ನ.1: ರೈತ ಸಂಘದ ಜಿಲ್ಲಾ ಸಭೆ; ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲು ಜನಾಂದೋಲನ -ಎಲ್ಲಾ ಸಂಘಟನೆಗಳಿಗೂ ಆಹ್ವಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೃಷಿ ಅಭಿವೃದ್ಧಿಯಲ್ಲಿ ಸರಕಾರದ ಕಣ್ಣುತೆರೆಸುವ ನಿಟ್ಟಿನಲ್ಲಿ ಸರಕಾರದ ಎಲ್ಲಾ ಸವಲತ್ತುಗಳು ಸಿಗುವಂತೆ ಮತ್ತು ಗ್ರಾಮೀಣ ಧ್ವನಿಯನ್ನು, ರಾಷ್ಟ್ರೀಯತೆ ಮತ್ತು ಪ್ರಜಾಪ್ರಭುತ್ವದ ಎಲ್ಲಾ ಜನಪರ ಸ್ವರಗಳನ್ನು ಒಂದೇ ವೇದಿಕೆಯಡಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನ.1ರಂದು ರೈತ ಸಂಘದ ಪುತ್ತೂರಿನ ಜಿಲ್ಲಾ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ರವಿಕಿರಣ್ ಪುಣಚ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ದೇಶಿಯ ಕೃಷಿ ಅನುತ್ಪಾದಕ ಕ್ಷೇತ್ರವಾಗಿ ಮಾರ್ಪಾಡುಗೊಂಡಿದ್ದು, ಯುವ ಸಮುದಾಯ ಕೃಷಿ ಕ್ಷೇತ್ರದಿಂದ ಇತರ ಕ್ಷೇತ್ರಗಳಿಗೆ ವಲಸೆ ಹೋಗುತ್ತಿರುವುದರಿಂದ ಭಾರತ ದೇಶ ಆಹಾರಕ್ಕಾಗಿ ಇತರ ದೇಶಗಳನ್ನು ಅವಲಂಬಿಸಬೇಕಾಗಬಹುದು. ಇಂತಹ ಸಂದರ್ಭದಲ್ಲಿ ವಿಧಾನ ಸಭೆ, ವಿಧಾನ ಪರಿಷತ್ತು, ಲೋಕಸಭೆ ಮತ್ತು ರಾಜ್ಯ ಸಭೆಗೆ ಬಹುತೇಕ ಕೈಗಾರಿಕೋದ್ಯಮಿಗಳು ಮತ್ತು ಶ್ರೀಮಂತರಿಗೆ ಅವಕಾಶ ನೀಡುವುದರಿಂದಾಗಿ ಸಾಮಾನ್ಯ ಜನತೆಯ ನೋವಿಗೆ ಸ್ಪಂದಿಸುವ ಜನ ನಾಯಕರ ಆಯ್ಕೆಯಾಗುತ್ತಿಲ್ಲ. ಸರಕಾರದ ಯೋಜನೆಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಇವೆಲ್ಲದರ ಕುರಿತು ಸರಕಾರಕ್ಕೆ ಸೂಕ್ತ ಸಲಹೆಗಳನ್ನು ಚಳುವಳಿಯ ಮೂಲಕ ನೀಡುವ ಸಲುವಾಗಿ ಜನಪರ ಸ್ವರಗಳ ವೇದಿಕೆಯಾಗಿ ರಾಜ್ಯಮಟ್ಟದ ರೈತ ಚಳುವಳಿ, ಜನಪರ ಚಳುವಳಿ, ಕಾರ್ಮಿಕ ಚಳುವಳಿ ಹಾಗೂ ದಲಿತ, ಮಾಧ್ಯಮ ಮಿತ್ರರು, ತಾಂತ್ರಿಕರನ್ನೊಳಗೊಂಡ ಜನಾಂದೋಲನಗಳ ಮಹಾಮೈತ್ರಿಯ ತಾತ್ಕಾಲಿಕ ಸಮಿತಿ ರಚನೆಗೊಂಡಿದ್ದು ಅವರೆಲ್ಲಾ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು, ರಾಜ್ಯದ ಬರ ಮತ್ತು ಅತಿವೃಷ್ಟಿ ನಿರ್ವಹಣೆಗೆ ಸೂಕ್ತ ಕ್ರಮ ಹಾಗೂ ಪರಿಹಾರ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಅಧಿವೇಶನ ಕರೆದು ಕ್ರಮ ಕೈಗೊಳ್ಳಲು ನ.೩ರಂದು ಜಿಲ್ಲೆಯ ೧೨೦ ಶಾಸಕರಿಗೆ ಪತ್ರ ಮುಖೇನ ಮನವಿ ಮಾಡಲಾಗುವುದು ಎಂದರು.

ಬೋರ್‌ವೆಲ್ ದಿಗ್ಬಂಧನಕ್ಕೆ ಖಂಡನೆ

ಜಿಲ್ಲೆಯಲ್ಲಿ ಈ ವರ್ಷ ಮಳೆ ಇನ್ನೂ ಕಡಿಮೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರು ಮತ್ತು ರೈತರ ಕೃಷಿಗಳಿಗೆ ನೀರು ಅಗತ್ಯವಾಗಿದೆ. ಶಾಶ್ವತ ನೀರಿನ ವ್ಯವಸ್ಥೆ ಇಲ್ಲದಿದ್ದ ಪರಿಣಾಮ ಬೋರ್‌ವೆಲ್ ಕೊರೆಯುವ ಅಗತ್ಯತೆ ಇದೆ. ಆದರೆ ವರ್ಷದ ಹಿಂದೆಯೇ ನಮ್ಮ  ಮನವಿಯಂತೆ ೭ ಸಣ್ಣ ಡ್ಯಾಮ್, ೨೮೦ ಚೆಕ್ ಡ್ಯಾಮ್ ನಿರ್ಮಾಣ ಮಾಡಲು ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ. ಆದು ಕಾರ್ಯರೂಪಕ್ಕೆ ಬರುತ್ತಿದ್ದರೆ ಇವತ್ತು ನೀರಿನ ಸಮಸ್ಯೆ ಆಗುತ್ತಿರಲಿಲ್ಲ. ಶಾಶ್ವತ ನೀರು ವ್ಯವಸ್ಥೆ ಮಾಡಿಕೊಡುವ ತನಕ ನೀರಿಗಾಗಿ ಸರಕಾರದ ಯಾವುದೇ ಕಾನೂನು ಉಲ್ಲಂಸಲು ರೈತ ಸಂಘ ಸಿದ್ಧ.

-ರವಿಕಿರಣ್ ಪುಣಚ, ಜಿಲ್ಲಾಧ್ಯಕ್ಷರು

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.