ತಿಂಗಳಾಡಿ ಶಾಲಾ ದೈ.ಶಿ.ಶಿ.ನಯನ ವಿ.ರೈ ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1

11ಪುತ್ತುರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ, ಪ್ರಭಾರ ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಯನ ವಿ.ರೈಯವರು ಅ.31 ರಂದು ಕರ್ತವ್ಯದಿಂದ ನಿವೃತ್ತಿಯಾಗುತ್ತಿದ್ದಾರೆ. 1985 ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ ಇಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗಿ ಬಳಿಕ1987ರಿಂದ 2016 ರ ತನಕ ತಿಂಗಳಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದರು.ತಿಂಗಳಾಡಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ೞಜನಮೆಚ್ಚಿದ ಶಿಕ್ಷಕಿೞ ಮತ್ತು ಜಿಲ್ಲಾ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಇದಲ್ಲದೆ ನರ್ತನ ಚತುರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಡಿನಾಡು ಕನ್ನಡಿಗ ಪ್ರಶಸ್ತಿ, ಸುಮಸೌರಭ ಪ್ರಶಸ್ತಿಗಳು ಸೇರಿದಂತೆ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಹೆಗ್ಗಳಿಕೆ ಇವರದ್ದಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪದಡ್ಕದಲ್ಲಿರುವ ವಿಶ್ವಕಲಾನಿಕೇತನ ನೃತ್ಯ ಶಾಲೆಯ ಹಿರಿಯ ನೃತ್ಯ ಶಿಕ್ಷಕಿಯಾಗಿ ಸಾವಿರಾರು ಮಕ್ಕಳನ್ನು ಕಲಾವಿದರಾಗಿ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.ನಯನ ವಿ.ರೈಯವರು ಕರ್ನಾಟಕ ಕಲಾಶ್ರೀ, ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈಯವರ ಪತ್ನಿ, ಮೇನಾಲ ಆನಂದ ಆಳ್ವ ಮತ್ತು ಡೆಬ್ಬೇಲಿ ವಿಮಲ ಆಳ್ವರ ಪುತ್ರಿಯಾಗಿದ್ದಾರೆ.ವಿದುಷಿ ಸ್ವಸ್ತಿಕ ಆರ್.ಶೆಟ್ಟಿ, ವಿದುಷಿ ಆಸ್ತಿಕ ಎಸ್.ಶೆಟ್ಟಿ ಎಂಬ ಇಬ್ಬರು ಪುತ್ರಿಯರನ್ನು ಪಡೆದಿರುವ ನಯನ ವಿ.ರೈಯವರು ರಾಜ್‌ಕುಮಾರ್ ಶೆಟ್ಟಿ ಮತ್ತು ಸುನೀಲ್ ಶೆಟ್ಟಿ ಎಂಬಿಬ್ಬರು ಅಳಿಯಂದಿರು, ವಿದುಷಿ ಅಕ್ಷಿ ಶೆಟ್ಟಿ, ಸಾಕ್ಷರ್ ಶೆಟ್ಟಿ, ಆಂಗಿಕಾ ಶೆಟ್ಟಿ ಎಂಬ ಮೊಮ್ಮಕ್ಕಳನ್ನು ಹೊಂದಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.