ಬಿಜೆಪಿ ಯುವ ಮೋರ್ಛಾದ ಕೃಷ್ಣನಗರ ಚಿಕ್ಕಮುಡ್ನೂರು ವಾರ್ಡ್ ಸಮಿತಿ ಅಧ್ಯಕ್ಷ ದಿಲೀಪ್ ನಾಕ್, ಕಾರ್ಯದರ್ಶಿ ರವಿ ಆಚಾರ್ಯ

Puttur_Advt_NewsUnder_1
Puttur_Advt_NewsUnder_1

13ಪುತ್ತೂರು: ಬಿಜೆಪಿ ಯುವ ಮೋರ್ಛಾದ ಕೃಷ್ಣನಗರ ವಾರ್ಡ್ ಸಮಿತಿ ಅಧ್ಯಕ್ಷರಾಗಿ ದಿಲೀಪ್ ನಾಕ್ ಕೃಷ್ಣನಗರ ಮತ್ತು ಪ್ರಧಾನ ಕಾರ್‍ಯದರ್ಶಿಯಾಗಿ ಎಸ್. ರವಿ ಆಚಾರ್ಯ ಕೃಷ್ಣನಗರರವರನ್ನು ಆಯ್ಕೆ ಮಾಡಲಾಗಿದೆ.
ಅ.23ರಂದು ಸಂಜೆ ಸುಂದರ ಪೂಜಾರಿ ಬಡಾವುರವರ ಮನೆಯಲ್ಲಿ ನಡೆದ ಕೃಷ್ಣನಗರ, ಚಿಕ್ಕಮುಡ್ನೂರು ವಾರ್ಡ್ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಬಿಜೆಪಿ ಯುವ ಮೋರ್ಛಾದ ರಾಜ್ಯ ಉಪಾಧ್ಯಕ್ಷ ಶಿವರಂಜನ್, ನಗರ ಮಂಡಲ ಯುವ ಮೋರ್ಛಾದ ಪ್ರಧಾನ ಕಾರ್‍ಯದರ್ಶಿ ಯುವರಾಜ್ ಪೆರಿಯತ್ತೋಡಿ ನೂತನ ಅಧ್ಯಕ್ಷ, ಪದಾಧಿಕಾರಿಗಳನ್ನು ಘೋಷಣೆ ಮಾಡಿದರು, ನಗರ ಮಂಡಲ ಹಿಂದುಳಿದ ಮೋರ್ಛಾ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರ ಮಂಡಲ ಯುವ ಮೋರ್ಛಾದ ಕಾರ್‍ಯದರ್ಶಿ ಶಶಿಧರ್ ನಾಕ್ ಕೃಷ್ಣನಗರ, ಪುತ್ತೂರು ನಗರ ಮಂಡಲ ಸ್ವಚ್ಛತಾ ಆಂದೋಲನದ ಸಂಚಾಲಕ ಲೋಕೇಶ್ ನಾಕ್ ಮತ್ತು ಎಸ್ಟಿ ಮೋರ್ಛಾದ ಮೋಹನ್ ನಾಕ್ ಬಡಾವು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಿತಿ ಉಪಾಧ್ಯಕ್ಷರಾಗಿ ಪ್ರಶಾಂತ್, ಗುರುಪ್ರಸಾದ್ ನಾಕ್, ಕಾರ್ಯದರ್ಶಿಗಳಾಗಿ ಪುಷ್ಪರಾಜ್, ಹರ್ಷಿತ್ ಕೆಮ್ಮಾಯಿ, ಸ್ವಚ್ಛತಾ ಸಂಚಾಲಕರಾಗಿ ರಕ್ಷಿತ್ ನಾಕ್ ಬಡಾವು, ಸದಸ್ಯರಾಗಿ ಪ್ರವೀಣ್ ಗೌಡ ಬಡಾವು, ಉದಯ ಕೆಮ್ಮಾಯಿ, ಗಣೇಶ್ ಕೇಪುಳು, ಗಂಗಾಧರ ಕೇಪುಳು, ಸುರೇಶ್, ಜಿತೇಶ್ ಗೌಡ, ರಂಜಿತ್, ಸುದರ್ಶನ್ ಆಚಾರ್ಯ, ಜಗದೀಶ್, ರಾಘವೇಂದ್ರ ಆಚಾರ್ಯ, ಪ್ರದೀಪ, ಗಣೇಶ್ ಆಚಾರ್ಯರವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.