ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢ ಶಾಲಾ ಮುಖ್ಯಗುರು ಸರ್ವೋತ್ತಮ ಬೋರ್ಕರ್‌ಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

12ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ, ಜೀವನ ಮೌಲ್ಯಗಳನ್ನು ಹೇಳಿಕೊಟ್ಟ ಗುರುಗಳು-ವರ್ಷಾ
ಪುತ್ತೂರು: ಮಕ್ಳಳಲ್ಲಿರುವ ಪ್ರತಿಭೆಗಳನ್ನು ಅರಿತುಕೊಂಡು ಆ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಪ್ರೋತ್ಸಾಹ ನೀಡುವ ಮೂಲಕ ನಮಗೆ ಜೀವನ ಮೌಲ್ಯಗಳನ್ನು ಹೇಳಿಕೊಟ್ಟು ಉತ್ತಮ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡಿದ ಗುರುಗಳು ಸರ್ವೋತ್ತಮ ಬೋರ್ಕರ್ ಆಗಿದ್ದಾರೆ. ಅವರು ಕೇವಲ ಪಠ್ಯ ವಿಷಯಗಳಿಗೆ ಮಾತ್ರ ಸೀಮಿತವಾಗದೆ ಕಲೆ, ಕ್ರೀಡೆ, ಸಾಹಿತ್ಯ ಸಾಂಸ್ಕೃತಿಕ ಇತ್ಯಾದಿ ವಿಷಯಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು. ಇಂತಹ ಗುರುಗಳನ್ನು ಪಡೆದ ನಾವುಗಳು ಧನ್ಯ ಎಂದು ಪಂಚಲಿಂಗೇಶ್ವರ ಪ್ರೌಢ ಶಾಲೆಯ 10 ನೇ ವಿದ್ಯಾರ್ಥಿನಿ ಕು.ವರ್ಷಾ ಅಭಿಪ್ರಾಯ ಪಟ್ಟರು.
ಅವರು ಶ್ರೀ ಪಂಚಲಿಂಗೇಶ್ವರ ಶೈಕ್ಷಣಿಕ ಸಂಘ ಈಶ್ವರಮಂಗಲ ಇವರು ಅ. 28 ರಂದು ಪಂಚಲಿಂಗೇಶ್ವರ ಪ್ರೌಢ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡ ಪ್ರೌಢಶಾಲೆಯ ಮುಖ್ಯಗುರು ಸರ್ವೋತ್ತಮ ಬೋರ್ಕರ್‌ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಅನಿಸಿಕೆ ವ್ಯಕ್ತಪಡಿಸಿದರು. ಮತ್ತೋರ್ವ ವಿದ್ಯಾರ್ಥಿ 10 ನೇ ತರಗತಿಯ ಇಬ್ರಾಹಿಂರವರು ಮಾತನಾಡಿ, ಮುಖ್ಯಗುರುಗಳ ಸೃಜನಶೀಲತೆ, ಶಿಸ್ತು, ಸಮಯಪಾಲನೆ ಇವುಗಳು ನಮಗೆ ಆದರ್ಶವಾಗಿದೆ. ಇವರು ಹೇಳಿಕೊಡುತ್ತಿದ್ದ ಗಣಿತ ಪಾಠ ಎಂದಿಗೂ ನಾವು ಮರೆಯುವಂತಿಲ್ಲ. ಇವರ ಸೇವೆ ಕೇವಲ ಶಿಕ್ಷಕನಿಗೆ ಮಾತ್ರ ಸೀಮಿತವಾಗಿಲ್ಲ. ಅವರೊಬ್ಬ ಆದರ್ಶ ಗುರುಗಳು ಎಂದು ಹೇಳಿದರು.
ಸಭಾಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪುರುಷೋತ್ತಮ ಪುಣ್ಚಿತ್ತಾಯರವರು ಮಾತನಾಡಿ, ಶಿಕ್ಷಕನಿಗೆ ಪಶ್ಚಾತ್ತಾಪ ಇರಬಾರದು, ಪಶ್ಚಾತ್ತಾಪ ಇಲ್ಲದ ಶಿಕ್ಷಕ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬಲ್ಲವನಾಗುತ್ತಾನೆ ಎಂದು ಹೇಳಿದರು.ಶ್ರೀ ಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಕುಂಜತ್ತಾಯರವರು ಮಾತನಾಡಿ, ಅಧ್ಯಾಪಕ ವೃತ್ತಿಯು ಎಲ್ಲಾ ವೃತ್ತಿಗಳಿಗಿಂತಲೂ ಶ್ರೇಷ್ಠ ವೃತ್ತಿಯಾಗಿದೆ. ಉಳಿದ ವೃತ್ತಿಗಳಲ್ಲಿ ಅವನ ಕರ್ತವ್ಯದ ಅವಧಿ ಮುಗಿದ ಮೇಲೆ ಅವನನ್ನು ಕೇಳುವವರೆ ಇಲ್ಲ. ಆದರೆ ಶಿಕ್ಷಕ ಎಂದಿಗೂ ಶಿಕ್ಷಕನಾಗಿಯೇ ಇರುತ್ತಾನೆ ಎಂದರು. ಪುತ್ತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ಶ್ರೀಧರ್ ರೈಯವರು ಮಾತನಾಡಿ, ಸಂತೃಪ್ತ ಭಾವನೆಯೊಂದಿಗೆ ನಿವೃತ್ತಿ ಹೊಂದುವುದೇ ಆತ ಕರ್ತವ್ಯದಲ್ಲಿ ಮಾಡಿದ ಶ್ರೇಷ್ಠತೆಯನ್ನು ಹೇಳುತ್ತದೆ ಎಂದರು.
ನಿವೃತ್ತ ಮುಖ್ಯಗುರುಗಳಿಗೆ ಸನ್ಮಾನ: 36 ವರ್ಷಗಳ ಕಾಲ ಶ್ರೀ ಪಂಚಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ನಿವೃತ್ತಿ ಹೊಂದುತ್ತಿರುವ ಸರ್ವೋತ್ತಮ ಬೋರ್ಕರ್‌ರವರನ್ನು ಈ ಸಂದರ್ಭದಲ್ಲಿ ಶಾಲು, ಸ್ಮರಣಿಕೆ, ಫಲಪುಷ್ಪ, ಚಿನ್ನದ ಉಂಗುರು ನೀಡಿ ಗೌರವಿಸಲಾಯಿತು.ಶ್ರೀ ಪಂಚಲಿಂಗೇಶ್ವರ ಶೈಕ್ಷಣಿಕ ಸಂಘದಿಂದ ಮೊದಲ ಸನ್ಮಾನ ನಡೆದರೆ, ಬಳಿಕ ಸಿಬ್ಬಂದಿ ಉಪನ್ಯಾಸ ವೃಂದದಿಂದ, ವಿದ್ಯಾರ್ಥಿಗಳಿಂದ, ರವಿಪ್ರಸಾದ್ ಮಾಣಿಲತ್ತಾಯರಿಂದ, ವಿ.ನಾಗಪ್ಪಯ್ಯ, ನಾರಾಯಣ ಭಟ್, ನರಸಿಂಹ ಭಟ್, ನಾಗಪ್ಪ ಗೌಡ,ಶಿವರಾಮ ಎಚ್.ಡಿ, ಭಕ್ತಕೋಡಿ ಶಾಲಾ ಶಿಕ್ಷಕ ಶ್ರೀನಿವಾಸ್, ಲೋಹಿತಾಶ್ವ ಈಶ್ವರಮಂಗಲ, ಬರೆಕೆರೆ ಸೀತಾರಾಮ ಭಟ್‌ರವರುಗಳಿಂದ ವೈಯುಕ್ತಿಕ ಸನ್ಮಾನ ನಡೆಯಿತು. ಶಿಕ್ಷಕ ಪೂರ್ಣಿಮಾ ರೈ ಸನ್ಮಾನ ಪತ್ರ ವಾಚಿಸಿದರು.
1 ಲಕ್ಷ ರುಪಾಯಿ ಕೊಡುಗೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಸರ್ವೋತ್ತಮ ಬೋರ್ಕರ್‌ರವರು, ನಾನು ಇಲ್ಲಿ 36 ವರ್ಷಗಳ ಕಾಲ ಸರಕಾರದ ಸಂಬಳ ತೆಗೆದುಕೊಂಡು ಕರ್ತವ್ಯ ನಿರ್ವಹಿಸಿದ್ದೇನೆ. ಇದು ಸೇವೆ ಅಲ್ಲ ನಾನು ಮಾಡಿದ ಕರ್ತವ್ಯವಾಗಿದೆ. ಆದ್ದರಿಂದ ನನ್ನ ಜನ್ಮಸ್ಥಳ ಮತ್ತು ಕರ್ಮಸ್ಥಳಕ್ಕೆ ಎಂದಿಗೂ ನಾನು ಋಣಿಯಾಗಿದ್ದೇನೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕುಟುಂಬದ ಪರವಾಗಿ ಸಂಸ್ಥೆಗೆ 1 ಲಕ್ಷ ರುಪಾಯಿ ಮೌಲ್ಯದ ಚೆಕ್ಕನ್ನು ಕೊಡುಗೆಯಾಗಿ ಈ ಸಂದರ್ಭದಲ್ಲಿ ನೀಡಿದರು. ನಾಗಪ್ಪಯ್ಯರವರ ಪುತ್ರ ಪ್ರವೀಣ್‌ಚಂದ್ರರವರು ಕೂಡ ಸಂಸ್ಥೆಗೆ 50 ಸಾವಿರ ರುಪಾಯಿ ದೇಣಿಗೆಯನ್ನು ಈ ಸಂದರ್ಭದಲ್ಲಿ ನೀಡಿದರು. ನಾಗಪ್ಪಯ್ಯರವರು ಈ ದೇಣಿಗೆಯ ಚೆಕ್ಕನ್ನು ಸಂಸ್ಥೆಗೆ ಹಸ್ತಾಂತರಿಸಿದರು. ಪ್ರೌಢ ಶಾಲೆಯ ಮುಖ್ಯಗುರು ವನಿತಾ, ದೈಹಿಕ ಶಿಕ್ಷಣ ಶಿಕ್ಷಕ ಮುರಲಿಮೋಹನ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಭಂಡಾರಿ, ಸುಲೋಚನಾ ಎಸ್.ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾಸಂಸ್ಥೆಯ ಸಂಚಾಲಕ ರವಿಚಂದ್ರ ಆಳ್ವ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ವಿನ್ಯಾಸ್, ಸ್ವಾತಿ, ಜೀವನ್, ಗಿರೀಶ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಕೃಷ್ಣವೇಣಿ ವಂದಿಸಿದರು. ಶಿಕ್ಷಕ ಗೋವಿಂದರಾಜು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.