ಆರ್ಥಿಕ ವ್ಯವಹಾರದಲ್ಲಿ ವಂಚನೆಯಾಗದಂತೆ ಉಪ್ಪಿನಂಗಡಿಯಲ್ಲಿ ನ.3ರಂದು ‘ಆರ್ಥಿಕ ಜನಜಾಗೃತಿ ಅಭಿಯಾನ’ 

Puttur_Advt_NewsUnder_1
Puttur_Advt_NewsUnder_1

16

* ಆರ್‌ಬಿಐ, ಪೊಲೀಸ್ ಇಲಾಖಾ ಆಶ್ರಯ * ಬೀದಿ ನಾಟಕ, ರಸಪ್ರಶ್ನೆ * ವಿಜೇತರಿಗೆ ಬಹುಮಾನ
ಉಪ್ಪಿನಂಗಡಿ: ಸಾರ್ವಜನಿಕರು ಆರ್ಥಿಕ ವ್ಯವಹಾರದಲ್ಲಿ ವಂಚನೆ ಗೊಳಗಾದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನ.3ರಂದು ಉಪ್ಪಿನಂಗಡಿಯಲ್ಲಿ ಱಆರ್ಥಿಕ ಜನಜಾಗೃತಿ ಅಭಿಯಾನೞ ನಡೆಯಲಿದೆ ಎಂದು ಆರ್‌ಬಿಐ ಬೆಂಗಳೂರಿನ ವ್ಯವಸ್ಥಾಪಕ ಕೃಷ್ಣ ದೇಶಪಾಂಡೆ ತಿಳಿಸಿದರು.
ಬುಧವಾರ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ಗೆ ಆಗಮಿಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಇಂದಿನ ದಿನಗಳಲ್ಲಿ ಅಧಿಕ ಬಡ್ಡಿ ಆಮಿಷ ತೋರಿಸಿ, ಮೊಬೈಲ್, ಇಮೇಲ್ ಸಂದೇಶಗಳ ಮೂಲಕ ಬಹುಮಾನದ ಆಸೆ ತೋರಿಸಿ ವಂಚನೆ ನಡೆಸುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ಈ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ನ.2ರಿಂದ5ರವರೆಗೆ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ವಿವಿಧೆಡೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಉಪ್ಪಿನಂಗಡಿಯ ಬಸ್‌ನಿಲ್ದಾಣದಲ್ಲಿ ನ.೩ರಂದು ಸಂಜೆ ೪:೩೦ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಯಕ್ಷಗಾನ, ಬೀದಿ ನಾಟಕ ಹಾಗೂ ರಸಪ್ರಶ್ನೆ ಸ್ಪರ್ಧೆ ಮೂಲಕ ಜಾಗೃತಿ ಮೂಡಿಸಲಾಗುವುದು. ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಉಪಾಧ್ಯಕ್ಷೆ ಹೇಮಲತಾ, ಸದಸ್ಯ ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಕರಣಿಕ ರಮಾನಂದ ಚಕ್ಕಡಿ, ಉಪ್ಪಿನಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್, ಕಾರ್ಯದರ್ಶಿ ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.