆ ಬಂದ ನಾಲ್ಕು ಜನ ಅಪರಿಚಿತರು ಬಸ್ ಚಾಲಕನಿಗೆ ಹಲ್ಲೆ ಮಾಡಿ ಬೆದರಿಕೆಯೊಡ್ಡಿರುವುದಾಗಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.28ರಂದು ಸಂಜೆ ವೇಳೆ ಕೆ.ಎಸ್.ಆರ್.ಟಿ.ಸಿ ರಾಜಹಂಸ ಬಸ್ ಚಾಲಕ, ನೆಲ್ಯಾಡಿ ಪದಡ್ಕ ನಿವಾಸಿ ಪ್ರಶಾಂತ್ ಜೆ(36ವ)ರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ೞನಾನು ಮುಕ್ರಂಪಾಡಿ ಡಿಪೋದಲ್ಲಿ ಹಣವನ್ನು ಕ್ಯಾಶ್ ಕೌಂಟರ್‌ನಲ್ಲಿ ಕಟ್ಟುತ್ತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ಕು ಜನರ ತಂಡವೊಂದು ನನಗೆ ಹಲ್ಲೆ ನಡೆಸಿದ್ದಲ್ಲದೆ ನೀನು ಚಲಾಯಿಸಿದ ರಾಜಹಂಸ ಬಸ್‌ನ್ನು ನಮ್ಮ ಬೈಕ್‌ಗೆ ತಾಗಿಸಿ ಬಳಿಕ ಬಸ್ ನಿಲ್ಲಿಸದೇ ಬಂದಿದ್ದಿ. ಗಾಯಾಳುವಿಗೆ ನೀನು ಹಣ ಕೊಡಬೇಕು ಇಲ್ಲವಾದರೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿದ್ದಾರೆೞ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸರಕಾರಿ ನೌಕರನ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಈ ಕೃತ್ಯವನ್ನು ಮಾಡಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.