ಕೋಡಿಂಬಾಳ: ಸೀಮಾ ಎಂಟರ್‌ಪ್ರೈಸಸ್‌ನಲ್ಲಿ ದೀಪೋತ್ಸವ ಆಚರಣೆ

Puttur_Advt_NewsUnder_1
Puttur_Advt_NewsUnder_1

19-1 19-2ಕಡಬ ಗ್ರಾ.ಪಂ ಅಧ್ಯಕ್ಷರಿಗೆ ಸನ್ಮಾನ, ಸೀಮಾ ಕನ್‌ಸ್ಟ್ರಕ್ಷನ್ ಕಾರ್ಮಿಕ ಸಹೋದ್ಯೋಗಿಗಳಿಗೆ ದೀಪಾವಳಿ ಕೊಡುಗೆ -ಲಕ್ಕಿ ಕೂಪನ್ ನಗದು ಬಹುಮಾನ ವಿತರಣೆ

ಸನ್ಮಾನ, ಸಹೋದ್ಯೋಗಿಗಳಿಗೆ ಕೊಡುಗೆ  : ಸೀಮಾ ಎಂಟರ್‌ಪ್ರೈಸಸ್ ಹಾಗೂ ಸೀಮಾ ಕನ್‌ಸ್ಟ್ರಕ್ಷನ್ ವತಿಯಿಂದ ಪ್ರತಿವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಸೀಮಾ ಕನ್‌ಸ್ಟ್ರಕ್ಷನ್ ಗುತ್ತಿಗೆದಾರ ಪುತ್ತುಮೇಸ್ತ್ರಿಯವರು ತನ್ನ ಸಹೋದ್ಯೋಗಿ ಕಾರ್ಮಿಕರಿಗೆ 1 ಚೀಲ ಅಕ್ಕಿ, ಬಟ್ಟೆ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಾ ಬರುತ್ತಿದ್ದು ಈ ವರ್ಷವೂ ಎಲ್ಲಾ ತನ್ನೊಂದಿಗೆ ದುಡಿಯುವ ಕಾರ್ಮಿಕ ಸಹೋದ್ಯೋಗಿಗಳಿಗೆ ದೀಪಾವಳಿ ಕೊಡುಗೆ ನೀಡಿದರು, ಅಲ್ಲದೆ ಕಳೆದ 3 ವರ್ಷದಿಂದ ನಡೆಸುತ್ತಾ ಬಂದಿರುವ ಲಕ್ಕಿ ಕೂಪನ್‌ನಲ್ಲಿ ಈ ವರ್ಷ ತನ್ನ ಸಹೋದ್ಯೋಗಿಗಳ ಹೆಸರನ್ನು ಬರೆದು ಚೀಟಿ ಎತ್ತುವ ಮೂಲಕ 10 ಸಾವಿರ ರೂ ನಗದು ಬಹುಮಾನವನ್ನು ಚೆಕ್ ಮೂಲಕ ವಿತರಿಸಿದರು. ಸಭೆಯಲ್ಲಿ ಡ್ರಾ ನಡೆಸಲಾಗಿದ್ದು ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ ಅದೃಷ್ಟ ಚೀಟಿ ಎತ್ತಿದರು. ಕಡಬ ಗ್ರಾಮದ ಅಂಗನಮನೆ ರುಕ್ಮಯ ಪೂಜಾರಿಯವರ ಮಗ ಶೇಖರ ಪೂಜಾರಿಯವರಿಗೆ ಈ ಅದೃಷ್ಟ ಒಲಿದು ಬಂತು. ಸಭೆಯಲ್ಲಿ ಸೀಮಾ ಕನ್‌ಸ್ಟ್ರಕ್ಷನ್ ಗುತ್ತಿಗೆದಾರರ ಸಹೋದ್ಯೋಗಿಯಾಗಿ ಪ್ರಸ್ತುತ ಕಡಬ ಗ್ರಾ.ಪಂ ಅಧ್ಯಕ್ಷರಾಗಿರುವ ಬಾಬು ಮುಗೇರರವರನ್ನು ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ ಅಭಿನಂದನೆ ಸಲ್ಲಿಸಿ, ಕಾರ್‍ಯಕ್ರಮಕ್ಕೆ ಶುಭ ಹಾರೈಸಿದರು.
ಕಡಬ: ಇಲ್ಲಿಯ ಕೋಡಿಂಬಾಳ ಮಣಿಮುಂಡ ಎಂಬಲ್ಲಿರುವ ಸೀಮಾ ಎಂಟರ್‌ಪ್ರೈಸಸ್‌ನಲ್ಲಿ ದೀಪಾವಳಿ ಉತ್ಸವ, ಸನ್ಮಾನ ಕಾರ್ಯಕ್ರಮ, ಹಾಗೂ ಕಾರ್ಮಿಕರಿಗೆ ಅಕ್ಕಿ, ಬಟ್ಟೆ ವಿತರಣಾ ಕಾರ್‍ಯಕ್ರಮ ಅ.30 ರಂದು ನಡೆಯಿತು.
ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣಶೆಟ್ಟಿ ಮಾತನಾಡಿ ಬಹಳ ಶ್ರಮವಹಿಸಿ ದುಡಿದು ಕಷ್ಟದ ದಿನಗಳನ್ನು ನಿಭಾಯಿಸಿಕೊಂಡು ಕಾರ್ಮಿಕರಾಗಿದ್ದ ಪುತ್ತುಮೆಸ್ತ್ರಿಯವರು ಕಟ್ಟಡ ಗುತ್ತಿಗೆದಾರರಾಗಿ ದುಡಿಯುವುದರೊಂದಿಗೆ ತನ್ನೊಂದಿಗೆ ಹಲವು ಮಂದಿ ಸಹೋದ್ಯೋಗಿ ಕಾರ್ಮಿಕರನ್ನು ದುಡಿಸಿಕೊಂಡು ಈ ಭಾಗದ ಹೆಚ್ಚಿನವರ ಮನೆ ಕಟ್ಟಡ, ಉದ್ಯಮ, ಕಟ್ಟಡಗಳನ್ನು ನಿರ್ಮಿಸಿ ಪ್ರತಿ ಒಬ್ಬ ಕಟ್ಟಡ ಮಾಲಕರಿಂದಲೂ ಭೇಷ್ ಎನಿಸಿಕೊಂಡವರು. ಮಾದರಿ ಗುತ್ತಿಗೆದಾರರರಾಗಿ ಎಲ್ಲರೊಂದಿಗೂ ಸಾಮರಸ್ಯದಿಂದ ಸುಖಜೀವನವನ್ನು ನಡೆಸುತ್ತಾ ಬಂದಿರುವ ಪುತ್ತು ಮೇಸ್ತ್ರಿ ಯವರ ಉದಾರ ಕೊಡುಗೆ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಕಡಬ ಅಡಿಕೆ ವರ್ತಕ ಸಂಘದ ಅಧ್ಯಕ್ಷ ಎಸ್. ಅಬ್ದುಲ್ ಖಾದರ್ ಮಾತನಾಡಿ, ಗುಜರಾತಿನಲ್ಲಿರುವ ಕೃಷ್ಣ ಡೈಮಂಡ್ ಫ್ಯಾಕ್ಟರಿಯ ಮಾಲಕನಂತೆ ಸೀಮಾ ಕನ್‌ಸ್ಟ್ರಕ್ಷನ್ ಗುತ್ತಿಗೆದಾರ ಪುತ್ತುಮೆಸ್ತ್ರಿಯವರು ಕೂಡಾ ತನ್ನ ದುಡಿಮೆಯಲ್ಲಿ ಸಹೋದ್ಯೋಗಿ ಕಾರ್ಮಿಕ ಬಂಧುಗಳಿಗೆ ಹಂಚಿಕೊಳ್ಳುವ ಮೂಲಕ ತಾನು ಬೆಳೆಯಬೇಕು ತನ್ನೊಂದಿಗೆ ದುಡಿಯುವ ಎಲ್ಲರೂ ಬೆಳೆಯಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು ತನ್ನ ಉದಾರ ದಾನವನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕಡಬ ಗ್ರಾ.ಪಂ.ನ ಮಾಜಿ ಸದಸ್ಯ ಸತೀಶ್ ನಾಯಕ್ ಮಾತನಾಡಿ, ಇಲ್ಲಿ ಸಾಮರಸ್ಯದ ಸಂಕೇತವಾಗಿ ತನ್ನ ಕಾರ್ಮಿಕ ಸಹೋದ್ಯೋಗಿಗಳನ್ನು ಗುರುತಿಸಿ ಅವರಿಗೆ ಈ ದೀಪಾವಳಿಯ ಶುಭ ಗಳಿಗೆಯಲ್ಲಿ ದುಡಿಮೆಯ ಭಾಗವನ್ನು ಹಂಚುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಸಿದರು.
ಮಾಲೇಶ್ವರ ಶ್ರೀ ಮಹಾಬಲೇಶ್ವರ ಸ್ವಾಮಿ ಮತ್ತು ಶ್ರೀ ವೀರಭಧ್ರ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಕೋಶಾಧಿಕಾರಿ ಸೋಮಪ್ಪ ಕೆ. ಅವರು ಮಾತನಾಡಿ ನಮ್ಮ ನೆರೆಯವರಾದ ಪುತ್ತುಮೇಸ್ತ್ರಿ ಯವರು ತನ್ನ ಎಳೆಯ ಪ್ರಾಯದಿಂದಲೇ ಉತ್ತಮ ಗುಣವುಳ್ಳವರಾಗಿದ್ದು ಯಾರನ್ನು ಕಂಡರೂ ಕರೆದು ಉಪಚರಿಸುವ ವ್ಯಕ್ತಿಯಾಗಿದ್ದಾರೆ. ಈಗ ಸಮಾಜ ಗುರುತಿಸುವ ವ್ಯಕ್ತಿಯಾಗಿರುವುದು ಹೆಮ್ಮೆಯ ವಿಚಾರ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ವಿಶ್ವನಾಥ ರೈಯವರು, ಪ್ರತಿವರ್ಷ ದೀಪಾವಳಿಯಂದು ತಾನು ದುಡಿದು ಸಂಪಾದಿಸಿದ್ದರಲ್ಲಿ ತನ್ನ ದುಡಿಮೆಯಲ್ಲಿ ಪಾಲ್ಗೊಳ್ಳುತ್ತಿರುವ ಸಹೋದ್ಯೋಗಿ ಕಾರ್ಮಿಕ ಬಂಧುಗಳಿಗೆ ಉದಾರ ಕೊಡುಗೆ ನೀಡುತ್ತಿರುವುದು ಒಂದು ಉತ್ತಮ ಸಂಪ್ರದಾಯ ಎಂದರು. ಸೀಮಾ ಕನ್‌ಸ್ಟ್ರಕ್ಷನ್‌ನ ಗುತ್ತಿಗೆದಾರ ಪುತ್ತುಮೆಸ್ತ್ರಿಯವರು ತನ್ನ ಎಲ್ಲ ಸಹೋದ್ಯೋಗಿ ನೌಕರರಿಗೆ ಅಕ್ಕಿ ಬಟ್ಟೆ ಹಾಗೂ ಹಬ್ಬದ ಸ್ವೀಟ್ಸ್ ಹಂಚಿ ಎಲ್ಲರ ಸಹಕಾರ ಸದಾ ಇರಲಿ ಎಂದು ಆಶಿಸಿದರು. ಸೀಮಾ ಎಂಟರ್‌ಪ್ರೈಸಸ್‌ನ ಸಿರಾಜ್ ಅತಿಥಿಗಳನ್ನು ಹಾಗೂ ಗಣ್ಯರನ್ನು ಬರಮಾಡಿ ಕೊಂಡು ಸತ್ಕರಿಸಿದರು.
ಸೀಮಾ ಎಂಟರ್‌ಪ್ರೈಸಸ್ ಸೆರಾಜ್ ಸ್ವಾಗತಿಸಿ, ನಾಸೀರ್ ವಂದಿಸಿದರು ಕುಟ್ರುಪ್ಪಾಡಿ ಗ್ರಾ.ಪಂ. ಸದಸ್ಯ ಶಿವಪ್ರಸಾದ್ ಮೈಲೇರಿ ಕಾರ್‍ಯಕ್ರಮ ನಿರೂಪಿಸಿದರು. ಕಡಬ ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಗೋಪಾಲ ನಾಕ್ ಮೇಲಿನಮನೆ, ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ಮಂಜುನಾಥ ನವಸುಮ, ಗಣೇಶ್ ಟಿಪ್ಪರ್ ಮಾಲಕ ಅನಿಲ್, ಕೆ.ಎಸ್ ಶೆರೀಫ್ ಕೋಡಿಂಬಾಳ, ಕಡಬ ಗ್ರಾ.ಪಂ ಸದಸ್ಯೆ ಇಂದಿರಾ, ಕೃಷ್ಣಪ್ಪ ಮಡಿವಾಳ, ಬಾಲಕೃಷ್ಣ ಗೌಡ ಹೊಸಮನೆ, ಶ್ರೀ ಗಣೆಶ್ ಕೋಲ್ಡ್‌ಹೌಸ್‌ನ ಸೀತಾರಾಮ ಗೌಡ ಸೇರಿದಂತೆ ಹಲವಾರು ಗಣ್ಯರು, ಅತಿಥಿಗಳು ಆಗಮಿಸಿದ್ದರು. ಸಂಸ್ಥೆಯ ಸಹೋದ್ಯೋಗಿಗಳಾದ ಮಹಮ್ಮದ್ ಮೇಸ್ತ್ರಿ, ಸಿರಾಜ್ ಅನೀಶ್, ಅಲ್ತಾಪ್, ನಾಸೀರ್, ಚಂದ್ರ ಅತಿಥಿಗಳಿಗೆ ಹೂ ಗುಚ್ಚನೀಡಿ ಗೌರವಿಸಿದರು. ಸಂಸ್ಥೆಯ ಮಾಲಕ ಪುತ್ತು ಮೇಸ್ತ್ರಿ ಅತಿಥಿಗಳಿಗೆ ಗಣ್ಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿತಿಂಡಿಗಳ ಬಾಕ್ಸ್‌ಗಳನ್ನು ಹಂಚಿದರು. ಕಡಬ ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ಲಪ್ತ ಸಮಯದಲ್ಲಿ ಕಟ್ಟಡ ನಿರ್ಮಾಣ, ಅಲ್ಲದೆ ಕಟ್ಟಡಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳು ಲಭ್ಯವಿದೆ ಎಂದು ಪುತ್ತುಮೇಸ್ತ್ರಿ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.